Home ಜಿಲ್ಲೆ ಕಲಬುರಗಿ ಶಹಾಬಾದದಲ್ಲಿ ಡಾ. ಫಾರುಕ್ ಮಣ್ಣೂರರಿಂದ ಸೌಹಾರ್ದ ಇಫ್ತಾರ್ ಕೂಟ

ಶಹಾಬಾದದಲ್ಲಿ ಡಾ. ಫಾರುಕ್ ಮಣ್ಣೂರರಿಂದ ಸೌಹಾರ್ದ ಇಫ್ತಾರ್ ಕೂಟ

ಶಹಾಬಾದ : ಮಾ.13:ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಒಂದು ತಿಂಗಳುಗಳ ಕಾಲ ನಡೆಯುವ ಉಪವಾಸ ವ್ರತದ ಹಿನ್ನೆಲೆಯಲ್ಲಿ ಶಹಾಬಾದ ಪಟ್ಟಣದಲ್ಲಿ ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಮುಖ್ಯಸ್ಥ ಹಾಗೂ ಸಮಾಜ ಸೇವಕ ಡಾ. ಫಾರುಕ್ ಮಣ್ಣೂರ ಅವರು ಇಫ್ತಿಯಾರ್ ಕೂಟ ಆಯೋಜನೆ ಮಾಡಲಾಗಿತ್ತು. ಇಫ್ತಿಯಾರ್ ಕೂಟದಲ್ಲಿ ಹಿಂದು-ಮುಸ್ಲಿಂ ಬಾಂಧವರಿಬ್ಬರು ಭಾಗಿಯಾಗುವ ಮೂಲಕ ಭಾವೈಕ್ಯತೆಯನ್ನು ಮೆರೆದರು.

ಈ ಸಂದರ್ಭದಲ್ಲಿ ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಮುಖ್ಯಸ್ಥ ಹಾಗೂ ಸಮಾಜ ಸೇವಕ ಡಾ. ಫಾರುಕ್ ಮಣ್ಣೂರ ಮಾತನಾಡಿ ಸಾಮಾಜಿಕ ಜೀವನದಲ್ಲಿ ಸೌಹಾರ್ದಯುತವಾಗಿ ಬದುಕುವುದು ಹೇಗೆ ಎಂಬುದನ್ನು ಕಲಿತುಕೊಳ್ಳುವುದೇ ಇಫ್ತಾರ್ ಕೂಟದ ಉದ್ದೇಶಚಾಗಿದೆ. ಪ್ರೀತಿ, ಭಾಂದವ್ಯ, ಬ್ರಾತೃತ್ವ ಭಾವನೆಯನ್ನು ಮೂಡಿಸಲು ಈ ಇಫ್ತಾರ್ ಕೂಟವನ್ನು ಆಯೋಜನೆ ಮಾಡಲಾಗಿದೆ” ದುಶ್ಚಟಗಳಿಂದ ದೂರವಿದ್ದು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆದಲ್ಲಿ ಸೌಹಾರ್ಧ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಹೇಳಿದರು.

ಜಮಿಯಾ ಮಸಜಿದ್ ಕಮಿಟಿ ಅಧ್ಯಕ್ಷ ಮತೀನ್ ಪಟೇಲ್ ಎಮ್,ಆರ್.ಎಲ್ ಮಾತನಾಡಿ ‘ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಗೌರವವನ್ನು ಬೆಳೆಸಲು ಸರ್ವಧರ್ಮ ತತ್ವದ ಸಾರವನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ವಿಭಿನ್ನ ಧರ್ಮಗಳ ಸಾರ ಒಂದೇ ಮಾನವೀಯ ಮೌಲ್ಯಗಳನ್ನು ಸಾರುತ್ತದೆ ಎಂಬುದನ್ನು ಜನರಿಗೆ ತಿಳಿಸಲು ಸೌಹಾರ್ದ ಕೂಟಗಳಂತಹ ಕಾರ್ಯಕ್ರಮಗಳು ಮುಖ್ಯ ಪಾತ್ರವಹಿಸುತ್ತವೆ’ ಎಂದರು.

ಈ ಸಂದರ್ಭದಲ್ಲಿ ಅPI ಪರುಶುರಾಮ ವನಾಜುಕರ್ .ಜನಾಬ್ ಫಕ್ರುದ್ದೀನ್ ಸಾಹೇಬ್ .ರಾಚಯ್ಯ ಸ್ವಾಮಿ.ಜನಾಬ್ ಜಮೀರ್ ಅಹ್ಮದ್ ಪಟ್ವೇರ್ಗರ್ .ಮೊಹಮ್ಮದ್ ಮಸ್ತಾನ್..ಡಾ ಅಹ್ಮದ್ ಪಟೇಲ್
ಜನಾಬ್ ಅಬ್ದುಲ್ ಗಣಿ .ಅಮ್ಜದ್ ಜಮಾದಾರ್ . ಹರೀಶ್ ಕಾರ್ಣಿಕ್ .ಮೊಹಮ್ಮದ್ ಜುನೈದ್. ಮೊಹಮದ್ ಇಮ್ರಾನ್.ಸೋಯಲ್ ಕುಸ್ರೊ
ಹಾಗೂ ಇನ್ನಿತರರು ಉಪಸ್ತಿತರಿದ್ದರು.


ಪವಿತ್ರ ರಂಜಾನ್ ಮಾಸದಲ್ಲಿ ಸರ್ವಧರ್ಮ ತತ್ವದ ಸಾರವನ್ನು ತಿಳಿದುಕೊಳ್ಳಲು ಇಂತಹ ಸೌಹಾರ್ದತೆಯ ಕೂಟಗಳು ಅತ್ಯಂತ ಅವಶ್ಯಕವಾಗಿವೆ .

ಡಾ. ಫಾರುಕ್ ಮಣ್ಣೂರ
ಸಮಾಜ ಸೇವಕ