
ಕಲಬುರಗಿ.ಅ.23: ದೀಪಾವಳಿಯ ಮಹಾಪರ್ವವನ್ನು ನಗರದ ಸಂತ ಶ್ರೀ ಆಸಾರಾಮ್‍ಜೀ ಬಾಪು ಆಶ್ರಮದಲ್ಲಿ ಭವ್ಯವಾಗಿ ಆಚರಿಸಲಾಯಿತು.
ಸಂತ ಶ್ರೀ ಆಸಾರಾಮ್‍ಜೀ ಮಾನವ ಉತ್ಥಾನ ಟ್ರಸ್ಟ್ ಮೂಲಕ ಬಡವರು ಹಾಗೂ ಅಗತ್ಯವಂತರ ದಿನನಿತ್ಯದ ಜೀವನಕ್ಕೆ ಉಪಯೋಗವಾಗುವ ವಸ್ತುಗಳನ್ನು ವಿತರಿಸಲಾಯಿತು. ದೇವನಾಮ ಜಪ, ಭಜನೆ ಮತ್ತು ಕೀರ್ತನದ ಮೂಲಕ ಅವರ ಹೃದಯಗಳಲ್ಲಿ ಭಕ್ತಿ ಮತ್ತು ಸಂತೋಷದ ಕಿರಣ ಹರಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂತ ಶ್ರೀ ಆಸಾರಾಮ್‍ಜೀ ಮಾನವ ಉತ್ಥಾನ ಟ್ರಸ್ಟ್, ಕಲಬುರ್ಗಿಯ ಮೋಹನ್ ಲಾಡ್ಜ್ ಎದುರಿನ ನಿರ್ಮಾಣಾಧೀನ ಆಶ್ರಮದ ಕಟ್ಟಡದಲ್ಲಿ ಎಲ್ಲಾ ಭಕ್ತರನ್ನು ಆಹ್ವಾನಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷರಾಗಿ ಎಸ್.ವೈ. ಪಾಟೀಲ ಹಾಗೂ ಇತರ ಸದಸ್ಯರು , ಭಕ್ತರು ಹಾಜರಿದ್ದರು.
ಎಲ್ಲರೂ ಪೂಜ್ಯ ಬಾಪುಜಿಯ ಪಾವನ ಸಂದೇಶವನ್ನು ಎಲ್ಲರಿಗೂ ತಲುಪಿಸಿ, ದೀಪಾವಳಿಯ ನಿಜವಾದ ಅರ್ಥವಾದ ದಯೆ, ಸೇವೆ ಮತ್ತು ಭಕ್ತಿಯ ಬೆಳಕನ್ನು ಎಲ್ಲರ ಮನಗಳಲ್ಲಿ ಪ್ರಜ್ವಲಿಸಿದರು.






























