ಸಾಲಭಾದೆಯಿಂದ ರೈತ ಮಲ್ಲಪ್ಪ ತಾರಾಪೂರ ಆತ್ಮಹತ್ಯೆಗೆ ಶರಣು

ಅಫಜಲಪುರ: ಮಾ.1:ತಾಲೂಕಿನ ಬಂದರವಾಡ ಗ್ರಾಮದ ಮಲ್ಲಪ್ಪ ತಾರಾಪುರ(58) ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಸಂಭವಿಸಿದೆ.

ಶನಿವಾರ ಬೆಳಿಗ್ಗೆ 8 ಗಂಟೆಗೆ ತಮ್ಮ ಜಮೀನಿಗೆ ತೆರಳಿ ಜಮೀನು ತುಂಬಾ ಸುತ್ತಾಡಿ ಈ ಬಾರಿ ಯಾವುದೇ ಬೆಳೆ ಸರಿಯಾಗಿ ಬೆಳೆದಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮೃತ ರೈತ ಬ್ಯಾಂಕ್ ನಲ್ಲಿ 2 ಲಕ್ಷ, ಖಾಸಗಿ 5 ಲಕ್ಷ ರೂ.ಸಾಲ ಮಾಡಿಕೊಂಡಿದ್ದರು.ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರಿಗೆ ಇಬ್ಬರೂ ಪುತ್ರರು, ಮೂವರು ಜನ ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವಿದೆ.ಈ ಕುರಿತು ದೇವಲ ಗಾಣಗಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.