
ಚಿಂಚೋಳಿ:ಏ.5: ತಹಸಿಲ್ ಕಾರ್ಯಾಲಯದಲ್ಲಿ ಹಸಿರು ಕ್ರಾಂತಿಯ ಹರಿಕಾರ ಭಾರತ ಮಾಜಿ ಉಪ ಪ್ರಧಾನಿಗಳಾದ ಡಾ. ಬಾಬು ಜಗಜೀವನರಾಮ್ ಅವರ 119ನೇ ಜಯಂತೋತ್ಸವ ಆಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಚಿಂಚೋಳಿಯಲ್ಲಿ ಬೆಳಗ್ಗೆ 9 ಗಂಟೆಗೆ ಡಾ. ಬಿ ಆರ್ ಅಂಬೇಡ್ಕರ್ ವತದಿಂದ ಡಾ. ಬಾಬು ಜಗಜೀವನರಾಮ್ ಅವರ ಭಾವಚಿತ್ರದೊಂದಿಗೆ ಬೃಹತ್ ಮೆರವಣಿಗೆಯನ್ನು ಪ್ರಜಾಸೌಧದ ಕಾರ್ಯಾಲಯ ವರೆಗೆ ಮೆರವಣಿಗೆಯನ್ನು ಮಾಡಲಾಯಿತು ಕಾರ್ಯಕ್ರಮದ ಉದ್ದೇಶಿಸಿ ಕಾರ್ಯಕ್ರಮದ ವಿಶೇಷ ಉಪನ್ಯಾಸವನ್ನು ಕಲಬುರ್ಗಿ ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕರಾದ ಡಾ. ಮಲ್ಲಿಕಾರ್ಜುನ್ ಸಾವರ್ಕರ್, ಅವರು ಮಾತನಾಡಿ ಹಸಿರು ಕ್ರಾಂತಿಯ ಹರಿಕಾರ ಭಾರತ ಮಾಜಿ ಉಪ ಪ್ರಧಾನಿಗಳಾದ ಡಾ. ಬಾಬು ಜಗಜೀವನರಾಮ್, ಅವರ ತತ್ವ ಸಿದ್ಧಾಂತವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕು ಎಂದು ಹೇಳಿದರು ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಗ್ರೇಟ್ ತಹಸೀಲ್ದಾರ ವೆಂಕಟೇಶ್ ದುಗ್ಗನ್, ತಾಲೂಕ ಪಂಚಾಯತ ಕಾರ್ಯನಿರ್ವಕ ಅಧಿಕಾರಿಗಳಾದ ಸಂತೋಷ್ ಚೌವ್ಹಾಣ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಡಾ. ಶೃತಿ ಎಮ್, ಪುರಸಭೆ ಅಧಿಕಾರಿಗಳಾದ ಕಾಶಿನಾಥ ಧನ್ನಿ,ಬಿಸಿಎಮ್ ತಾಲೂಕಾಧಿಕಾರಿಗಳಾದ
ಅನುಸೂಯ ಚೌವ್ಹಾಣ, ತಾಲೂಕ ವೈದ್ಯಾಧಿಕಾರಿಗಳಾದ ಡಾ. ಮಮ್ಮದ್ ಗಫರ, ತಾಲೂಕ , ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷರಾದ ಬಸವರಾಜ ಮಲಿ, ಕಲಬುರಗಿ ಜಿಲ್ಲಾ ಕರ್ನಾಟಕ ಮಾದರ ಮಹಾಸಭಾ ಅಧ್ಯಕ್ಷರಾದ ಗೋಪಾಲರಾವ’ಕಟ್ಟಿಮನಿ, ಮಾದಿಗ ಸಮಾಜದ ಮುಖಂಡರಾದ ಜಗನ್ನಾಥ ಕಟ್ಟಿ, ನರಸಪ್ಪ ಕಿವಡನೋರ, ನಾಗಾರ್ಜುನ ಕಟ್ಟಿ, ನರಸಪ್ಪ ಕಿವಡನೋರ, ಶಾಮರಾವ ಓಂಕಾರ, ಪ್ರದೀಪ್ ಮೇತ್ರಿ, ಶರಣಪ್ಪ ನೊತಿಹೊಲಾ, ಮಚೇಂದರ ಶೇರಿಕಾರ, ಸುನಿಲ್ ಸಲಗರ, ಮತ್ತು ಅನೇಕ ಮಾದಿಗ ಸಮಾಜದ ಮುಖಂಡರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು




















