Home ಜಿಲ್ಲೆ ನಿವೃತ್ತ ಸರ್ಕಾರಿ ನೌಕರರ ಪಿಂಚಣಿ ಕಡಿತಗೊಳಿಸಬೇಡಿ

ನಿವೃತ್ತ ಸರ್ಕಾರಿ ನೌಕರರ ಪಿಂಚಣಿ ಕಡಿತಗೊಳಿಸಬೇಡಿ

ಅಥಣಿ : ಮಾ.27:ನಿವೃತ್ತ ಸರ್ಕಾರಿ ನೌಕರರಿಗೆ ನೀಡುತ್ತಿರುವ ಪಿಂಚಣಿಯಲ್ಲಿ ಯಾವುದೇ ಸೌಲಭ್ಯ ಕಡಿತಗೊಳಿಸಬಾರದು ಎಂದು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಥಣಿ ತಾಲೂಕ ಘಟಕದ ಅಧ್ಯಕ್ಷ ಎಸ್. ಎಸ್. ಹೂಟಿ ಆಗ್ರಹಿಸಿದರು.
ಅವರು ಇಲ್ಲಿನ ಮಿನಿ ವಿಧಾನಸೌಧ ತಹಸೀಲ್ದಾರ್ ಕಾರ್ಯಾಲಯದಲ್ಲಿ ಗ್ರೇಡ್ 2 ತಹಸೀಲ್ದಾರ್ ಬಿ ವೈ ಹೊಸಕೇರಿ ಅವರಿಗೆ ಮನವಿ ಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಇತ್ತೀಚಿಗೆ ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಆರ್ಥಿಕ ಬಿಲ್‍ನಲ್ಲಿ 2025ರ ಏಪ್ರಿಲ್ 1ಕ್ಕಿಂತ ಮುಂಚೆ ಸೇವಾ ನಿವೃತ್ತಿ ಹೊಂದಿದ ಸರ್ಕಾರಿ ನೌಕರರಿಗೆ ನೀಡುವ ಪಿಂಚಣಿ ಮತ್ತು ಕೌಟುಂಬಿಕ ಪಿಂಚಣಿಯಲ್ಲಿನ ಕೆಲವು ಸೌಲಭ್ಯ ಕಡಿತಗೊಳಿಸುವುದಾಗಿ ತಿಳಿಸಿದ್ದಾರೆ. ಇದರಿಂದ ನಿವೃತ್ತ ನೌಕರರು ಮತ್ತು ಅವರನ್ನು ಅವಲಂಬಿಸಿದ ಕುಟುಂಬಸ್ಥರು ಸಂಕಷ್ಟಕ್ಕೆ ಸಿಲುಕಲಿದ್ದು, ಯಾವುದೇ ಸೌಲಭ್ಯ ಕಡಿತಗೊಳಿಸಬಾರದು ಎಂದು ಒತ್ತಾಯಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಥಣಿ ತಾಲೂಕ ನಿವೃತ್ತ ನೌಕರರ ಸಂಘದ ಪ್ರಕಾಶ ಖೋತ, ಐ. ಕೆ. ಕುಂಬಾರ, ಆರ್. ಎಸ್. ಚಿಗರಿ, ಶಿರಾಗಾಂವಕರ, ಎಸ್. ಎ. ಗಸ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.