Home ಮುಖಪುಟ ಸುದ್ದಿ ನಾಲ್ವರು ಮಕ್ಕಳು ಜಲಸಮಾಧಿ

ನಾಲ್ವರು ಮಕ್ಕಳು ಜಲಸಮಾಧಿ

ಯಾದಗಿರಿ.ಮಾ೨೯: ಕೃಷಿ ಹೊಂಡದಲ್ಲಿ ಈಜಲು ಹೋದ ನಾಲ್ವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ನಡೆದಿದೆ.


ಕಿರಣ್ (೬), ಬಸಮ್ಮ (೧೧), ಶರತ್ (೬), ಹನುಮೇಶ್ (೭) ಮೃತ ದುರ್ದೈವಿಗಳು. ಶಾಲೆಗೆ ರಜೆ ಇದ್ದ ಕಾರಣ ಮಕ್ಕಳು ಈಜಲೆಂದು ಕೃಷಿ ಹೊಂಡಕ್ಕೆ ತೆರಳಿದ್ದರು. ಈ ವೇಳೆ ನೀರಿನಲ್ಲಿ ಮುಳುಗಿ ನಾಲ್ವರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಅಮೆರಿಕದ ಮತ್ತೊಂದು ಈ-೧೬ ಜೆಟ್ ಹೊಡೆದುರುಳಿಸಿದ ಇರಾನ್; ವಿಶ್ವವಿದ್ಯಾಲಯಗಳನ್ನ ಉಡಾಯಿಸೋದಾಗಿ ಬೆದರಿಕೆ
ಮಕ್ಕಳನ್ನು ಕಳೆದುಕೊಂಡು ಪೋಷಕರು ಆಘಾತಗೊಂಡಿದ್ದು, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಎಳೆಯ ಕಂದಮ್ಮಗಳ ಸಾವು ನೋಡಿ ಹೆತ್ತವರು ಕಣ್ಣೀರು ಇಡುತ್ತಿದ್ದಾರೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.