ಬೀದಿನಾಯಿ ಕಚ್ಚಿ ಐದು ಮಕ್ಕಳಿಗೆ ಗಾಯ

ಕಲಬುರಗಿ,ಫೆ.20: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಇಲ್ಲಿನ ದೇವಿ ನಗರದಲ್ಲಿ ಐದು ಮಕ್ಕಳಿಗೆ ಬೀದಿನಾಯಿಗಳು ಕಚ್ಚಿ ಗಾಯಗೊಳಿಸಿವೆ
ಬೀದಿನಾಯಿಗಳನ್ನು ಕಟ್ಟು ನಿಟ್ಟಾಗಿ ನಿಯಂತ್ರಣ ಮಾಡುವಂತೆ ಸುಪ್ರೀಂಕೋರ್ಟು ಖಡಕ್ ಆದೇಶ ನೀಡಿದೆ. ಆದರೆ ನಗರದಲ್ಲಿ ಬೀದಿ ನಾಯಿಗಳ ನಿಯಂತ್ರಣ ಇಲ್ಲದೇ ಸಾರ್ವಜನಿಕರು ಆತಂಕಗೊಂಡಿದ್ದಾರೆ.
ನಗರದಲ್ಲಿ ಮಾಂಸಮೂಳೆ ಸೇರಿದಂತೆ ತ್ಯಾಜ್ಯ ಆಹಾರ ಪದಾರ್ಥಗಳನ್ನು ಎಲ್ಲೆಂದರಲ್ಲಿ ಎಸೆಯುವದರಿಂದ ಬೀದಿನಾಯಿಗಳ ಹಾವಳಿ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂದು ನಾಗರಿಕರು ದೂರಿದ್ದಾರೆ.
ಮಹಾನಗರ ಪಾಲಿಕೆಯವರು ತುರ್ತಾಗಿ ಬೀದಿನಾಯಿಗಳನ್ನು ನಿಯಂತ್ರಣಕ್ಕೆ ತರುವಂತೆ ಸಾರ್ವಜನಿಕರ ಒಕ್ಕೊರಲಿನ ಆಗ್ರಹವಾಗಿದೆ