
ಕಮಲನಗರ:ಮಾ.3:ತಾಲೂಕಿನ ಡೋಣಗಾಂವ(ಎಮ್) ಗ್ರಾಮದ ಪ್ರಗತಿಪರ ರೈತ ಬಾಬುರಾವ ಸೋಮುರೆ ಅವರು ಇತೀಚಿಗೆ ನಡೆದ ಗುಜರಾತ ರಾಜ್ಯದ ಭುಜ ಪಟ್ಟಣದಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ಮಟ್ಟದ ನ್ಯಾಚುರಲ್ ಫಾಮಿರ್ಂಗ್ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯ ಉತ್ಸಾಹಭರಿತವಾಗಿ ನೆರವೇರಿತು.
ದೇಶದ ಎಲ್ಲಾ ರಾಜ್ಯಗಳಿಂದ ರೈತ ಪ್ರತಿನಿಧಿಗಳು, ಕೃಷಿ ತಜ್ಞರು ಹಾಗೂ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಈ ಕಾರ್ಯಾಗಾರವನ್ನು ನೀತಿ ಆಯೋಗ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿತ್ತು.
ನೀತಿ ಆಯೋಗದ ಮುಖ್ಯ ಸಲಹೆಗಾರ್ತಿ ನೀಲಂ ಪಟೇಲ್ ಅವರ ನ್ಯಾಚುರಲ್ ಫಾಮಿರ್ಂಗ್‍ನ ಐದು ಪ್ರಮುಖ ತತ್ವಗಳನ್ನು ವಿವರವಾಗಿ ತಿಳಿಸಲಾಯಿತು. ಅದರಲ್ಲಿ ಬೀಜಾಮೃತ, ಜೀವಾಮೃತ, ಮಲ್ಚಿಂಗ್ (ಆವರಣೆ), ವಾಫ್ಸಾ ಮತ್ತು ಸ್ವಾಭಾವಿಕ ಕೀಟ ನಿಯಂತ್ರಣ ಬ್ರಹ್ಮಾಸ್ತ್ರ ಇತ್ಯಾದಿ) ತತ್ವಗಳು ಒಳಗೊಂಡಿದವು. ದೇಶಿ ಹಸುವಿನ ಆಧಾರಿತ ಕೃಷಿ, ಉತ್ಪಾದನಾ ವೆಚ್ಚದಲ್ಲಿ ಕಡಿತ, ಮಣ್ಣಿನ ಸಸ್ಯೋತ್ಪಾದಕತೆ ಹೆಚ್ಚಿಸುವುದು ಹಾಗೂ ರಾಸಾಯನಿಕರಹಿತ ಆಹಾರ ಉತ್ಪಾದನೆ ಕುರಿತು ತಜ್ಞರು ಮಾರ್ಗದರ್ಶನ ನೀಡಿದರು.
ಶಾಶ್ವತ ಕೃಷಿ ಮತ್ತು ಆತ್ಮನಿರ್ಭರ ಭಾರತದ ದಿಸೆಯಲ್ಲಿ ನ್ಯಾಚುರಲ್ ಫಾಮಿರ್ಂಗ್ ಮಹತ್ವದ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
ಈ ಕಾರ್ಯಾಗಾರದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಗ್ರಾಮೀಣ ಕೃಷಿ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ಅಧ್ಯಕ್ಷ ಶ್ರೀ ಬಾಬುರಾವ್ ಸೋಮೂರೆ (ಕಮಲನಗರ್, ಜಿ. ಬೀದರ) ಭಾಗವಹಿಸಿದರು. ಅವರು ಕಮಲನಗರ್ ತಾಲ್ಲೂಕು ಕೃಷಿ ಅಧಿಕಾರಿ ಶತ್ರುಘ್ನ ಮಾರ್ಗದರ್ಶನ ಹಾಗೂ ಶ್ರೀ ಸಾಹೇಬರ ಮಾರ್ಗದರ್ಶನದಲ್ಲಿ ಈ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಹಾಜರಿದ್ದರು. ಕಾರ್ಯಾಗಾರದಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡು ವಿವಿಧ ರಾಜ್ಯಗಳ ರೈತರೊಂದಿಗೆ ಸಂವಾದ ನಡೆಸಿದರು.
ಭುಜ್‍ನಲ್ಲಿ ನಡೆದ ಈ ರಾಷ್ಟ್ರೀಯ ಕಾರ್ಯಾಗಾರದಿಂದ ಪ್ರೇರಣೆ ಪಡೆದು ಕಮಲನಗರ್ ತಾಲ್ಲೂಕಿನ ರೈತರಿಗೆ ಶೀಘ್ರದಲ್ಲೇ ಮಾರ್ಗದರ್ಶನ ಶಿಬಿರ, ಪ್ರಾತ್ಯಕ್ಷಿಕೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಶ್ರೀ ಸೋಮೂರೆ ತಿಳಿಸಿದ್ದಾರೆ.
ನ್ಯಾಚುರಲ್ ಫಾಮಿರ್ಂಗ್ ಮೂಲಕ ರೈತರ ಆದಾಯ ಹೆಚ್ಚಿಸುವುದು, ಉತ್ಪಾದನಾ ವೆಚ್ಚ ಕಡಿಮೆ ಮಾಡುವುದು ಹಾಗೂ ಶಾಶ್ವತ ಕೃಷಿಗೆ ಉತ್ತೇಜನ ನೀಡುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು.
ರಾಷ್ಟ್ರೀಯ ಮಟ್ಟದ ಈ ಕಾರ್ಯಾಗಾರದಿಂದ ಕಮಲನಗರ್ ತಾಲ್ಲೂಕಿನವರಿಗೆ ಗೌರವ ಹೆಚ್ಚಿದ್ದು, ಅಲ್ಲದೇ ಸ್ಥಳೀಯ ರೈತರಲ್ಲಿ ಉತ್ಸಾಹದ ವಾತಾವರಣ ನಿರ್ಮಾಣವಾಗಿದೆ ಎಂದೇ ಹೇಳಬಹುದು.



























