
ರಬಕವಿ-ಬನಹಟ್ಟಿ,ಮಾ.೩: ಶಿಕ್ಷಣ, ಆತ್ಮವಿಶ್ವಾಸ ಮತ್ತು ಛಲದಿಂದ ಹಿಡಿದ ಗುರಿ ತಲುಪುವ ಗಮ್ಯತೆ ಇವು ಮಹಿಳೆಯರ ಸಬಲೀಕರಣ ಹಾಗೂ ಪ್ರಗತಿಯ ಮುಖ್ಯ ಮೆಟ್ಟಿಲುಗಳಾಗಿವೆಯೆಂದು ಹೊಸೂರು-ರಬಕವಿಯ ಪದ್ಮಾವತಿ ಇಂಟರ್ನ್ಯಾಶನಲ್ ಶಾಲೆಯ ಆಡಳಿತಾಧಿಕಾರಿ ಭಾರತಿ ತಾಳಿಕೋಟಿ ಹೇಳಿದರು.
ಸೋಮವಾರದಂದು ಬನಹಟ್ಟಿಯ ಜನತಾ ಶಿಕ್ಷಣ ಸಂಘದ ಶ್ರೀತಮ್ಮಣ್ಣಪ್ಪ ಚಿಕ್ಕೋಡಿ ಕಲಾ, ವಾಣಿಜ್ಯ, ಬಿಬಿಎ, ಬಿಸಿಎ, ವಿಜ್ಞಾನ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಮಹಿಳಾ ಸಬಲೀಕರಣ ಕೇಂದ್ರ ಹಾಗೂ ಐಕ್ಯೂಎಸಿ ಘಟಕ ಜಂಟಿಯಾಗಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿ ೧೯೦೮ರಲ್ಲಿ ಮಹಿಳಾ ಕಾರ್ಮಿಕರು ಸಮಾನ ವೇತನಕ್ಕೆ ಆಗ್ರಹಿಸಿ ನಡೆಸಿದ ಹೋರಾಟ ಹಾಗೂ ೧೯೭೦ರಲ್ಲಿ ರಶಿಯಾದಲ್ಲಿ ಮಹಿಳಾ ಶೋಷಣೆಯ ವಿರುದ್ಧದ ಹೋರಾಟ ವಿಶ್ವಸಂಸ್ಥೆ ಗಮನ ಸೆಳೆದು ಮಾ.೮ನ್ನು ಅಂತರಾಷ್ಟಿçÃಯ ಮಹಿಳಾ ದಿನವೆಂದು ಘೋಷಣೆಯಾಯಿತು. ಸಮಾನತೆ, ಆರೋಗ್ಯ ರಕ್ಷಣೆ, ಶಿಕ್ಷಣ, ಶೋಷಣೆ ವಿರುದ್ಧ ಜಾಗೃತಿ ಹೆಚ್ಚಿಸುವಲ್ಲಿ ಮಹತ್ತತೆ ದೊರೆತು ಮಹಿಳೆಯರು ಸಾಮಾಜಿ ಸೇವೆ, ವ್ಯಾಪಾರ, ಉದ್ಯಮ, ವೈದ್ಯಕೀಯ, ಶಿಕ್ಷಣ, ವಿಜ್ಞಾನ, ಬಾಹ್ಯಾಕಾಶ, ಸೇನೆ ಸೇರಿದಂತೆ ಎಲ್ಲ ಕ್ಷೇತ್ರಗಳತ್ತ ಮಹಿಳೆ ಮುಕ್ತವಾಗಿ ತನ್ನ ಕ್ಷಾತ್ರಯುತ ಸೇವೆ ಸಲ್ಲಿಸಲು ಅವಕಾಶವಾಯಿತು. ಆತ್ಮವಿಶ್ವಾಸ ಮತ್ತು ಗುರಿ ಮುಟ್ಟುವ ಅಚಲ ವಿಶ್ವಾಸ, ಸಿಕ್ಕ ಅವಕಾಶದ ಸಮರ್ಥ ಬಳಕೆಯಿಂದ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಜೊತೆಗೆ ನೆಮ್ಮದಿಯುತ ಗೌರವದ ಜೀವನ ನಡೆಸಲು ಸಾಧ್ಯವಾಗುತ್ತದೆಂದರು.
