Home ಜಿಲ್ಲೆ ಕಲಬುರಗಿ ಗಣಜಲಖೇಡ ಕೊಲೆ ಪ್ರಕರಣ:ಗ್ರಾಪಂ ಅಧ್ಯಕ್ಷ ಶ್ರೀಧರ ಸೇರಿ ಮೂವರ ಖುಲಾಸೆ

ಗಣಜಲಖೇಡ ಕೊಲೆ ಪ್ರಕರಣ:ಗ್ರಾಪಂ ಅಧ್ಯಕ್ಷ ಶ್ರೀಧರ ಸೇರಿ ಮೂವರ ಖುಲಾಸೆ

ಕಲಬುರಗಿ,ಮಾ.29: ಇಲ್ಲಿಗೆ ಸಮೀಪದ ಗಣಜಲಖೇಡ ಗ್ರಾಮದಲ್ಲಿ ವ್ಯಕ್ತಿ ಓರ್ವನನ್ನು ಕೊಲೆ
ಮಾಡಿದ್ದಾರೆಂದು ಆರೋಪಿ ಚಾರ್ಜ ಶೀಟ್ ಸಲ್ಲಿಸಲಾಗಿದ್ದ ಪ್ರಕರಣದಲ್ಲಿ ಆಪಾದಿತರಾಗಿದ್ದ ಗಣಜಲಖೇಡ ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಧರ ಪಾಟೀಲ ಹಾಗೂ ಅವರ ತಂದೆ ಮತ್ತು ಸಹೋದರರನ್ನು ಇಲ್ಲಿನ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆಗೊಳಿಸಿ ಶನಿವಾರ ತೀರ್ಪು ನೀಡಿದೆ.
2018 ರ ಆ. 5 ರಂದು ರಂದು ರಾತ್ರಿ 8.31 ಗಂಟೆಗೆ ಕೊಲೆ ಘಟನೆಯಾಗಿತ್ತೆಂದು ಫಿರ್ಯಾದಿಯಲ್ಲಿ
ಆರೋಪಿಸಿದಾಗ ಗ್ರಾಮೀಣ ಪೆÇಲೀಸ ಠಾಣೆಯ ಪೆÇಲೀಸರು ಶ್ರೀಧರ ಪಾಟೀಲ ಹಾಗೂ ಆತನ ತಂದೆ, ಸಹೋದರರ ಮತ್ತು ಆತನ ದೊಡ್ಡಪ್ಪ ಇವರ ಮೇಲೆ ಗುನ್ನೆ ನಂ : 250/2018 ಎಂದು ಗುನ್ನೆ ದಾಖಲಿಸಿ ಮುಂದೆ ಚಾರ್ಟ ಶೀಟ್ ಹಾಕಿದ್ದರು.
ಫಿರ್ಯಾದಿದಾರ ಮಂಜುನಾಥ ಜೇವರ್ಗಿ ಗಣಜಲಖೇಡ್ ಇವರು ಪೆÇಲೀಸರಿಗೆಫಿರ್ಯಾದಿ ಕೊಟ್ಟಿದ್ದರು. ಮಂಜುನಾಥ ಜೇರ್ವಗಿಯವರ ತಂದೆ ಈರಪ್ಪಾ ಅವರಿಗೆ ಆರೋಪಿತರು ಎಲ್ಲರು ಸೇರಿ ಕೊಲೆ ಮಾಡಿದ್ದಾರೆಂದು ಆರೋಪಿಸಿದರು.ಆದರೆ ವಾಸ್ತವಾಗಿ ಮಂಜುನಾಥ ಜೇವರ್ಗಿ ಅವರ ತಾಯಿ ಸರಕಾರದಿಂದ ತನ್ನ ಗಂಡ ಹಮಾಲನೆಂದು(ಕೂಲಿ ಕಾರ್ಮಿಕರ) ಕಾರ್ಮಿಕ ಇಲಾಖೆಗೆ ಪರಿಹಾರ ಕೋರಿ ಅರ್ಜಿಸಿ, ಅದರಲ್ಲಿ ಈರಪ್ಪನು ಸ್ವಾಭಾವಿಕಸಾವನ್ನಪ್ಪಿದ್ದಾನೆಂದು ಹೇಳಿಕೆ ನೀಡಿ ಕಾರ್ಮಿಕ ಇಲಾಖೆಯಿಂದ ಪರಿಹಾರದ ಹಣ ಪಡೆದಿದ್ದರು,
ಇದನ್ನು ಮುಚ್ಚಿಟ್ಟು ಮುಗ್ಧರಾದ ಆರೋಪಿತರ ಮೇಲೆ ಕೊಲೆ ಆರೋಪ ಮಾಡಿದ್ದರು. ಈ ಬಗ್ಗೆ ಪೆÇಲೀಸರು ದಾಖಲಿಸಿದ್ದ ಎಲ್ಲಾಹೇಳಿಕೆಗಳನ್ನು, ಸಾಕ್ಷಿಗಳನ್ನು ಹಾಗೂ ಸಾಕ್ಷಿ ಒಂದಕ್ಕೊಂದು ವ್ಯತಿರಿಕ್ತವಾಗಿದ್ದನ್ನು ಸಹ
ನ್ಯಾಯಾಲಯ ಗಮನಿಸಿ ಆರೋಪಿತರಿಗೆ ಖುಲಾಸೆ ಮಾಡಿ ತೀರ್ಪು ನೀಡಿತು.
ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚನ್ನಪ್ಪಗೌಡ ಅವರು ಶನಿವಾರ ತೀರ್ಪು
ಪ್ರಕಟಿಸಿದರು.ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಹಾಗೂ ರಾಜು ಹಿರೇಮಠ
ವಕಾಲತ್ತು ವಹಿಸಿ ನ್ಯಾಯಾಲಯಕ್ಕೆ ಸತ್ಯವನ್ನು ಮನದಟ್ಟು ಮಾಡಿದ್ದು ಆರೋಪಿತರಿಗೆ ನ್ಯಾಯ
ಸಿಕ್ಕಂತಾಗಿದೆ