
ಕಲಬುರಗಿ:ಡಿ.19: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಾರ್ಯಕ್ರಮ ವೊಂದರಲ್ಲಿ ವೇದಿಕೆ ಮೇಲೆ ವೈದ್ಯೆಯ ಹಿಜಾಬ್ ಎಳೆದಿರುವ ಘಟನೆಯನ್ನು ಕಾಂಗ್ರೇಸ್ ಮುಖಂಡ ಹಾಗೂ ಖ್ಯಾತ ವೈದ್ಯರಾದ ಡಾ.ಎಸ್.ಬಿ.ಕಾಮರಡ್ಡಿ ಖಂಡಿಸಿದ್ದಾರೆ.
ಈ ಕುರಿತು ಪತ್ರೀಕಾ ಪ್ರಕಟಣಿ ಹೋರಡಿಸಿದ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ ಅವರು ಮುಸ್ಲಿಂ ಮಹಿಳಾ ವೈದ್ಯರ ನೇಮಕಾತಿ ಪತ್ರವನ್ನು ಸ್ವೀಕರಿಸುವಾಗ ಒಪ್ಪಿಗೆಯಿಲ್ಲದೆ ಮುಸ್ಲಿಂ ಮಹಿಳೆಯ ಹಿಜಾಬ್ನಲ್ಲಿ ದೈಹಿಕವಾಗಿ ಹಸ್ತಕ್ಷೇಪ ಮಾಡಿ ತೆಗೆದುಹಾಕಿರುವ ಅಸಹ್ಯಕರ ಕೃತ್ಯವನ್ನು ಖಂಡಿಸಿದರು.
ಸಾರ್ವಜನಿಕ ವೇದಿಕೆಯಲ್ಲಿ ಮಹಿಳೆಯ ಘನತೆ ಮತ್ತು ನಮ್ರತೆಯನ್ನು ಗೌರವಿಸಬೇಕಿದೆ. ಅಧಿಕಾರವು ಅವರ ಗಡಿಗಳನ್ನು ಉಲ್ಲಂಘಿಸಲು ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದು, ನಿತೀಶ್ ಅವರು ಮಹಿಳೆಯ ಬಳಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

