ರಬಕವಿಯ ನಾಶಿ ಫುಡ್ ಪ್ರೊಡಕ್ಟ ವ್ಯವಸ್ಥಾಪಕ ನಿರ್ದೇಶಕಿ ಸ್ಮೀತಾ ನಾಶಿ ಎಲ್ಲ ಮಹಿಳೆಯರು ನಗರ ಜೀವನ ಇಷ್ಟಪಡುವ ಬದಲು ಸ್ಥಳೀಯ ಮತ್ತು ಗ್ರಾಮೀಣ ಭಾಗದಲ್ಲೂ ಸಣ್ಣ ಕೈಗಾರಿಕೆ, ಉದ್ಯಮ ನಡೆಸುವ ಮೂಲಕ ಗ್ರಾಮೀಣ ಭಾಗದಲ್ಲೂ ಉದ್ಯೋಗಾವಕಾಶ, ಆರ್ಥಿಕ ಪೂರಕ ಚಟುವಟಿಕೆಗಳು ಬೆಳೆಯಲು ಮುಂದಾಗಿ ತಾವೂ ಬೆಳೆದು ತಮ್ಮ ಪ್ರದೇಶವನ್ನು ಆರ್ಥಿಕ ಪ್ರಗತಿಯ ಕ್ಷೇತ್ರವಾಗಿಸಬೇಕು. ಮಹಿಳಾ ಸ್ವಾವಲಂಬನೆ ಮೂಡಿಸಲು ಶಿಕ್ಷಣ ಕಡ್ಡಾಯವಾಗಿದ್ದು, ಅವಕಾಶ, ಬಂಡವಾಳ, ಮಾನವಶಕ್ತಿ, ಮಾರುಕಟ್ಟೆ ಅವಶ್ಯವಾಗಿದ್ದು, ಸಮತೋಲಿತ ಮತ್ತು ಸಮಯೋಚಿತ ನಿರ್ಧಾರಗಳು ನಮ್ಮ ಗೆಲವಿಗೆ ಮುಖ್ಯವಾಗುತ್ತವೆ. ಯಶಸ್ಸು ತ್ಯಾಗ, ಕಠಿಣ ಪರಿಶ್ರಮ, ತಾಳ್ಮೆಗಳ ಅಡಿಪಾಯದಲ್ಲಿ ನಿರ್ಧರಿತವಾಗುವು ದರಿಂದ ಎಲ್ಲ ಅಂಶಗಳನ್ನು ಕೇಂದ್ರೀಕರಿಸಿ ಲಭ್ಯ ಮೂಲ ಸಂಪನ್ಮೂಲಗಳ ಬಳಕೆಯ ಮೂಲಕ ಆರ್ಥಿಕ ಕ್ರಾಂತಿ ಮಾಡಲು ಸಾಧ್ಯವೆಂದರು. ಪ್ರಸಾಸ್ತಾವಿಕ ಮಾತುಗಳಾಡಿದ ಡಾ.ಗೀತಾ ಸಜ್ಜನ ಇಂದಿನ ಆಧುನಿಕ ವಿಶ್ವದ ಪ್ರಗತಿಯಲ್ಲಿ ಮಹಿಳಾ ಶಕ್ತಿಯ ಪಾತ್ರ ಗಮನಾರ್ಹ. ಕಾಲೇಜಿನಲ್ಲಿ ಒಂದು ವಾರದವರೆಗೆ ಮಹಿಳಾ ಚಟುವಟಿಕೆಗಳು ನಡೆಯಲಿವೆಯೆಂದರು. ಡಾ.ಮಂಜುನಾಥ ಬೆನ್ನೂರ ಸ್ತಿçà ಶಿಕ್ಷಣಕ್ಕೆ ಅರ್ಹಳಲ್ಲ ಎಂಬ ಕಾಲಘಟ್ಟದಲ್ಲಿ ಮಹಿಳಾ ಶಿಕ್ಷಣಕ್ಕೆ ಅಹರ್ನಿಶಿ ಶ್ರಮಿಸಿದ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಮಹಿಳಾ ಶಿಕ್ಷಣಕ್ಕೆ ವಿರೋಧಗಳ ನಡುವೆಯೂ ಶ್ರಮಿಸಿದ್ದರಿಂದ ಹಾಗೂ ಸ್ವತಂತ್ರ ಭಾರತದ ಸಂವಿಧಾನದಲ್ಲಿ ಸಮಾನತೆ ಎತ್ತಿ ಹಿಡಿದ ಡಾ.