Home ಜಿಲ್ಲೆ ರಾಮನ ಜೀವನ ಪ್ರತಿ ಕ್ಷಣವು ಮೌಲ್ಯಗಳ ಪ್ರತಿಬಿಂಬ

ರಾಮನ ಜೀವನ ಪ್ರತಿ ಕ್ಷಣವು ಮೌಲ್ಯಗಳ ಪ್ರತಿಬಿಂಬ

ಸೈದಾಪುರ:ಮಾ.27: ಶ್ರೀ ರಾಮನು ಮರ್ಯಾದಾ ಪುರುμÉೂೀತ್ತಮ ಎಂಬ ಪದವಿಯನ್ನು ಪಡೆದಿದ್ದು, ಅವರು ಜೀವನದ ಪ್ರತಿಯೊಂದು ಕ್ಷಣವೂ ನಿಯಮ, ಶಿಸ್ತು ಮತ್ತು ಧರ್ಮದ ಅನುಸರಣೆ ಎಂಬ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಎಂದು ಗ್ರಾಮದ ಹಿರಿಯ ಮುಖಂಡ ಮಹಾದೇವಪ್ಪಗೌಡ ಅಭಿಪ್ರಾಯಪಟ್ಟರು.
ಕಣೇಕಲ್ ಗ್ರಾಮದ ಅಂಜನೇಯ ದೇವಸ್ಥಾನದಲ್ಲಿ ಗ್ರಾಮಸ್ಥರ ವತಿಯಿಂದ ಶ್ರೀ ರಾಮನವಮಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಭಕ್ತರ ಹೃದಯಗಳಲ್ಲಿ ಭಕ್ತಿ, ಶಾಂತಿ ಮತ್ತು ಧರ್ಮದ ಬೆಳಕನ್ನು ಹಚ್ಚುವ ಪವಿತ್ರ ಹಬ್ಬವೇ ಶ್ರೀ ರಾಮನವಮಿ. ಇದು ಸತ್ಯ, ಧರ್ಮ ಮತ್ತು ನೀತಿಯ ಆಚರಣೆಯಾಗಿದ್ದು ಶ್ರೀ ರಾಮನ ಜೀವನ ಆದರ್ಶವು ಮಾನವ ಜೀವನಕ್ಕೆ ದಾರಿದೀಪವಾಗಿದೆ ಎಂದು ಹೇಳಿದರು.
ಇದಕ್ಕೂ ಮುಂಚಿತವಾಗಿ ದೇವಸ್ಥಾನದಲ್ಲಿ ರಾಮನಿಗೆ ವಿಶೇಷ ಪೂಜೆಗಳು, ಅಲಂಕಾರಗಳು ಮತ್ತು ಅಭಿμÉೀಕಗಳು ಜರುಗಿದವು. ಭಕ್ತರು ರಾಮನಾಮವನ್ನು ಜಪಿಸಿ, ಉಪವಾಸ ವ್ರತವನ್ನು ಆಚರಿಸಿ, ರಾಮಾಯಣ ಪಾರಾಯಣ, ಭಜನೆಗಳು ಮತ್ತು ಕೀರ್ತನೆಗಳು ಹಾಡಿದರು. ಬೆಳಗ್ಗೆ ಯಿಂದ ಸಂಜೆಯವರೆಗೂ ಆಗಮಿಸುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಈ ವೇಳೆ ಚಂದ್ರಾಯಗೌಡ, ಶರಣಯ್ಯ ಸ್ವಾಮಿ ಪ್ರಚಂಡಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಸವರಾಜ, ರಮೇಶ್ ಹಿಂದುಪುರ್, ವಿಶ್ವನಾಥ ರೆಡ್ಡಿ ಗುಂಜನೂರು, ಯಂಕಪ್ಪಗೌಡ, ಅಕ್ಷಯ ಸ್ವಾಮಿ, ಮಲ್ಲುಗೌಡ, ಬಸಯ್ಯಸ್ವಾಮಿ, ಸುರೇಶ್ ಗೌಡ ಬಿರಾದಾರ್, ಸುಭಾμï ಕಂಬಾರ್, ಸಿದ್ದಯ್ಯ ಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಿದ್ದು ಗೌಡ, ಅಂಜಪ್ಪ ಹಿಂದುಪುರ್, ಸೀನಪ್ಪ ಉಪ್ಪಾರ್, ಕೃಷ್ಣಪ್ಪ ಉಪ್ಪಾರ್, ಶ್ರೀನಿವಾಸ ಶೆಟ್ಟಿ, ಮಹೇಶ್ ಹೂಗಾರ್ ಸೇರಿದಂತೆ ಗ್ರಾಮಸ್ಥರು ಇದ್ದರು.