
ಸೇಡಂ,ಏ, 05:ತಾಲೂಕಾ ಆಡಳಿತ ವತಿಯಿಂದ ಸ್ವಾತಂತ್ರ ಹೋರಾಟಗಾರರು ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಉಪ ಪ್ರಧಾನಿಗಳಾದ ಬಾಬು ಜಗಜೀವನ್ ಜಯಂತೋತ್ಸವ ಅಂಗವಾಗಿ ಸಹಾಯಕ ಆಯುಕ್ತರಾದ ಪ್ರಭುರೆಡ್ಡಿ ರವರು ಬಾಬುಜಿ ಭಾವಚಿತ್ರಕ್ಕೆ ಪೂಜೆ ಪುಷ್ಪ ನಮನ ಸಲ್ಲಿಸಿ ಭವ್ಯ ಮೆರವಣಿಗೆಗೆ ಶ್ರೀ ಕೊತ್ತಲ ಬಸವೇಶ್ವರ ದೇವಸ್ಥಾನದಿಂದ ಸರ್ಕಾರಿ ನೌಕರರ ಭವನದ ವರೆಗೆ ಚಾಲನೆ ನೀಡಿದರು. ಈ ವೇಳೆಯಲ್ಲಿ ಸಹಾಯಕ ಆಯುಕ್ತರಾದ ಪ್ರಭುರೆಡ್ಡಿ, ತಹಸಿಲ್ದಾರ್ ಶ್ರೀಮತಿ ಶ್ರೀಯಾಂಕ್ ಎ ಧನಶ್ರೀ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿಜಯಕುಮಾರ್ ಪುಲಾರಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಉಮಾಪತಿ ರಾಜು,ನಗರಸಭೆ ಮುಖ್ಯಾಧಿಕಾರಿ ಶರಣಯ್ಯ ಸ್ವಾಮಿ, ತಾಪಂ ಇಓ ಚನ್ನಪ್ಪ ರಾಯಣ್ಣನವರ, ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜುರಾತಿ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕರಾದ ಡಾ.ಇಮ್ರಾನ್ ಮನಿಯಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಅನುರಾಧ ಪಾಟೀಲ್, ಶಿವಯೋಗಿ ಸಕ್ಪಾಲ, ರಾಜಶೇಖರ್ ರುದನುರ, ಶ್ರೀಶೈಲ ಎಮ್ ಜಿ, ಜಗನ್ನಾಥ ಚಿಂತಪಳ್ಳಿ, ಶಿವಪುತ್ರಪ್ಪ ಮೊಘ, ರಾಮು ಕಾಣೇಕಲ್, ಹಣಮಂತ ಭರತನೂರ, ಜಗನ್ನಾಥ ಕುಕ್ಕುಂದಾ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು




