ಅಂಬೇಡ್ಕರ ಕಾರಣಕ್ಕೆ ಭಾರತದಲ್ಲಿ ವನಿತೆಯರು ಎಲ್ಲ ಕ್ಷೇತ್ರಗಳಲಿ ಮಿಂಚುವAತಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಜಿ.ಆರ್.ಜುನ್ನಾಯ್ಕರ ನಮ್ಮ ದೇಶದಲ್ಲಿ ಮಹಿಳಾ ಸಾಕ್ಷರತೆ ಕಡ್ಡಾಯವಾಗಿಸಿ, ಸಣ್ಣ ಗುಡಿಕೈಗಾರಿಕೆಗಳು, ಉದ್ಯಮಗಳಿಗೆ ಸರ್ಕಾರ ಬೆಂಬಲಿಸಿದಲ್ಲಿ ಗ್ರಾಮೀಣ ಆರ್ಥಿಕತೆ ಬಲಿಷ್ಠವಾಗುವುದು. ಮಹಿಳಾ ಮೀಸಲಾತಿ ಹೆಚ್ಚಳದಿಂದಲೂ ಎಲ್ಲ ರಂಗಗಳಲ್ಲಿ ಮಹಿಳೆಯರು ಪ್ರಗತಿಯ ದಾಪುಗಾಲಿಡುತ್ತಿದ್ದಾರೆಂದರು.
ಸ್ಫೂರ್ತಿ ಬಿರಾದಾರ ಪ್ರಾರ್ಥಿಸಿದರು. ದೀಪಾ ಹುಬ್ಬಳ್ಳಿ ಸ್ವಾಗತಿಸಿದರು. ನರ್ಮದಾ ಗೊಂಬಿ, ಪೂಜಾ ಡಾಗಾ ನಿರೂಪಿಸಿದರು. ಸ್ನೇಹಾ ಆರುಟಗಿ ವಂದಿಸಿದರು. ವೇದಿಕೆಯಲ್ಲಿ ಡಾ.ಮನೋಹರ ಶಿರಹಟ್ಟಿ, ಡಾ.ಪ್ರಕಾಶ ಕೆಂಗನಾಳ, ರೇಷ್ಮಾ ಗಜಾಕೋಶ, ಲಕ್ಷಿö್ಮÃ ಖವಾಸಿ ಇದ್ದರು. ಕಾರ್ಯಕ್ರಮದಲ್ಲಿ ಡಾ.ಸುವರ್ಣ ವರದಾಯಿನಿ, ದಿವ್ಯಾ ದೇವಾಡಿಗ, ಶೋಭಾ ಪಟ್ಟಣ, ಶ್ವೇತಾ ಮಠದ, ವಿ.ವೈ.ಪಾಟೀಲ, ರತ್ನಾ ಗುಂಡಿ, ಶಿರೀಶ ಹಳೆಮನಿ, ಮಹಾವೀರ ಸಂಕಾರ, ಅಶ್ವಿನಿ ಮಳಲಿ, ಸೌಮ್ಯ ಸವದಿ ಸೇರಿದಂತೆ ಬಿಎ, ಬಿಕಾಂ, ಬಿಬಿಎ, ಬಿಸಿಎ, ವಿಜ್ಞಾನ ವಿಭಾಗಗಳ ವಿದ್ಯಾರ್ಥಿನಿಯರಿದ್ದರು.



























