
ಕಲಬುರಗಿ,ಮಾ.31-ಮನೆ ಬೀಗ ಮುರಿದು 1.38 ಲಕ್ಷ ರೂ.ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ಕಳವು ಆಭರಣ ಕಳವು ಮಾಡಿರುವ ಘಟನೆ ನಗರದ ಸಾಯಿ ಮಂದಿರ ಸಮೀಪದ ಭಾಗ್ಯಲಕ್ಷ್ಮೀ ನಗರದಲ್ಲಿ ನಡೆದಿದೆ.
ಕಾವೇರಿ ಕಂಬಾನೋರ ಎಂಬುವವರ ಮನೆ ಬೀಗ ಮುರಿದು ಕಳ್ಳರು 80 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಲಾಕೇಟ್, 40 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಉಂಗುರ, 10 ಸಾವಿರ ರೂ.ಮೌಲ್ಯದ 10 ತೊಲೆ ಬೆಳ್ಳಿಯ ಒಂದು ಜೊತೆ ಕಾಲು ಚೈನ, 8 ಸಾವಿರ ರೂ.ಮೌಲ್ಯದ 8 ತೊಲೆಯ ಬೆಳ್ಳಿಯ ಒಂದು ಜೊತೆ ಕಾಲು ಚೈನ ಸೇರಿ 1.38 ಲಕ್ಷ ರೂ.ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ಕಳವು ಮಾಡಿದ್ದಾರೆ.
ಇವರು ಮೊಮ್ಮಗಳಿಗೆ ಆರೋಗ್ಯ ಸರಿ ಇಲ್ಲದ ಕಾರಣ ಮನೆಗೆ ಬೀಗ ಹಾಕಿಕೊಂಡು ಅವಳನ್ನು ಕರೆದುಕೊಂಡು ಜೇವರ್ಗಿ ತಾಲ್ಲೂಕಿನ ಯನಗುಂಟಿ ಗ್ರಾಮಕ್ಕೆ ಹೋಗಿದ್ದಾಗ ಮನೆ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.



























