
ಅಥಣಿ :ಮಾ.೩: ನೀವು ಯಾವುದೇ ರೀತಿಯ ಧೃತಿಗೆಡುವ ಅವಶ್ಯಕತೆ ಇಲ್ಲ. ನೀವು ಧೈರ್ಯವಾಗಿರಿ ನಿಮ್ಮ ಜೊತೆ ನಾನಿದ್ದೇನೆ. ನಿಮ್ಮನ್ನು ಎರಡ್ಮೂರು ದಿನಗಳಲ್ಲಿ ತಾಯ್ನಾಡಿಗೆ ಕರೆ ತರುವ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಲಕ್ಷ್ಮಣ ಸವದಿ ಅವರು ಶಶಿಕಾಂತ ದೊಡ್ಡಣ್ಣವರಗೆ ಧೈರ್ಯ ತುಂಬಿದರು.
ಅವರು ದುಬೈ ಪ್ರವಾಸದಲ್ಲಿರುವ ಅಥಣಿ ಪಟ್ಟಣದ ನಿವಾಸಿ ಶಶಿಕಾಂತ ಸುಭಾಷ ದೊಡ್ಡಣ್ಣವರ ಜೊತೆ ವಿಡಿಯೋ ಕೆರೆ ಮೂಲಕ ಮಾತನಾಡಿ ಇರಾನ್ ಯುದ್ಧದ ಭೀತಿಯಿಂದ ದುಬೈಯಿಂದ ವಿಮಾನ ಹಾರಾಟವು ರದ್ದಾಗಿದೆ. ನೀವು ಸುರಕ್ಷಿತವಾಗಿರಿ ಯಾವುದೇ ರೀತಿಯ ಅಂಜುವ ಅವಶ್ಯಕತೆ ಇಲ್ಲ. ಆದಷ್ಟು ಶೀಘ್ರದಲ್ಲೇ ನಿಮ್ಮನ್ನು ತಾಯ್ನಾಡಿಗೆ ಕರೆ ತರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ನಿಮಗೆ ಯಾವುದೇ ರೀತಿಯ ತೊಂದರೆಯಾಗದAತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು ಎಂದರು.
ಶಾಸಕ ಲಕ್ಷ್ಮಣ ಸವದಿ ಅವರು ಮಾತನಾಡುವ ಸಂದರ್ಭದಲ್ಲಿ ಶಶಿಕಾಂತ ದೊಡ್ಡಣ್ಣವರ ಉತ್ತರಿಸಿ ತಮ್ಮ ಮಾತುಗಳಿಂದ ನನಗೆ ಧೈರ್ಯ ಬಂದಿದೆ ಎಂದರು






























