
ಚಿಟಗುಪ್ಪಾ :ಅ.25: ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ. ನಗರ ಜಿವನ ಒತ್ತಡದ ಬದುಕಿನಲ್ಲಿ ದಿನದಲ್ಲಿ ಕೆಲಹೊತ್ತು ಭಗವಂತನ ಸ್ಮರಣೆ ಮಾಡಿದರೆ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾಕ್ಟರ್ ಚಂದ್ರಶೇಖರ ಪಾಟೀಲ್ ಹೇಳಿದರು.
ಜಾತ್ರಾ ಮಹೋತ್ಸವ ನಿಮಿತ್ತ ಪಟ್ಟಣದ ಇತಿಹಾಸ ಪ್ರಸಿದ್ಧ ಬಾಳೋಬಾ ದೇವಸ್ಥಾನದಲ್ಲಿ ಭಾನುವಾರ ನಡೆದ ವಿಶೇಷ ಪೂಜಾ ಕಾರ್ಯಕ್ರಮ ಭಾಗವಹಿಸಿ ಮಾತನಾಡಿ ಪಾಶ್ಚಿಮಾತ್ಯ ಸಂಸ್ಕøತಿಯತ್ತ ವಾಲುತ್ತಿರುವ ಜನರ ನಮ್ಮ ಸಂಸ್ಕೃತಿ. ಪರಂಪರೆಯ ಆಚಾರ. ವಿಚಾರಗಳ ಕುರಿತು ತಿಳಿದುಕೊಂಡು ನಮ್ಮ ಸಂಸ್ಕೃತಿ ಉಳಿಸಿ ಬೆಳಸುವ ಪ್ರಯತ್ನ ಮಾಡಬೇಕು. ಜತೆಗೆ ಗುಣಮಟ್ಟದ ಶಿಕ್ಷಣ ಪಡೆದು ಸಮಾಜದ ಪ್ರತಿಷ್ಠಿತ ಹುದ್ದೆಗಳನ್ನು ಗಿಟ್ಟಿಸಿಕೊಳ್ಳುವ ಮೂಲಕ ತಾಲೂಕಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.
ಐತಿಹಾಸಿಕ ಬಾಳೋಬಾ ದೇವಸ್ಥಾನದಲ್ಲಿ ವಿಧಾನ ಪರಿಷತ್ ಸದಸ್ಯ ಡಾಕ್ಟರ್ ಚಂದ್ರಶೇಖರ ಪಾಟೀಲ್ ಅವರು ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಉತ್ತರಾಧಿ ಶ್ರೀ ಶ್ರೀ ಶ್ರೀ ಮಹದೇವಪ್ಪಾ ಅಪ್ಪಾಜಿ ಗುರುಗಳಿಂದ ಎಂ ಎಲ್ ಸಿ ಅವರಿಗೆ ಸನ್ಮಾನಿಸಿದರು. ಪುರಸಭೆ ಅಧ್ಯಕ್ಷ ದಿಲೀಪಕುಮಾರ ಹಾಗೂ ಉತ್ಸವ ಸಮಿತಿ ಪದಾಧಿಕಾರಿಗಳು ಸೇರಿ ವಿಧಾನ ಪರಿಷತ್ ಸದಸ್ಯ ಡಾಕ್ಟರ್ ಚಂದ್ರಶೇಖರ ಪಾಟೀಲ್ ಅವರಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ದಿಲೀಪಕುಮಾರ ಬಗದಲಕರ್. ಪುರಸಭೆ ಉಪಾಧ್ಯಕ್ಷ ನಾಸೀರ ಖಾನ್. ಪುರಸಭೆ ಸಧ್ಯಸರಾದ ಬಾಬ ಆರ್. ಸಿ. ಸಿ. ವಿಶಾಲ್ ಬೋರಾಳೆ. ಪುರಸಭೆಯ ಮಾಜಿ ಸಧ್ಯಸ ದತ್ತು ಹಲಗಿ. ಸಿದ್ದರಾಮ್ ಗೌಳಿ. ದತ್ತು ಗೌಳಿ. ಉದ್ಯಮಿ ಅಣೇಪ್ಪಾ ವರನಾಳ. ಯುವ ಉದ್ಯಮಿ ಸಚಿನ್ ವರನಾಳ. ಎಂಡಿ ಶರೀಫ್. ಭಾಸ್ಕರ್. ಸಿದ್ದಲಿಂಗಪ್ಪಾ ಪಾಟೀಲ್ ಬೆಳಕೇರಾ. ಟಿ.ಎ.ಪಿಎಂ.ಎಸ್. ಸದಸ್ಯ ವೀರೇಶ ತುಗಾಂವ. ಸೇರಿದಂತೆ ಉತ್ಸವ ಸಮಿತಿ ಪದಾಧಿಕಾರಿಗಳು. ಹಾಗೂ ಪಟ್ಟಣದ ಪ್ರಮುಖರು ಉಪಸ್ಥಿತರಿದ್ದರು