Home ಜಿಲ್ಲೆ ಚಿಕ್ಕಲಕಿ ಕ್ರಾಸ್‌ನಲ್ಲಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಆಗ್ರಹಿಸಿ ರೈತರ ಉಪವಾಸ ಸತ್ಯಾಗ್ರಹ

ಚಿಕ್ಕಲಕಿ ಕ್ರಾಸ್‌ನಲ್ಲಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಆಗ್ರಹಿಸಿ ರೈತರ ಉಪವಾಸ ಸತ್ಯಾಗ್ರಹ

ಸಂಜೆ ವಾಣಿ ವಾರ್ತೆ
ಜಮಖಂಡಿ:ಮಾ.೨: ತಾಲೂಕಿನ ಚಿಕ್ಕಲಕಿ ಕ್ರಾಸ್‌ನಲ್ಲಿ ನಿರ್ಮಾಣವಾಗುತ್ತಿರುವ ತೋದಲಬಾಗಿ-ಚಿಕ್ಕಲಕಿ ಏತ ನೀರಾವರಿ ಯೋಜನೆ ಈಗಾಗಲೇ ಸುಮಾರು ೮೫ ಶೇಕಡಾ ಪೂರ್ಣಗೊಂಡಿದ್ದು, ಉಳಿದ ೧೫ ಶೇಕಡಾ ಕಾಮಗಾರಿ ಇನ್ನೂ ಬಾಕಿಯಿದೆ. ಯೋಜನೆಗೆ ಇದುವರೆಗೆ ಸುಮಾರು ?೫೭ ಕೋಟಿ ವೆಚ್ಚವಾಗಿದ್ದರೂ ಕಾರ್ಯ ಸಂಪೂರ್ಣಗೊAಡಿಲ್ಲದೆ ಸ್ಥಗಿತಗೊಂಡಿರುವುದರಿAದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯೋಜನೆಯನ್ನು ತಕ್ಷಣ ಪೂರ್ಣಗೊಳಿಸಿ ಕಾರ್ಯಾರಂಭಗೊಳಿಸುವAತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕೃಷ್ಣಾ ತೀರ ಹೋರಾಟ ಸಮಿತಿ ಸಹಯೋಗದಲ್ಲಿ ರೈತರು ಫೆಬ್ರವರಿ ೨೬ರಿಂದ ಚಿಕ್ಕಲಕಿ ಕ್ರಾಸ್‌ನಲ್ಲಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.

ಭಾರೀ ವೆಚ್ಚದಲ್ಲಿ ಬಹುತೇಕ ಪೂರ್ಣಗೊಂಡಿರುವ ಈ ಏತ ನೀರಾವರಿ ಯೋಜನೆ ಕಾರ್ಯಗತವಾಗದೇ ಇರುವುದರಿಂದ ಪ್ರದೇಶದ ರೈತರಿಗೆ ನೀರಾವರಿ ಸೌಲಭ್ಯ ದೊರೆಯದೆ ಸಮಸ್ಯೆ ಉಂಟಾಗಿದೆ. ಆದ್ದರಿಂದ ಉಳಿದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ನೀರಾವರಿ ಯೋಜನೆಯನ್ನು ಚಾಲನೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಚಿಕ್ಕಲಕಿ ಕ್ರಾಸ್‌ನಲ್ಲಿ ನಡೆಯುತ್ತಿರುವ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಆಗ್ರಹಿಸಿ ರೈತರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಭೇಟಿ ನೀಡಿ ರೈತರಿಗೆ ಸಾಥ್ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ೨೦೧೨-೧೩ರಲ್ಲಿ ತಾವು ಶಾಸಕನಾಗಿದ್ದ ಅವಧಿಯಲ್ಲಿ ತೋದಲಬಾಗಿ-ಚಿಕ್ಕಲಕಿ ಏತ ನೀರಾವರಿ ಯೋಜನೆಯ ಭೂಮಿಪೂಜೆಯನ್ನು ಆಗಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೆರವೇರಿಸಿದ್ದರು ಎಂದು ತಿಳಿಸಿದರು. ಕೇವಲ ಆರು ತಿಂಗಳಲ್ಲೇ ಯೋಜನೆಯ ಸುಮಾರು ೮೫ ಶೇಕಡಾ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ ನಂತರ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿದ್ದು, ಇಂದಿಗೂ ಪುನರಾರಂಭವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮಗೆ ಮತದಾನ ಮಾಡಿದ ಮತದಾರರ ಕಷ್ಟ ಸುಖಗಳನ್ನ ವಿಧಾನ ಸಭೆಯಲ್ಲಿ ಹಂಚಿಕೊAಡು ಸರ್ಕಾರದ ಮೇಲೆ ಒತ್ತಡವನ್ನು ತಂದು ಕೆಲಸಗಳನ್ನು ಮಾಡುವದು ಚುನಾಯಿತರ ಕರ್ತವ್ಯವೆಂದು ಅವರು ಹೇಳಿದರು.

ಶಾಸಕ ಜಗದೀಶ ಗುಡಗುಂಟಿ ಪ್ರತಿಭಟನಾಕರರನ್ನು ಉದ್ದೇಶಿಸಿ ಮಾತನಾಡಿದರು

ರೈತಮುಖಂಡರಾದ ಶರಣಪ್ಪ ಕರಜಗಿ, ದರೆಪ್ಪ ದಾನಗೊಂಡ ಹಾಗೂ ಸುರೇಶ್ ಹಂಚಿನಾಳ ಮಾತನಾಡಿ, ತೋದಲಬಾಗಿ-ಚಿಕ್ಕಲಕಿ ಏತ ನೀರಾವರಿ ಯೋಜನೆಯ ಉಳಿದ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸಿ ಸಂಪೂರ್ಣ ಪೂರ್ಣಗೊಳಿಸುವವರೆಗೆ ನಮ್ಮ ಉಪವಾಸ ಸತ್ಯಾಗ್ರಹವನ್ನು ಹಿಂಪಡೆಯುವುದಿಲ್ಲವೆAದು ಎಚ್ಚರಿಸಿದರು.

ಭಾರೀ ವೆಚ್ಚದಲ್ಲಿ ಬಹುತೇಕ ಪೂರ್ಣಗೊಂಡಿರುವ ಯೋಜನೆ ವರ್ಷಗಳಿಂದ ಸ್ಥಗಿತಗೊಂಡಿರುವುದು ರೈತರಿಗೆ ಅನ್ಯಾಯವಾಗಿದೆ. ಆದ್ದರಿಂದ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಕಾಮಗಾರಿಯನ್ನು ಆರಂಭಿಸಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ರೈತರಾದ ಶರಣಪ್ಪ ಕರಜಗಿ,ಮಲ್ಲಪ್ಪ ವಡಿಯರ,ಸಿದ್ರಾಯ ಸನಸಿದ್ಧ, ಸದಾಶಿವ ಕಲೂತಿ,ರಮೇಶ ಕಾಂಬಳೆ,ಅಪ್ಪಾಸಾಹೆಬ ಸೂರ್ಯವಂಶಿ,ತುಕಾರಾಮ ಮುಳಿಕ,
ಜೋತಿಬಾ ಚವ್ವಾಣ,ವಿಜಯ ಹೆಗ್ಗೂಂಡ ಸೇರಿದಂತೆ ಅನೇಕರು ಉಪವಾಸ ಸತ್ಯಾಗ್ರಹದಲ್ಲಿ ಇದ್ದರು