Home ಜಿಲ್ಲೆ ಕಲಬುರಗಿ ವ್ಯಸನ ಮುಕ್ತರಾಗಿ: ಬಿ.ಕೆ.ಶಿವಲೀಲಾ ಅಕ್ಕ

ವ್ಯಸನ ಮುಕ್ತರಾಗಿ: ಬಿ.ಕೆ.ಶಿವಲೀಲಾ ಅಕ್ಕ

ಕಲಬುರಗಿ,ಮಾ.31-ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಹಾಗೂ ಕೇಂದ್ರ ಕಾರಾಗೃಹ ವತಿಯಿಂದ ಬಂದಿಗಳಿಗೆ ನಶಮುಕ್ತ ಭಾರತ ಅಭಿಯಾನದ ಅಡಿಯಲ್ಲಿ ಮನ ಪರಿವರ್ತನೆಗಾಗಿ ಆರೋಗ್ಯ ಜೀವನಕ್ಕಾಗಿ ಒಂದು ತಾಸಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮಕ್ಕೆ ಬಿಕೆ ಶಿವಲೀಲಾ ಅಕ್ಕನವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಮಾನವ ಜನ್ಮ ಶ್ರೇಷ್ಠ್ಠವಾದ ಜನ್ಮ ನಮ್ಮ ಸಂಸ್ಕøತಿ ಪರಂಪರೆ ಅತ್ಯಂತ ಶ್ರೇಷ್ಠವಾದದ್ದು ಅಲ್ಲವೇ ದಯೆ ಕರುಣೆ ಮಮತೆ ಹಾಗೂ ಶಾಂತಿ ಮಂತ್ರಗಳು ಪ್ರತಿಯೊಬ್ಬ ಭಾರತೀಯ ರಲ್ಲಿ ತುಂಬಿರಬೇಕು ಇಂದಿನ ಯುವ ಪೀಳಿಗೆ ವ್ಯಸನಿಗಳಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವಲ್ಲದೆ ಆರ್ಥಿಕವಾಗಿ ದುರ್ಬಲರಾಗಿ ತಮ್ಮ ಜೊತೆ ಕುಟುಂಬವನ್ನು ಕೂಡ ಸಾಲದ ಸುಳಿಯಲ್ಲಿ ಸಿಲುಕಿಸಿ ಜನ್ಮವನ್ನು ನರಕದ ಕಡೆಗೆ ಕೊಂಡಯುತ್ತೀರಿ ಅದಕ್ಕಾಗಿ ಯುವ ಪೀಳಿಗೆಯ ಎಲ್ಲಾ ದುಶ್ಚಟಗಳಿಂದ ಮುಕ್ತರಾಗಿ ಒಳ್ಳೆಯ
ವ್ಯಕ್ತಿಯಾಗಿ ಸಮಾಜ ಮತ್ತು ಕುಟುಂಬಕ್ಕೆ ಜವಾಬ್ದಾರಿತ ವ್ಯಕ್ತಿಯಾಗಿ ಹೊರ ಹೋ ಮ್ಮಿ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕಾಗಿ ಕರೆ ನೀಡಿದರ ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಬಿಕೆ ರಾಜೇಶ್ವರಿ ಅಕ್ಕನವರು
ಮಾತನಾಡುತ್ತಾ ಎಲ್ಲರಿಗೂ ವ್ಯಸನ ಮುಕ್ತ ಭಾರತ ಮಾಡುವಲ್ಲಿ ಒಂದು ಪ್ರತಿಜ್ಞೆಯನ್ನು ಬೋಧಿಸಿ ನಂತರ ಮಾತನಾಡುತ್ತಾ ಆಚರಣೆಯಲ್ಲಿ ಸರಳತೆ ವಿಚಾರಣೆಯಲ್ಲಿ ದಿವ್ಯತೆ ಕರ್ಮದಲ್ಲಿ ಶ್ರೇಷ್ಠತೆಯ ಸಾರ್ಥಕ ಜೀವನವನ್ನು ಪರಿವಾರ ಮತ್ತು ಸಮಾಜದಲ್ಲಿ ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಹಾಗೂ ನಶ ಮುಕ್ತ ಭಾರತ ಮತ್ತು ಸದೃಢ ಭಾರತಕ್ಕೆ ಕೈಜೋಡಿಸಬೇಕಾಗಿ ಎಂದು ಕರೆ ನೀಡಿದರು.
