
ಕಲಬುರಗಿ,ಆ. 26: ನಗರ ಪೆÇಲೀಸ ಆಯುಕ್ತಾಲಯ ಶ್ವಾನ ಪಡೆಗೆ ಐದು ಶ್ವಾನಗಳು ಸೇರ್ಪಡೆಯಾಗಿದ್ದು ಸೋಮವಾರ ಅವುಗಳ ನಾಮಕರಣ ಮಾಡಲಾಯಿತು.
ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್ ಡಿ ಮತ್ತು ಹಿರಿಯ ಅಧಿಕಾರಿಗಳು ಈ ಶ್ವಾನಗಳಿಗೆ ರೀಟಾ, ರೂಬಿ, ಸ್ಪಾರ್ಕಿ,ಸ್ಪೂರ್ತಿ ಮತ್ತು ಲಿಯೊ ಎಂದು ಹೆಸರಿಟ್ಟರು.
ಇತ್ತೀಚಿಗೆ ನಗರಕ್ಕೆ ಭೇಟಿ ನೀಡಿದ ಹೆಚ್ಚುವರಿ ಪೆÇಲೀಸ ಮಹಾನಿರ್ದೇಶಕ ಆರ್ ಹಿತೇಂದ್ರ ಅವರಿಗೆ ಕಲಬುರಗಿ ನೂತನ ಶ್ವಾನದಳದ ಮನವಿ ಮಾಡಲಾಗಿತ್ತು.ಮನವಿಗೆ ಸ್ಪಂದಿಸಿದ ಹಿತೇಂದ್ರ ಅವರು 5 ಶ್ವಾನಗಳನ್ನು ಒದಗಿಸಿದ್ದಾರೆ. ಈ ಶ್ವಾನಗಳು ಬೆಂಗಳೂರಿನ ಆಡುಗೋಡಿಯಲ್ಲಿರುವ ಸಿಎಆರ್ ದಕ್ಷಿಣ ಘಟಕದಲ್ಲಿ 9 ತಿಂಗಳ ತರಬೇತಿಯ ನಂತರ ಕಲಬುರಗಿ ನಗರ ಪೆÇಲೀಸ ಸೇವೆಗೆ ಸಜ್ಜುಗೊಳ್ಳಲಿವೆ.ಉಪಪೆÇಲೀಸ ಆಯುಕ್ತರಾದ ಕನಿಕಾ ಸಿಕ್ರಿವಾಲ್, ಪ್ರವೀಣ ನಾಯಕ್ ಸೇರಿದಂತೆ ಅನೇಕ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು