
ಕಮಲನಗರ:ಮಾ.೩: ಪಟ್ಟಣದ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಸೋಮವಾರ ಬಣ್ಣದೋಕಳಿಯಲ್ಲಿ ಪರಸ್ಪರ ಎರಚಿ ಸಂಭ್ರಮಿಸಿದರು.
ಪ್ರತಿವರ್ಷ ಮಾರ್ಚ ತಿಂಗಳ ಹುಣ್ಣಿಮೆ ದಿನದಂದು ಬರುವ ಈ ಹಬ್ಬವನ್ನು ಪೂಜಾ ಕೈಕಂರ್ಯಗಳು ನೆರವೇರಿಸಿ ಕಾಮದಹನ ಮಾಡುವುದರ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು.
ಸ್ನೇಹ ಸೌಹಾರ್ದತೆಗೆ ಹೆಸರಾಗಿರುವ ವರ್ಷದ ಕೊನೆ ಹೋಳಿ ಹಬ್ಬವನ್ನು ಚಿಣ್ಣರು, ಯುವಕರು, ಮಹಿಳೆಯರು ಬಣ್ಣದೋಕಳಿಯಲ್ಲಿ ಮಿಚಿದದೆದ್ದರು. ಪುಟಾಣಿಗಳು ಪಿಚಕಾರಿಗಳ ಮೂಲಕ ದಾರಿಹೋಕರಿಗೆ ತಮ್ಮ ಗೆಳೆಚಿiÀ?ರಿಗೆ ಬಣ್ಣ ಎರಚಿ ಸಂಭ್ರಮಿಸಿದರು.
ಈ ಸಂದರ್ಭ ಶ್ರೀದೇವಿ, ದೀಪಮಾಲಾ, ರಾಜಶ್ರೀ, ಸಂಗೀತಾ, ರಾಣಿ, ಅಶ್ವೀನಿ, ಪಂಚಫೂಲಾ, ವಾಣಿಶ್ರೀ ಸೇರಿದಂತೆ ಪ್ರಮುಖರು ವಿವಿಧ ರೀತಿಯ ಬಣ್ಣಗಳನ್ನು ತಮ್ಮ ಮುಖಕ್ಕೆ , ಮೈಮೇಲೆ ಹಚ್ಚಿಕೊಂಡು ಒಬ್ಬರಿಗೊಬ್ಬರು ಗುರುತು ಸಿಗದಂತೆ ಕಂಡು ಬಂತು. ಮಹಿಳಾ ಶಿಕ್ಷಕಿಯರು ಕೂಡ ತಾವೇನೂ ಕಮ್ಮಿಯಲ್ಲ ಎಂಬAತೆ ತಮ್ಮ ನೆರೆಹೊರೆಯವರ ಜೊತೆಯಾಗಿ ರಂಗೀನಾಟವಾಡಿದರು.




























