Home ಜಿಲ್ಲೆ ಸ್ವಯಂ-ಗಣತಿ ನಡೆಯುವಂತೆ ಪ್ರೋತ್ಸಾಹಿಸಿ

ಸ್ವಯಂ-ಗಣತಿ ನಡೆಯುವಂತೆ ಪ್ರೋತ್ಸಾಹಿಸಿ


ನವಲಗುಂದ, ಏ.೫: ಏ ೧೬ರಿಂದ ಮೇ ೧೫ರವರೆಗೆ ಜನವಸತಿ ಕಟ್ಟಡಗಳ ಸ್ಥಿತಿ, ಸೌಲಭ್ಯಗಳು ಹಾಗೂ ಸ್ವತ್ತುಗಳ ಕುರಿತು ವಿವರವಾದ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಎಸ್ ಪಿ ಪೂಜಾರ ಹೇಳಿದರು.


ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ಭಾರತ್ ಜನಗಣತಿ ೨೦೨೭ರ ಮನೆ ಪಟ್ಟಿ ಕಾರ್ಯಾಚರಣೆಯ ಮೇಲ್ವಿಚಾರಕರು ಹಾಗೂ ಗಣತಿದಾರರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಣತಿದಾರರು ತಮ್ಮ ಬ್ಲಾಕ್ ಪ್ರದೇಶಗಳಲ್ಲಿ ಏ.೧೫ ರ ವರಿಗೆ ಸ್ವಯಂ ಗಣತಿಗೆ ಮಾಡಿಕೋಳ್ಳಬಹುದು. ನಂತರ ಸಂಚರಿಸಿ ಮಾಹಿತಿ ಸಂಗ್ರಹಿಸಿಕೊಳ್ಳಬೇಕು, ಜಾಗೃತಿ ಮೂಡಿಸಿ ಹೆಚ್ಚಿನ ಪ್ರಮಾಣದಲ್ಲಿ ಸ್ವಯಂ-ಗಣತಿ ನಡೆಯುವಂತೆ ಪ್ರೋತ್ಸಾಹಿಸಬೇಕು’ ಎಂದರು.


ಕ್ಷೇತ್ರಶಿಕ್ಷಣಾಧಿಕಾರಿ ದೀಪಕ ಕುಲಕರ್ಣಿ ಮಾತನಾಡಿ ಪ್ರತಿ ಗಣತಿದಾರರು ಮನೆಮನೆಗೆ ತೆರಳಿ ಸರಿಯಾದ ಹಾಗೂ ನಿಖರ ಮಾಹಿತಿ ಸಂಗ್ರಹಿಸುವ ಮೂಲಕ ಜನಗಣತಿಯ ಯಶಸ್ಸಿಗೆ ಕೈಜೋಡಿಸಬೇಕು. ಪ್ರತಿಯೊಬ್ಬ ಗಣತಿದಾರರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮತ್ತು ಜವಾಬ್ದಾರಿಯಿಂದ ನೆರವೇರಿಸಬೇಕು’ ಸಾರ್ವಜನಿಕರೊಂದಿಗೆ ಉತ್ತಮ ಸಂವಹನ ಬೆಳೆಸಿ, ಅವರಿಗೆ ಸ್ವಯಂ-ಗಣತಿ ಕುರಿತು ಸ್ಪಷ್ಟ ಮಾಹಿತಿ ನೀಡಿ ಸಹಕಾರ ಪಡೆಯುವುದು ಅಗತ್ಯವಾಗಿದೆ’ ಎಂದರು.
ಕ್ಷೇತ್ರ ತರಬೇತಿದಾರ ಶ್ರೀಧರ್ ಲೋನಕರ, ಎನ್ ವಿ ಕುರವತ್ತಿಮಠ, ದ್ಯಾಮನಗೌಡ ಹುಲ್ಲೂರ, ಸೇರಿ ಪುರಸಭೆ ಸಿಬ್ಬಂದಿಗಳು, ಗಣತಿದಾರರು ಇದ್ದರು.