ಅಪ್ಪಾಜಿ ಗುರುಕುಲ ಶಾಲೆಯಲ್ಲಿ ಗಣೇಶ ವಿಸರ್ಜನೆ

ಕಲಬುರಗಿ,ಸೆ.7:ಉದನೂರು ಹಿರೇಗೌಡ ಲೇಔಟ್ ನಲ್ಲಿರುವ ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಗಣೇಶ ವಿಸರ್ಜನೆ ಕಾರ್ಯಕ್ರಮ ಬಹು ವಿಜೃಂಭಣೆಯಿಂದ ನಡೆಯಿತು.ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಕ್ಷಕರು ಪಾಲಕರು ಪೆÇೀಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ವಿದ್ಯಾರ್ಥಿಗಳಿಂದ ಹಾಗೂ ಶಿಕ್ಷಕರಿಂದ ನಡೆದ ನೃತ್ಯ ಕಾರ್ಯಕ್ರಮ ನೋಡುಗರ ಕಣ್ಮನ ಸೆಳೆಯಿತು .ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಭಾಗಮ್ಮ ರಾಜಕುಮಾರ್. ಶಿಕ್ಷಕರಾದ ಅಭಿಲಾಶ್, ರಾಹುಲ್, ರಾಜಕುಮಾರ್ ಗುತ್ತೇದಾರ್, ಅಶ್ವಿನಿ, ಅರ್ಚನಾ, ಶಾಂತಾ, ಭಾಗ್ಯಶ್ರೀ, ಸಾವಿತ್ರಿ ,ಲತಾ, ವೈಷ್ಣವಿ, ಶಶಿಕಲಾ, ಸ್ವಾತಿ ಸೇರಿದಂತೆ ವಿದ್ಯಾರ್ಥಿನಿಯರು ಭಾಗವಹಿಸಿದ್ದರು