ಜೂಜಾಟ:ನಾಲ್ವರ ಬಂಧನ

ಕಲಬುರಗಿ,ಆ.16-ವಿದ್ಯಾನಗರದ ಮಲ್ಲಿಕಾರ್ಜುನ ದೇವಸ್ಥಾನದ ಹಿಂದುಗಡೆ ಇರುವ ಸಾರ್ವಜನಿಕ ಜಾಗದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಎಂ.ಬಿ.ನಗರ ಪೊಲೀಸ್ ಠಾಣೆ ಎಎಸ್‍ಐ ಸೈಯದ್ ಅಯ್ಯುಬ್, ಸಿಬ್ಬಂದಿಗಳಾದ ರಾಜು, ದಸ್ತಯ್ಯಾ, ಮಹೇಶ್, ನಾಗರಾಜ ಅವರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಸುಭಾಷ ಜಂಬಗಿ, ಮಲ್ಲನಗೌಡ ಪಾಟೀಲ, ವೀರಭದ್ರಪ್ಪ ಸೂರವಾರ ಮತ್ತು ಶಿವಶರಣ ಚಪ್ಪೇದ್ ಎಂಬುವವರನ್ನು ಬಂಧಿಸಿ 5240 ರೂ.ನಗದು ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.