Home ಕ್ರೈಂ ಸುದ್ದಿಗಳು ಜಮಖಂಡಿಯಲ್ಲಿ ಪರಮ ಸೋಲಾರ್ ಅಂಗಡಿಯಲ್ಲಿ ಅಗ್ನಿ ಅವಘಡ

ಜಮಖಂಡಿಯಲ್ಲಿ ಪರಮ ಸೋಲಾರ್ ಅಂಗಡಿಯಲ್ಲಿ ಅಗ್ನಿ ಅವಘಡ

ಜಮಖಂಡಿ:ಮಾ.8:ನಗರದ ಕೋರ್ಟ್ ರಸ್ತೆಯಲ್ಲಿರುವ ಪರಮ ಸೋಲಾರ್ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಶನಿವಾರ ನಡೆದಿದೆ.
ಅಗ್ನಿ ಕಾಣಿಸಿಕೊಂಡ ಮಾಹಿತಿ ತಿಳಿದ ಕೂಡಲೇ ಪಿ.ಎಸ್‍ಐ ಅನೀಲ ಕುಂಬಾರ ಅವರ ನೇತೃತ್ವದ ಪೆÇೀಲಿಸ್ ತಂಡ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಅಗ್ನಿ ನಂದಿಸುವಲ್ಲಿ ಯಶಸ್ವಿಯಾದರು.
ಅಂಗಡಿ ನಿಲೇಶ್ ಹಜಾರೆ ಅವರ ಒಡೆತನದಲ್ಲಿದ್ದು, ಅಗ್ನಿ ಅವಘಡದಿಂದ ಅಂಗಡಿಗೆ ಕೆಲವು ಪ್ರಮಾಣದ ಹಾನಿ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಅಗ್ನಿ ಅವಘಡಕ್ಕೆ ನಿಖರವಾದ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ.