
ಕಲಬುರಗಿ,ಜು.17-ಇಲ್ಲಿನ ಕಮಲ ನಗರದ ಇಟ್ಟಂಗಿ ಭಟ್ಟಿ ಹತ್ತಿರ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಬ್-ಅರ್ಬನ್ ಪೊಲೀಸ್ ಠಾಣೆ ಪಿಎಸ್‍ಐ ಶಶಿಕಲಾ ಮತ್ತು ಸಿಬ್ಬಂದಿ ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ.
ಮಲ್ಲೇಶ ಬರಮನೂರ, ಗಣಪತಿ ಮಾನೆ, ಶಂಕರ ವಾಡಿ, ಸಂಜೀವ ಗಾಯದನಕರ ಮತ್ತು ಪುಲು ಪವಾರ ಎಂಬುವವರನ್ನು ಬಂಧಿಸಿ 6630 ರೂ.ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.