
ಕೊಲ್ಹಾರ: ಮಾ.31:ಕಬ್ಬಿನ ಗದ್ದೆಗೆ ಬಿದ್ದಿದ್ದ ಬೆಂಕಿಯನ್ನು ನಂದಿಸಲು ಹೋಗಿದ್ದ ರೈತನೊರ್ವ ಆಕಸ್ಮಿಕವಾಗಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೃತಪಟ್ಟ ದಾರುಣ ಘಟನೆ ಪಟ್ಟಣದ ಸಮೀಪದ ಮಹಾದೇವಪ್ಪನ ತೆವೆರದ ಬಳಿ ಸಂಭವಿಸಿದೆ. ಮೃತ ರೈತ ಸಂಗಪ್ಪ ಈರಪ್ಪ ಕುಂಬಾರ(80) ಎಂದು ಗುರ್ತಿಸಲಾಗಿದೆ. ಇವರು ರವಿವಾರ ತಮ್ಮ ಸ್ವಂತ ಜಮೀನಿನಲ್ಲಿರುವ ಗೋಧಿ ಹುಲ್ಲು ಸುಡಲು ಬೆಂಕಿ ಹಂಚಿದ್ದರು. ಆ ಬೆಂಕಿಯು ಪಕ್ಕದ ಜಮೀನಿನ ಕಬ್ಬಿನ ಗದ್ದೆಗೆ ತಗುಲಿದೆ ಅದನ್ನು ನಂದಿಸಲು ಹೋಗಿದ್ದರು ಇದೇ ವೇಳೆ ಬೆಂಕಿಯು ತಗುಲಿದೆ. ಈ ಘಟನೆಯು ಮದ್ಯಾಹ್ನ ಸಮಯದಲ್ಲಿ ಸಂಭವಿಸಿದೆ ಹೀಗಾಗಿ ಸಜೀವ ದಹನವಾಗಿದ್ದಾರೆ. ಈ ವೇಳೆ ಯಾರು ಜನ ಅಕ್ಕ ಪಕ್ಕದಲ್ಲಿ ಇರಲಿಲ್ಲ. ಹೊಲದಿಂದ ಮನೆಗೆ ಬರದೇ ಕಾರಣ ಸಂಜೆ ಮನೆಯವರು ಇವರನ್ನು ಹುಡುಕಿದ್ದಾರೆ. ಆ ಮೇಲೆ ಈ ಘಟನೆ ಸಂಭಿವಿಸಿದ್ದು ಗೊತ್ತಾಗಿದೆ. ಮಾಹಿತಿ ತಿಳಿದ ಫೆÇೀಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೊಲ್ಹಾರ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



























