Home ಜಿಲ್ಲೆ ಕಲಬುರಗಿ ಡಾ. ಅಂಬೇಡ್ಕರ್ ವ್ಯಕ್ತಿತ್ವ ವಿಶ್ವಕ್ಕೆ ಮಾದರಿ: ಶರಣಪ್ಪ ಡಿ

ಡಾ. ಅಂಬೇಡ್ಕರ್ ವ್ಯಕ್ತಿತ್ವ ವಿಶ್ವಕ್ಕೆ ಮಾದರಿ: ಶರಣಪ್ಪ ಡಿ

ಕಲಬುರಗಿ:ಏ.5: ದೇಶದ ಜನರಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ತೋರಿಸಿದ ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ವ್ಯಕ್ತಿತ್ವ ಮಾದರಿಯಾಗಿದೆ. ಇಂತಹ ಮಹಾನ್ ಪುರುಷರ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ನಗರ ಪೆÇಲೀಸ್ ಆಯುಕ್ತ ಡಾ. ಶರಣಪ್ಪ ಡಿ ಹೇಳಿದರು.

ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ರವರ 135 ಜಯಂತ್ಯೋತ್ಸವದ ನಿಮಿತ್ಯ ಶನಿವಾರ ಎಮ್.ಎಸ್.ಕೆ.ಮಿಲ್ ಮೈದಾನ, ದೀಕ್ಷಾ ಭೂಮಿ, ಕಣ್ಣಿ ಮಾರ್ಕೆಟ್ ದಲ್ಲಿ ಏರ್ಪಡಿಸಿದ್ದ ಜೈಭೀಮ್ ಕ್ರಿಕೆಟ್ ಟ್ರೋಫಿ ಸಿಜನ್ -2 ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬಹುದು. ಮಹಾನ್ ನಾಯಕರ ಸ್ಮರಣಾರ್ಥ ಪಂದ್ಯಾವಳಿ ನಡೆಸುತ್ತಿರುವುದು ಸಂತಸದ ವಿಷಯ ಎಂದರು. ನಂತರ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ, ಕ್ರೀಡಾಕೂಟ ಏರ್ಪಡಿಸುವುದರ ಮೂಲಕ ಸ್ಪರ್ಧಾ ಮನೋಭಾವ ಬೆಳೆಸಲಾಗುತ್ತಿದೆ. ಗೆಲ್ಲುವುದಕ್ಕಿಂತ ಭಾಗವಹಿಸುವ ಮನೋಭಾವ ಬೆಳೆಯಲಿ. ಪ್ರತಿಯೊಬ್ಬ ಆಟಗಾರರು ತೀರ್ಪುಗಾರರ ನಿರ್ಣಯಕ್ಕೆ ಬದ್ಧರಾಗಿರಬೇಕು. ಇಂತಹ ಉತ್ತಮ ಪಂದ್ಯಾವಳಿ ಏರ್ಪಡಿಸಿದ ಎಲ್ಲರಿಗೂ ಧನ್ಯವಾದ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಮಹಾಪೌರರಾದ ವಿಶಾಲ್ ಧರ್ಗಿ, ಮಹಾನಗರ ಪಾಲಿಕೆ ಸದಸ್ಯ ವಿಶಾಲ್ ನವರಂಗ್ 135ನೇ ಜಿಲ್ಲಾ ಜಯಂತೋತ್ಸವ ಸಮಿತಿ ಅಧ್ಯಕ್ಷ ಅಶೋಕ ವೀರನಾಯಕ, ಪ್ರಚಾರ ಸಮಿತಿ ಅಧ್ಯಕ್ಷ ಡಾ. ಅರುಣಕುಮಾರ ಕುರನೆ, ರಾಜೀವ್ ಜಾನೆ, ಮಲ್ಲಪ್ಪ ಹೊಸ್ಮನಿ, ದೇವಾ ಸಿನ್ನೂರಕರ, ಸಂತೋಷ್ ಹಾದಿಮನಿ, ಸುರೇಶ ಹಾದಿಮನಿ, ದಿಗಂಬರ ಬೆಳಮಗಿ, ಗಣೇಶ ಒಳಕೇರಿ, ಎಸ್. ಎಸ್ ತಾವಡೆ,ದಿನೇಶ್ ದೊಡ್ಡಮನಿ, ಡಾ. ಜಗನಾಥ ಪಟ್ಟಣಕರ, ನಿಜಲಿಂಗ ದೊಡ್ಮನಿ, ಜೈಭೀಮ್ ಕ್ರಿಕೆಟ್ ಟೂರ್ನಮೆಂಟ್ ಸಮಿತಿ ಅಧ್ಯಕ್ಷ ಚಂದ್ರಕಾಂತ ಶಿರೋಳೆ, ಪ್ರಧಾನ ಕಾರ್ಯದರ್ಶಿ ಸಿದ್ದಾರೂಢ ಖಜೂರಿ, ಉಪಾಧ್ಯಕ್ಷ ಡಾ. ಅಶೋಕ ದೊಡ್ಡಮನಿ ಸೇರಿದಂತೆ ಅನೇಕರು ಇದ್ದರು.

ತಂಡದಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದು ಎಪ್ರೀಲ್ 12ರವರೆಗೆ ಐಪಿಎಲ್ ಮಾದರಿಯಲ್ಲಿ ಪಂದ್ಯಾವಳಿಗಳು ನಡೆಯಲಿವೆ. ವಿಜೇತ ತಂಡಕ್ಕೆ 1.50 ಲಕ್ಷಗಳು, ರನ್ನರ್ ಆಫ್ ಗೆ 75 ಸಾವಿರ ರೂ ಇದಲ್ಲದೆ ಮ್ಯಾನ್ ಆಫ್ ದಿ ಮ್ಯಾಚ್, ಮ್ಯಾನ್ ಆಫ್ ದಿ ಸೀರಿಜ್, ಉತ್ತಮ ಬ್ಯಾಟ್ಸಮ್ಯಾನ್, ಉತ್ತಮ ಬೌಲರ್ ಸೇರಿದಂತೆ ಅನೇಕ ಬಹುಮಾನಗಳು ಕೊಡಲಾಗುತ್ತಿದೆ.