
ನವದೆಹಲಿ,ಸೆ.೩:ಜಮ್ಮು-ಕಾಶ್ಮೀರದ ಪಹಲ್ಗಾಮ್ ದಾಳಿಕೋರರಿಗೆ ಪಾಕಿಸ್ತಾನ ಸೇರಿದಂತೆ ವಿದೇಶಗಳಿಂದ ಹಣದ ನೆರವು ಹರಿದು ಬಂದಿರುವುದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಪತ್ತೆ ಹಚ್ಚಿದೆ.
ಪಾಕಿಸ್ತಾನ ಮೂಲದ ಲಕ್ಷರ್-ಇ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಪ್ರಾಕ್ಸಿ ಗುಂಪಾದ ದಿ ರೆಸಿಸ್‌ಟೆನ್ಸ್ ಫ್ರಂಟ್(ಟಿಆರ್‌ಎಫ್)ಗೆ ನಿಂದ ದೊಡ್ಡ ಮಟ್ಟದಲ್ಲಿ ಹಣ ಹರಿದು ಬಂದಿರುವುದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಪತ್ತೆ ಹಚ್ಚಿದೆ.
ಉಗ್ರರನ್ನು ಬೆಂಬಲಿಸುತ್ತಿರುವ ಸುಮಾರು ೪೬೩ ದೂರವಾಣಿ ಕರೆಗಳನ್ನು ಆಧರಿಸಿ ಟಿಆರ್‌ಎಫ್‌ನ ಹಣಕಾಸು ಮೂಲವನ್ನು ಎನ್‌ಐಎ ಪತ್ತೆ ಹಚ್ಚಿದೆ.
ಲಕ್ಷರ್-ಇ-ತೊಯ್ಬಾ ಪ್ರಾಯೋಜಿತ ಟಿಆರ್‌ಎಫ್‌ಗೆ ಪಾಕಿಸ್ತಾನ, ಮಲೇಶಿಯಾ ಮತ್ತು ಗಲ್ಫ್ ರಾಷ್ಟ್ರಗಳಿಂದ ಹಣ ಬಂದಿರುವುದು ಈಗ ಬಹಿರಂಗಗೊಂಡಿದೆ.
ಮಲೇಶಿಯಾದ ನಿವಾಸಿ ಯಾಸೀರ್ ಹಯಾತ್ ಮೂಲಕ ಸುಮಾರು ೯ ಲಕ್ಷ ರೂ.ಗಳ ಹಣವನ್ನು ಟಿಆರ್‌ಎಫ್ ಪಡೆದುಕೊಂಡಿದೆ.
ಜಮ್ಮು-ಕಾಶ್ಮೀರದ ಪಹಲ್ಗಾಮ್ ದಾಳಿಯ ನಂತರ ಎನ್‌ಐಎ ತನಿಖೆ ನಡೆಸಿದ ಸಂದರ್ಭದಲ್ಲಿ ವಿದೇಶದಿಂದ ಟಿಆರ್‌ಎಫ್‌ಗೆ ಹಣ ಬಂದಿರುವುದು ದೃಢಪಟ್ಟಿದೆ.
ಲಕ್ಷರ್-ಇ-ತೊಯ್ಬಾ ಉಗ್ರ ಸಾಜಿತ್ ಮಿರ್‌ನ ಮೊಬೈಲ್ ಡೆಟಾ ಸಾಮಾಜಿಕ ಜಾಲತಾಣಗಳಲ್ಲಿ,ಚಾಟ್ಸ್ ಬ್ಯಾಂಕ್ ವ್ಯವಹಾರವನ್ನು ಎನ್‌ಐಎ ಪರಿಶೀಲಿಸಿ ಟಿಆರ್‌ಎಫ್‌ಗೆ ವಿದೇಶಿ ಹಣ ಬಂದಿರುವುದನ್ನು ಖಚಿತಪಡಿಸಿದೆ.
ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನ ಮೂಲದ ಲಕ್ಷರ್-ಇ-ತೊಯ್ಬಾ ಈ ದಾಳಿಯ ಹಿಂದೆ ಇತ್ತು. ಈ ದಾಳಿಗೆ ಹಣದ ನೆರವನ್ನು ಒದಗಿಸಿತ್ತು ಎಂಬ ಸುಳಿವು ಹಿಡಿದು ಎನ್‌ಐಎ ಈಗ ಮಹತ್ವದ ವಿದೇಶಿ ಹಣ ಹರಿವಿನ ಮೂಲವನ್ನು ಪತ್ತೆ ಹಚ್ಚಿದೆ.