ದೊಡ್ಡ ಕನಸು ಕಾಣಿ, ಉನ್ನತ ಗುರಿ ಸಾಧಿಸಿ:ಪ್ರೊ.ಬಟ್ಟು ಸತ್ಯನಾರಾಯಣ

ಕಲಬುರಗಿ,ಫೆ.11-“ದೊಡ್ಡ ಕನಸು ಕಾಣಿರಿ ಮತ್ತು ಜೀವನದಲ್ಲಿ ಉನ್ನತ ಗುರಿಗಳನ್ನು ಸಾಧಿಸಿ” ಎಂದು ಸಿಯುಕೆಯ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಹೇಳಿದರು.
ನಿನ್ನೆ ಅವರು ಸಿಯುಕೆಯ ವ್ಯವಹಾರ ಅಧ್ಯಯನ ವಿಭಾಗವು ಆಯೋಜಿಸಿದ್ದ ವೃತ್ತಿ ಸಮಾಲೋಚನೆ ಮತ್ತು ಉದ್ಯೋಗ ನಿಯೋಜನೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿದ ಮಾತನಾಡುತ್ತಿದ್ದರು. ಅವರು ಮುಂದುವರೆದು ಮಾತನಾಡಿ “ನಿಮ್ಮ ಪೀಳಿಗೆಗೆ ನಮ್ಮ ಪೀಳಿಗೆಗಿಂತ ಹೆಚ್ಚಿನ ಅವಕಾಶಗಳಿವೆ. ಹಿಂದಿನ ಜನರು ಸರ್ಕಾರಿ ಉದ್ಯೋಗಗಳನ್ನು ಮಾತ್ರ ನೋಡುತ್ತಿದ್ದರು. ಆದರೆ ಇಂದು ನಿಮಗೆ ಖಾಸಗಿ ಕೈಗಾರಿಕೆಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ ಮತ್ತು ನೀವು ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಬಹುದು ಮತ್ತು ಉದ್ಯಮಿಯಾಗಬಹುದು. ಉನ್ನತ ಪದವಿಗಳನ್ನು ಹೊಂದಿರುವ ಕೆಲವರು ಕೆಳ ಹಂತದ ಉದ್ಯೋಗಗಳನ್ನು ಹುಡುಕುವುದು ದುರದೃಷ್ಟಕರ. ನೀವು ದೊಡ್ಡ ಕನಸು ಕಾಣಬೇಕು ಮತ್ತು ಜೀವನದಲ್ಲಿ ಉನ್ನತ ಗುರಿಗಳನ್ನು ಸಾಧಿಸಬೇಕು. ನೀವು ಜೀವನದಲ್ಲಿ ಒಳ್ಳೆಯ ಉದ್ಯೋಗ ಪಡೆದ ನಂತರ ನಿಮ್ಮ ಕಿರಿಯರಿಗೆ ಉದ್ಯೋಗಗಳನ್ನು ಪಡೆಯಲು ಸಹಾಯ ಮಾಡಿ, ಏಕೆಂದರೆ ಹಳೆಯ ವಿದ್ಯಾರ್ಥಿಗಳು ಉದ್ಯೋಗ ನಿಯೋಜನೆಯಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ” ಎಂದು ಹೇಳಿದರು.
ಬೆಳಗಾವಿಯ ಪೆÇ್ರಫಿಸಿಯಂಟ್ ಮೈಂಡ್ಸ್‍ನ ಸಂಸ್ಥಾಪಕ ಮತ್ತು ಸಂಪನ್ಮೂಲ ವ್ಯಕ್ತಿ ಶ್ರೀ ಸುಹಾಸ್ ರಜಪೂತ್ ಮಾತನಾಡಿ, ಉದ್ಯಮದಲ್ಲಿ ಉದ್ಯೋಗಾವಕಾಶಗಳು ಯಾವಾಗಲೂ ಇರುತ್ತವೆ. ವಿದ್ಯಾರ್ಥಿಗಳು ತಮ್ಮ ಸಾಮಥ್ರ್ಯ ಮತ್ತು ಕೌಶಲ್ಯಗಳಲ್ಲಿ ವಿಶ್ವಾಸ ಹೊಂದಿರಬೇಕು. ಉದ್ಯೋಗ ಪಡೆಯಲು ವಿಶ್ವವಿದ್ಯಾಲಯವೇ ಎಲ್ಲವನ್ನೂ ಮಾಡುತ್ತದೆ ಎಂದು ನಿರೀಕ್ಷಿಸಬೇಡಿ. ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗಾವಕಾಶದ ಎಲ್ಲಾ
