ಕಳೆ ತೆಗೆಯುವ ಸರಳಯಂತ್ರ ರೂಪಿಸಿದ ರೈತ

ಗುರುಮಠಕಲ್,ಜು.21: ಇಲ್ಲಿನ ರೈತ ತಿಮ್ಮರೆಡ್ಡಿ ಹನ್ಮಿರೆಡ್ಡಿ ಉಪ್ಪಟ್ಟಿ ಎಂಬುವವರು ತಮ್ಮ ಹೊಲದಲ್ಲಿ ಕಳೆ ತೆಗೆಯಲು ಒಂದು ಸರಳ ಯಂತ್ರ ರೂಪಿಸಿಕೊಂಡಿದ್ದಾರೆ.
ತಮ್ಮ ಮೂರು ಎಕರೆ ಸ್ವಂತ ಜಮೀನುನಲ್ಲಿ ಉದ್ದು ಮತ್ತು ತೊಗರಿ ಬಿತ್ತಿದ್ದು ಈಗ ಬೆಳೆಯ ಮಧ್ಯದಲ್ಲಿ ಕಳೆತೆಗೆಯುವ ಹಂತಕ್ಕೆ ಬಂದಿದೆ. ರೈತ ತಿಮ್ಮರೆಡ್ಡಿ ಉಪ್ಪಟ್ಟಿ ಅವರು ತಮ್ಮ ಸ್ವಂತ ಬುದ್ಧಿ ಚಾತ್ರ್ಯುದಿಂದ ಸೈಕಲ್ ವಿಡರ್ನ ಸ್ವತಹ ತಾವೇ ಮಾಡಿಕೊಂಡು ಎತ್ತುಗಳ ಸಹಾಯವಿಲ್ಲದೆ ಹೊಲದಲ್ಲಿ ಕಳೆತೆಗೆಯುತಿದ್ದಾರೆ. ರೈತ ತಿಮ್ಮರೆಡ್ಡಿ ಅವರನ್ನು ವಿಚಾರಿಸಿದಾಗ ಇದನ್ನು ತಯಾರಿಸಲು 800 ರೂಪಾಯಿಗಳು ಖರ್ಚು ಆಯಿತು. ಇದರಿಂದ ನಾನು ದಿನಾಲು ಸುಮಾರು 10 ಸಾಲುಗಳ ಮಧ್ಯದಲ್ಲಿ ಕಳೆಯನ್ನು ತೆಗೆಯುತ್ತೇನೆ. ಒಕ್ಕಲುತನ ಮಾಡುವವರು ಹೆಚ್ಚು ಹಣ ಖರ್ಚು ಮಾಡಿಕೊಳ್ಳದೆ ಸಾವಯವ ಗೊಬ್ಬರ ಬಳಸುವದರ ಜೊತೆಗೆ ಉತ್ತಮ ದವಸ ಧಾನ್ಯಗಳನ್ನು ಬೆಳೆಯಬಹುದು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.