ಈ ಸಂಸ್ಥೆಯ ಅಧೀಕ್ಷಕರಾದ ರಾಕೇಶ್ ಕಾಂಬಳೆ ರವರು ಮಾತನಾಡುತ್ತಾ ಮಾದಕ ವ್ಯಸನವು ಕೇವಲ ವ್ಯಕ್ತಿ ಆರೋಗ್ಯವನ್ನು ಹಾಳುಮಾಡುವುದಲ್ಲದೆ ಕುಟುಂಬಗಳ ನಾಶಪಡಿಸುತ್ತದೆ ಮತ್ತು ಸಮಾಜ ದಲ್ಲಿ ಅಪರಾಧಗಳನ್ನು ಹೆಚ್ಚಿಸುತ್ತದೆ ಯುವಜನರು ದೇಶದ ಆಸ್ತಿ ಅವರು ವ್ಯಸನಕ್ಕೆ ಬಲಿ ಯಾದರೆ ದೇಶದ ಪ್ರಗತಿ ಕುಂಠಿತವಾಗುತ್ತದೆ ಆದ್ದರಿಂದ ನಶ ಮುಕ್ತ ಭಾರತವು ಅಭಿವೃದ್ಧಿ ಹೊಂದಿದ ಭಾರತದ ಕನಸಿಗೆ ಅಗತ್ಯ ವಾಗಿದೆ
ಈಗಾಗಲೇ ನಾವು ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ ತಾವುಗಳು ಈಗಾಗಲೇ ಇದಕ್ಕೆ ಕೈಜೋಡಿಸಿ ಒಳ್ಳೆಯ ವ್ಯಕ್ತಿತ್ವವನ್ನು ಗುರುತಿಸಿಕೊಂಡು ಆದಷ್ಟು ಬೇಗ ನಿನ್ನ ಬಿಡುಗಡೆ ಹೊಂದಿ ಉತ್ತಮ ನಾಗರಿಕರಾಗಿ ಬಾಳಿ ಎಂದು ಕರೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಈ ಸಂಸ್ಥೆಯ ಮುಖ್ಯಸ್ಥರಾದ ಕೆ ಸುರೇಶ್ ರವರು ಮಾತನಾಡುತ್ತಾ ನಶಮುಕ್ತ ಭಾರತ ಅಭಿಯಾನವು ಕೇವಲ ಸರ್ಕಾರದ ಜವಾಬ್ದಾರಿ ಅಲ್ಲ ಬದಲಿಗೆ ಪ್ರತಿಯೊಬ್ಬ
ನಾಗರಿಕನ ಕರ್ತವ್ಯವಾಗಿದೆ ಕುಟುಂಬ ಶಾಲೆ ಮತ್ತು ಸಮಾಜ ಒಗ್ಗೂಡಿ ಕೆಲಸ ಮಾಡಬೇಕಾಗಿದೆ ಈ ಅಭಿಯಾನವು ದೇಶಾದ್ಯಂತ ಮಾದಕ ವ್ಯಸನದ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಮತ್ತು ವ್ಯಸನ ಮುಕ್ತ
ಸಮುದಾಯ ನಿರ್ಮಿಸುವ ಗುರಿಯನ್ನು ಹೊಂದಿದೆ ಈ ನಿಟ್ಟಿನಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಈ ಕೆಲಸದಲ್ಲಿ ಕೈಜೋಡಿಸಿದೆ ಕಲ್ಬುರ್ಗಿ ಜಿಲ್ಲೆ ಆದಂತ ಪ್ರತಿ ಗ್ರಾಮಕ್ಕೆ ತೆರಳಿ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ಮಾಡುತ್ತಿರುವುದಕ್ಕೆ ಮತ್ತು ಕಾರಾಗೃಹದಲ್ಲಿ ಬಂದು ಕಾರ್ಯಕ್ರಮ ಹಮ್ಮಿ ಕೊಂಡಿದ್ದಕ್ಕಾಗಿ ಇಲಾಖೆ ವತಿಯಿಂದ ತುಂಬು ಹೃದಯದ ಅಭಿನಂದನೆ ಸಲ್ಲಿಸಿದರು. ವ್ಯಸನ ಮುಕ್ತ ಸಮಾಜ ಸುಂದರ ಭವಿಷ್ಯದ ಆಧಾರ ನಶೆಯನ್ನು ತ್ಯಜಿಸಿ ಬದುಕನ್ನ ಪ್ರೀತಿಸಿ ಮತ್ತು ಈ ಸಂಸ್ಥೆಯಲ್ಲಿ ನೀಡಲಾಗುತ್ತಿರುವ ವಿವಿಧ ಕೌಶಲ್ಯಾಧಾರಿತ ತರಬೇತಿಗಳು ಸತ್ಸಂಗ ಗ್ರಂಥಾಲಯ ಹಾಗೂ ಶಿಕ್ಷಣ ಇವುಗಳ ಸದುಪಯೋಗವನ್ನು ಪಡೆದುಕೊಂಡು ಬಿಡುಗಡೆ ಹೊಂದಿದ ಮೇಲೆ ಹೊಸ ಜೀವನವನ್ನು ನಡೆಸುವದಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಕುಂಭಕರ್ಣನ ಎದ್ದೇಳುವ ಒಂದು 10 ನಿಮಿಷಗಳ ವಿಡಿಯೋ ಪ್ರದರ್ಶಿಸಲಾಯಿತು.ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹಾಯಕ ಅಧೀಕ್ಷಕರಾದ ಚನ್ನಪ್ಪ ಯಾಟಗಲ್, ಜಗದೀಶ್ ಪಾಟೀಲ್ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಸ್ವಾಗತ ಕಾರ್ಯಕ್ರಮವನ್ನು ಭೀಮಾಶಂಕರ ಡಾಂಗೆ ಸಹಾಯಕ ಆಡಳಿತ ಅಧಿಕಾರಿಗಳು ನಡೆಸಿಕೊಟ್ಟರು. ಈ ಸಂಸ್ಥೆಯ ಶಿಕ್ಷಕರಾದ ನಾಗರಾಜ್ ಮೂಲಗೆ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ವಂದನಾರ್ಪಣೆ
ಯನ್ನು ಬಿಕೆ ಶರಣಬಸಪ್ಪ ಹೀರಾ ಅವರು ನೆರವೇರಿಸಿದರು.