
ಮುಳಬಾಗಿಲು ಆ ೨೮- ಮುಂಗಾರು ಕೃಷಿ ಚಟುವಟಿಕೆಗಳಿಗೆ ಅವಶ್ಯಕತೆ ಇರುವ ಯೂರಿಯಾ ಹಾಗೂ ಡಿ.ಎ.ಪಿಯನ್ನು ಸಮಸ್ಯೆಯಾಗದಂತೆ ಟಿ.ಎ.ಪಿ.ಸಿ.ಎಂ.ಸಿ, ಗಳ ಮುಖಾಂತರ ರೈತರಿಗೆ ವಿತರಣೆ ಮಾಡಿ ಕಾಳ ಸಂತೆಯಲ್ಲಿ ಆಂಧ್ರಕ್ಕೆ ರಸಗೊಬ್ಬರಗಳನ್ನು ಮಾರಾಟ ಮಾಡುವ ದಂಧೆ ಕೋರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಂದು ರೈತಸಂಘದಿಂದ ತಾಲ್ಲೂಕು ಸೊಸೈಟಿ ವ್ಯವಸ್ಥಾಪಕರಾದ ಶಿವಶಂಕರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ದೇವರು ವರಕೊಟ್ಟರುವ ಪೂಜಾರಿ ವರಕೊಡಲಿಲ್ಲ ಎಂಬ ಗಾದೆಯಂತೆ ಉತ್ತಮ ಮುಂಗಾರು ಮಳೆಯಿಂದ ಕೃಷಿ ಚಟುವಟಿಕೆಗೆ ರೈತರು ಮುಂದಾಗಿದ್ದು ಸರ್ಕಾರ ನೀಡುವ ಬಿತ್ತನೆ ಬೀಜ ರಸಗೊಬ್ಬರ, ಅಭಾವ ಸೃಷ್ಟಿಯಾಗದಂತೆ ಜಾಗೃತಿ ವಹಿಸಬೇಕಾದ, ಕೃಷಿ ಅಧಿಕಾರಿಗಳ ನಿರ್ಲಕ್ಷ್ಯ ರಸಗೊಬ್ಬರ, ಅಂಗಡಿ ಮಾಲೀಕರ ಕಾಳಸಂತೆಯ ಮಾರಾಟಕ್ಕೆ ರೈತರು ಪರಾದಡಬೇಕಾದ ಪರಿಸ್ಥಿತಿಇದ್ದರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಕೃಷಿ ಮಂತ್ರಿಗಳು ಹಾಗೂ ಕೃಷಿ ಅಧಿಕಾರಿಗಳು ವಿಫಲವಾಗಿದ್ದಾರೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿವರ್ಷ ರಸಗೊಬ್ಬರಿಗಳಿಗಾಗಿ ರೈತರು ಪರದಾಡುವ ಜೊತೆಗೆ ಒಂದು ಮೂಟೆ ಗೊಬ್ಬರ ಪಡೆಯಲು ಮನೆ ಬಿಟ್ಟು ಸರ್ಕಾರಿ ಹಾಗೂ ಖಾಸಗಿ ಅಂಗಡಿಗಳ ಮುಂದೆ ಸಾಲಾಗಿ ನಿಲ್ಲಬೇಕಾದ ಪರಿಸ್ಥಿತಿಯ ಜೊತೆಗೆ ಗೊಬ್ಬರ ಸಿಗದೇ ರೈತರ ಆಕ್ರೋಶ ಹೊರ ಹಾಕಿದಾಗ ಅನ್ನಧಾತರ ಮೇಲೆ ಲಾಠಿ ಚಾರ್ಜ ಗೋಲಿಭಾರ ಮಾಡಿರುವ ಪ್ರಕರಣಗಳು ಜೀವಾಂತವಾಗಿದ್ದರು. ಮುಂಗಾರು ಮಳೆ ಜಾಗೃತಿ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲವೆಂದು ಕೃಷಿ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.
