
ಬೆಂಗಳೂರು,ಫೆ೨೨: ಚೀನಿವಾರ ಪೇಟೆಯಲ್ಲಿ ಮತ್ತೆ ಚಿನ್ನ ಮತ್ತು ಬೆಳ್ಳಿಯ ದರ ಏರಿಕೆಯಾಗಿದೆ.
ಈ ವಾರಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ ೨೮೫ ರೂಪಾಯಿ ಹೆಚ್ಚಳವಾಗಿದೆ. ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿ ಬಹುತೇಕ ಕಡೆ ಬಂಗಾರದ ಬೆಲೆಯಲ್ಲಿ ಏರಿಕೆ ಆಗಿದೆ.
ಬೆಳ್ಳಿ ಬೆಲೆಯೂ ಕೂಡ ಗ್ರಾಂಗೆ ೫ ರೂಪಾಯಿನಿಂದ ೨೦ ರೂವರೆಗೆ ಹೆಚ್ಚಳ ಆಗಿದೆ. ಬೆಂಗಳೂರು ಮೊದಲಾದೆಡೆ ಬೆಳ್ಳಿ ಬೆಲೆ ೫ ರೂ. ಏರಿಕೆಯೊಂದಿಗೆ ೨೭೫ ರೂಪಾಯಿ ಮುಟ್ಟಿದೆ. ಚೆನ್ನೈ ಹಾಗೂ ಇತರೆಡೆ ೨೦ ರೂಪಾಯಿ ಹೆಚ್ಚಳಗೊಂಡು ೨೯೦ ರೂಪಾಯಿ ಮುಟ್ಟಿದೆ.
ಭಾರತದಲ್ಲಿ ಸದ್ಯ ೧೦ ಗ್ರಾಂನ ೨೨ ಕ್ಯಾರಟ್ ಚಿನ್ನದ ಬೆಲೆ ೧,೪೬,೦೦೦ ರುಪಾಯಿ ಇದೆ. ೨೪ ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ ೧,೫೯,೨೮೦ ರುಪಾಯಿ ಆಗಿದೆ.
೧೦೦ ಗ್ರಾಂ ಬೆಳ್ಳಿ ಬೆಲೆ ೨೭,೫೦೦ ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ ೧೦ ಗ್ರಾಮ್ಗೆ ೧,೪೬,೦೦೦ ರುಪಾಯಿ ಆಗಿದೆ. ಬೆಳ್ಳಿ ಬೆಲೆ ೧೦೦ ಗ್ರಾಂಗೆ ೨೭,೫೦೦ ರುಪಾಯಿಯಲ್ಲಿ ಇದೆ.
ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ ೨೯,೦೦೦ ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಫೆಬ್ರುವರಿ ೨೨ಕ್ಕೆ)
೨೪ ಕ್ಯಾರಟ್ ೧ ಗ್ರಾಂ ಚಿನ್ನದ ಬೆಲೆ: ೧೫,೯೨೮ ರೂ.
೨೨ ಕ್ಯಾರಟ್ ೧ ಗ್ರಾಂ ಚಿನ್ನದ ಬೆಲೆ: ೧೪,೬೦೦ ರೂ.
೧೮ ಕ್ಯಾರಟ್ ೧ ಗ್ರಾಂ ಚಿನ್ನದ ಬೆಲೆ: ೧೧,೯೪೬ ರೂ.
ಬೆಳ್ಳಿ ಬೆಲೆ ೧ ಗ್ರಾಂಗೆ: ೨೭೫ ರೂ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ
೨೪ ಕ್ಯಾರಟ್ ೧ ಗ್ರಾಂ ಚಿನ್ನದ ಬೆಲೆ: ೧೫,೯೨೮ ರೂ.
೨೨ ಕ್ಯಾರಟ್ ೧ ಗ್ರಾಂ ಚಿನ್ನದ ಬೆಲೆ: ೧೪,೬೦೦ ರೂ.
ಬೆಳ್ಳಿ ಬೆಲೆ ೧ ಗ್ರಾಂಗೆ: ೨೭೫ ರೂ.




























