
ನವಲಗುಂದ,ಏ13 : ಸರಳ ಹಾಗೂ ಕಡಿಮೆ ವೆಚ್ಚದಲ್ಲಿ ಉಚಿತ ಸಾಮೂಹಿಕ ವಿವಾಹಗಳು ನಡೆದರೆ ಹೆಚ್ಚು ಅನುಕೂಲವಾಗುತ್ತದೆ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಮಹಾಸ್ವಾಮೀಜಿ ನುಡಿದರು.
ತಾಲ್ಲೂಕಿನ ಶಾನವಾಡ ಗ್ರಾಮದಲ್ಲಿ ಬುದ್ದ-ಬಸವ ಅಂಬೇಡ್ಕರ ಜನಜಾಗೃತಿ ವೇದಿಕೆ ತಾಲ್ಲೂಕು ಘಟಕ ನವಲಗುಂದ, ಸತೀಶ ಜಾರಕಿಹೊಳಿ ಅಭಿಮಾನಿ ಬಳಗ ಹಾಗೂ ವಿನೋದ ಅಸೂಟಿ ಅಭಿಮಾನಿ ಬಳಗದ ವತಿಯಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಸಾನಿಧ್ಯ ವಹಿಸಿ ಆಶೀರ್ವದಿಸಿದರು.
ಶಾಸಕ ಎನ್ ಎಚ್ ಕೋನರಡ್ಡಿ ಮಾತನಾಡಿ ಸತೀಶ ಜಾರಕಿಹೊಳಿ ಅಭಿಮಾನಿಗಳ ಬಳದ ವತಿಯಿಂದ ಪ್ರತಿವರ್ಷ ಜರಗುವ ಸಾಮೂಹಿಕ ವಿವಾಹಗಳು ಮಠಾಧೀಶರ ಆಶೀರ್ವಾದದೊಂದಿಗೆ ನೆಮ್ಮದಿ ಜೀವನಕ್ಕೆ ನಾಂದಿ ಹಾಡುತ್ತವೆ. ವಧು-ವರರು ದಾಂಪತ್ಯ ಜೀವನವನ್ನು ಮಾದರಿಯಾಗಿ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು’ ಎಂದು ಸಲಹೆ ನೀಡಿದರು.
ಕೆಪಿಸಿಸಿ ಸದಸ್ಯ ವಿನೋದ ಅಸೂಟಿ ಮಾತನಾಡಿ ಸಾಮೂಹಿಕ ವಿವಾಹವು ಸಮಾಜದಲ್ಲಿ ಸಮಾನತೆ, ಸಹಕಾರ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರುತ್ತವೆ ಇಂದು ಸಂಸಾರ ಜೀವನಕ್ಕೆ ಪಾದಾರ್ಪಣೆ ಮಾಡಿರುವುದು ಆದರ್ಶವಾದುದು. ಎಲ್ಲರೂ ಮಿತಸಂತಾನ ಮತ್ತು ಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದರು.
ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ, ನವಲಗುಂದ ಪಂಚಗೃಹ ಹಿರೇಮಠದ ನೂತನ ಉತ್ತರಾಧಿಕಾರಿಗಳಾದ ವೀರಬಸವ ದೇವರು ಇತರರು ಮಾತನಾಡಿದರು.
ಜಿಲ್ಲಾ ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಮೋಹನ ಗುಡಿಸಲಮನಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ವರ್ಧಮಾನಗೌಡ ಹಿರೇಗೌಡ, ಸದುಗೌಡ ಪಾಟೀಲ, ಬಿ ಎಲ್ ಹಳ್ಳಿಕೇರಿ, ರಾಮಣ್ಣ ಕೊಪ್ಪದ, ಸಾಮೂಹಿಕ ವಿವಾಹ ಆಯೋಜಕರಾದ ಮಂಜುನಾಥ ವೀರಪ್ಪನವರ, ಶರೀಪಶಿವಯೋಗಿ ಸೂರಪ್ಪನವರ ಸಚಿನ ಗಾಡಗೋಳಿ, ಶರಣು ಯಮನೂರ, ಚರಂತಯ್ಯಾ ಚಿಕಮಠ, ಸುಭಾಸ ದುಬ್ಬದಮಟ್ಟಿ, ಅಮರಪ್ಪ ಆಮಣ್ಣವರ, ಆನಂದ ತೋರಗಲ್ಲ, ಶೇಕಪ್ಪ ಚುಲಕಿ ಸೇರಿ ಇತರರು ವೇದಿಕೆಯಲ್ಲಿದ್ದರು.




















