ಡ್ರಗ್ಸ್ ಪ್ರಕರಣ;ವೃಥಾ ನನ್ನ ತೇಜೋವಧೆ;ಅಲ್ಲಮಪ್ರಭು ಕಿಡಿ

ಕಲಬುರಗಿ,ಜು.17: ಡ್ರಗ್ಸ್ ದಂಧೆಯಲ್ಲಿ ನಾನು ಯಾರಿಗೂ ಪ್ರಭಾವ ಬೀರಿಲ್ಲ. ಸುಖಾ ಸುಮ್ಮನೆ ನನ್ನ ತೇಜೋವಧೆ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ಹೇಳಿಕೆಗೆ ಶಾಸಕ ಅಲ್ಲಮಪ್ರಭು ಪಾಟೀಲ ಕಿಡಿಕಾರಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಡ್ರಗ್ ಸಾಗಣೆ ಪ್ರಕರಣದಲ್ಲಿ ಮುಂಬೈ ಪೊಲೀಸರಿಂದ ಬಂಧಿತನಾದ ಲಿಂಗರಾಜ ಕಣ್ಣಿ ನನ್ನ ಆಪ್ತ ಇದ್ದದ್ದು ನಿಜ. ಮಹಾರಾಷ್ಟ್ರ ಸರ್ಕಾರ ಯಾವುದೇ ತನಿಖೆ ಮಾಡಲಿ .ತಾಕತ್ತಿದ್ರೆ ಕಲಬುರಗಿಯಲ್ಲಿನ ಡ್ರಗ್ಸ್ ಕೇಸ್ ಸಹ ತನಿಖೆ ಮಾಡಲಿ. ಸರ್ಕಾರಕ್ಕೆ ಸಿಬಿಐ ತನಿಖೆ ಮಾಡುವಂತೆ ಪತ್ರ ಬರೆಯುತ್ತೇನೆ ಎಂದರು.
ನನಗೆ ತಾಕತ್ತಿದೆ ಅನ್ನೋ ಕಾರಣಕ್ಕೆ ದತ್ತಾತ್ರೇಯ ಪಾಟೀಲ ಅವರನ್ನು 24 ಸಾವಿರ ಮತಗಳಿಂದ ಸೋಲಿಸಿರುವೆ.ನಮ್ಮ ಸರ್ಕಾರ ಬಂದ ಮೇಲೆ ಡ್ರಗ್ಸ್ ಪ್ರಕರಣಗಳಿಗೆ ಬ್ರೇಕ್ ಹಾಕಲಾಗಿದೆ ಎಂದರು.