
ಕಲಬುರಗಿ,ಮಾ.1-ಆರೋಗ್ಯ ವಿಚಾರಿಸಲು ಬಂದು ಮನೆಯ ಅಲಮಾರಿಯಲ್ಲಿದ್ದ 3.70 ಲಕ್ಷ ರೂ.ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ಕಳವು ಮಾಡಲಾಗಿದೆ ಎಂದು ನಿವೃತ್ತ ಶಿಕ್ಷಕಿಯೊಬ್ಬರು ಇಲ್ಲಿನ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ನಗರದ ನ್ಯೂ ಜೇವರ್ಗಿ ರಸ್ತೆಯ ಮಾಲು ಅಪಾರ್ಟ್ಮೆಂಟ್‌ನಲ್ಲಿ ವಾಸಿಸಿರುವ ನಿವೃತ್ತ ಶಿಕ್ಷಕಿ ಶಕುಂತಲಾ ಬಸವರಾಜ ಅಣವರಕರ್ ಅವರು ದೂರು ಸಲ್ಲಸಿದ್ದು, ಇವರು ಅನಾರೋಗ್ಯದಿಂದ ಬಳಲುತಿದ್ದಾಗ ಇವರ ಆರೋಗ್ಯ ವಿಚಾರಿಸಲೆಂದು ಘಾಟಗೆ ಲೇಔಟ್ ನಿವಾಸಿಯಾದ ನಿವೃತ್ತ ಶಿಕ್ಷಕಿ ಜಯಶ್ರೀ ಸೋಮರಾಯ ಹರವಾಳ ಮತ್ತು ಇವರ ಸಹೋದರಿಯ ಮಗಳು ಅಶೋಕ ನಗರದ ನವ್ಯಾ ತಂದೆ ಸುಭಾಶ್ಚಂದ್ರ ಕೋಳಕರ್ ಅವರು ಮನೆಗೆ ಹೋಗಿದ್ದಾರೆ. ಈ ವೇಳೆ ಶಕುಂತಲಾ ಅವರು ಚಹಾ ಮಾಡಲೆಂದು ಅಡುಗೆ ಮನೆಗೆ ಹೋದಾಗ ಅಲಮಾರಿಯಲ್ಲಿದ್ದ 1.28 ಲಕ್ಷ ರೂ.ಮೌಲ್ಯದ 40 ಗ್ರಾಂ.ಬAಗಾರದ 4 ಬಿಲವಾರ, 1.37 ಲಕ್ಷ ರೂ.ಮೌಲ್ಯದ 43 ಗ್ರಾಂ.ಬAಗಾರದ ತಾಳಿ, 80 ಸಾವಿರ ರೂ.ಮೌಲ್ಯದ 25 ಗ್ರಾಂ.ಬAಗಾರದ ರೂಬಿ ಹರಳುಳ್ಳ ಲಾಕೆಟ್, 17 ಸಾವಿರ ರೂ.ಮೌಲ್ಯದ 5 ಗ್ರಾಂ.ಬAಗಾರದ ಉಂಗುರ, 8 ಸಾವಿರ ರೂ.ಮೌಲ್ಯದ ಬೆಳ್ಳಿಯ ಲಕ್ಷಿö್ಮÃ ಮೂರ್ತಿ ಸೇರಿ 3.70 ಲಕ್ಷ ರೂ.ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣ ಕಳವಾಗಿವೆ ಎಂದು ತಿಳಿದುಬಂದಿದೆ.
ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.



