ಚಟುವಟಿಕೆಗಳನ್ನು ವಿದ್ಯಾರ್ಥಿಗಳೇ ನಿರ್ವಹಿಸುತ್ತಾರೆ. ಕಂಪನಿಗಳನ್ನು ಆಹ್ವಾನಿಸುವುದು, ಕಾರ್ಯಕ್ರಮಗಳನ್ನು ಆಯೋಜಿಸುವುದು, ಉದ್ಯೋಗಾವಕಾಶ ಪ್ರಕ್ರಿಯೆಯನ್ನು ನೋಡಿಕೊಳ್ಳುವುದು ವಿದ್ಯಾರ್ಥಿಗಳೇ ಮಾಡುತ್ತಾರೆ. ಮಾನವ ಸಂಪನ್ಮೂಲ ವ್ಯವಸ್ಥಾಪಕರೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ಉದ್ಯೋಗವನ್ನು ಪಡೆಯುವುದು ಹೇಗೆ ಎಂದು ನೀವು ತಿಳಿದಿರಬೇಕು. ಲಿಂಕ್ಡ್‍ಇನ್ ಅತ್ಯಂತ ಶಕ್ತಿಶಾಲಿ ವೃತ್ತಿಪರ ನೆಟ್‍ವಕಿರ್ಂಗ್ ಮತ್ತು ಉದ್ಯೋಗ ಹುಡುಕಾಟ ವೇದಿಕೆಯಾಗಿದೆ. ಉದ್ಯೋಗವನ್ನು ಪಡೆಯಲು ಸಾಮಾಜಿಕ ಜಾಲತಾಣಗಳನ್ನು ಹೇಗೆ ಬಳಸುವುದು ಎಂದು ನೀವು ತಿಳಿದಿರಬೇಕು ಮತ್ತು ಅವುಗಳನ್ನು ಸಮರ್ಪಕವಾಗಿ
ಬಳಸಬೇಕು ಎಂದು ಹೇಳಿದರು.
ಡೀನ್ ಸ್ಕೂಲ್ ಆಫ್ ಬಿಸಿನೆಸ್ ಸ್ಟಡೀಸ್, ಪೆÇ್ರ. ಪಾಂಡುರಂಗ ಪಾತ್ತಿ ಮಾತನಾಡಿ, ಇಂದು ಅವಕಾಶಗಳು ಹೆಚ್ಚಾಗಿವೆ, ಅದೇ ಸಮಯದಲ್ಲಿ ಉದ್ಯೋಗವನ್ನು ಪಡೆಯುವುದು ಕೂಡ ತುಂಬಾ ಕಠಿಣವಾಗುತ್ತಿದೆ. ಸರಿಯಾದ ಉದ್ಯೋಗವನ್ನು ಪಡೆಯಲು ಸರಿಯಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು.
ಇದಕ್ಕೂ ಮುನ್ನ ಕಾರ್ಯಕ್ರಮ ಸಂಯೋಜಕ ಡಾ. ಸೈಲಜಾ ಕೊನೆಕ ಪ್ರಾಸ್ತಾವಿಕವಾಗಿ ಮಾತನಾಡಿ “ಇಂದಿನ ಜಗತ್ತಿನಲ್ಲಿ ಕೇವಲ ಬಲವಾದ ಶೈಕ್ಷಣಿಕ ಹಿನ್ನೆಲೆ ಸಾಕಾಗುವುದಿಲ್ಲ, ವಿದ್ಯಾರ್ಥಿಗಳು ವ್ಯಕ್ತಿತ್ವ ಕೌಶಲ್ಯ ಮತ್ತು ವೃತ್ತಿಪರ ನೆಟ್‍ವಕಿರ್ಂಗ್ ಹೊಂದಿರಬೇಕು. ಉದ್ಯೋಗ ನಿಯೋಜನೆಗಾಗಿ ವೃತ್ತಿಪರ ನೆಟ್‍ವಕಿರ್ಂಗ್ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಉದ್ಯೋಗ ನಿಯೋಜನೆಗಾಗಿ ಎಲ್ಲಾ ವೃತ್ತಿಪರ ನೆಟ್‍ವಕಿರ್ಂಗ್ ಕೌಶಲ್ಯಗಳನ್ನು ಕಲಿಯಲು ಈ ಕಾರ್ಯಾಗಾರವು ನಿಮಗೆ ಸಹಾಯ ಮಾಡುತ್ತದೆ” ಎಂದು ಹೇಳಿದರು.
ಡಾ. ಎಂ. ಜೋಹೈರ್ ಸ್ವಾಗತಿಸಿದರು, ಸಚಿನ್ ಸಿಂಗ್ ಶೇಕಾವತ್ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಡಾ. ಶ್ರೀಲಕ್ಷ್ಮಿ ವಂದಿಸಿದರು. ಈ ಸಂದರ್ಭದಲ್ಲಿ ಪೆÇ್ರ. ವಿಜಯಕುಮಾರ, ಡಾ. ಗಣಪತಿ ಬಿ ಸಿನ್ನೂರ, ಡಾ. ಶುಷ್ಮಾ, ಡಾ. ಸಫಿಯಾ ಪರ್ವೀನ್, ಡಾ. ಮಹೇಂದ್ರ, ಡಾ. ಶಿಯವಕುಮಾರ ಬೆಳ್ಳಿ, ಡಾ. ನಿರಂಜನ್ ಪೂಜಾರ, ಇತರ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.