ತಾ ಪ್ರ. ಕಾ. ರಾಜೇಶ್ ಹಾಗೂ ಪಾರೂಕ್ ಪಾಷ ಮಾತಾನಾಡಿ ಪ್ರತಿವರ್ಷ ಕೃಷಿ ಸಚಿವರು ವಿಧಾನ ಸೌಧದಲ್ಲಿ ಮುಂಗಾರು ಕೃಷಿ ಬಿತ್ತನೆಗೆ ಅವಶ್ಯಕತೆ ಇರುವ ರಸಗೊಬ್ಬರ ಅಭಾವ ಇಲ್ಲ, ಬೇಡಿಕೆಗೆ ತಕ್ಕಂತೆ ಆಯಾ ಜಿಲ್ಲೆಯ ಕೃಷಿ ಇಲಾಖೆಗಳನ ಗೋಧಾಮಗಳಲ್ಲಿ ದಾಸ್ತನು ಇದೆ ಎಂದು ಹೇಳುವ ಸಚಿವರೇ ರಾಜ್ಯದಲ್ಲಿ ರಸಗೊಬ್ಬರಗಳ ಅಭಾವಕ್ಕೆ ಹೊಣೆಯಾರು? ಕೃಷಿ ಅಧಿಕಾರಿಗಳೇ? ರೈತರಿಗೆ ವಿತರಣೆ ಮಾಡುವ ರಸಗೊಬ್ಬರಗಳನ್ನು ಖಾಸಗಿ ಅಂಗಡಿಯವರಿಗೆ ಮಾರಾಟ ಮಾಡಿ ಅನ್ನಧಾರನ್ನು ಶೋಷಣೆ ಮಾಡುತ್ತಿದ್ದಾರೆಂದು ಅನುಮಾನ ವ್ಯಕ್ತ ಪಡಿಸಿದರು.
೨೪ ಗಂಟೆಯಲ್ಲಿ ಸಹಕಾರಿ ಸಮಸ್ಯೆಗಳ ಮುಖಾಂತರ ರಸಗೊಬ್ಬರಗಳನ್ನು ರೈತರಿಗೆ ವಿತರಣೆ ಮಾಡಿ ಕಾಳಸಂತೆಯಲ್ಲಿ ಸ್ಥಳಿಯ ರೈತರನ್ನು ನಿರ್ಲಕ್ಷ್ಯ ಮಾಡಿ ಆಂಧ್ರ ರಾಜ್ಯಕ್ಕೆ ಮಾರಾಟ ಮಾಡುವ ಖಾಸಗಿ ಅಂಗಡಿಗಳ ವಿರುದ್ಧ ಕ್ರಿಮನಲ್ ಮೊಕದ್ದಮೆ ದಾಖಲು ಮಾಡಿ ಅನ್ನಧಾತರನ್ನು ರಕ್ಷಣೆ ಮಾಡಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ವ್ಯವಸ್ಥಾಪಕರಾದ ಶಿವಶಂಕರವರು ನಮ್ಮ ಇಲಾಖೆಯಿಂದ ರೈತರಿಗೆ ಅವಶ್ಯಕತೆಇರುವ ಯೂರಿಯವನ್ನು ಆಧಾರ ಪಡೆದು ವಿತರಣೆ ಮಾಡುತ್ತಿದೇವೆ? ಕಾಳಸಂತೆಯಲ್ಲಿ ಆಂಧ್ರರಾಜ್ಯಕ್ಕೆ ಮಾರಾಟ ಮಾಡುವ ಅಂಗಡಿಗಳ ವಿರುದ್ದ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಕೃಷಿ ಅಧಿಕಾರಿಗಳ ಗಮನಕ್ಕೆ ತರುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ರಾಜ್ಯ ಮುಖಂಡ ಬಂಗಾರಿ ಮಂಜು ತಾ. ಅ. ಯಲುವಳ್ಳಿ ಪ್ರಭಾಕರ್, ಹೆಬ್ಬಣಿ ಆನಂದರೆಡ್ಡಿ , ಬಾಸ್ಕರ್, ಸುನೀಲ್ ಕುಮಾರ್, ಜುಬೇರ್ ಪಾಷ, ಗಿರೀಶ್, ರಾಜು, ಮುಂತಾದವರು ಇದ್ದರು.