ಧನುರ್ಮಾಸ ಭಜನೆ ಮುಕ್ತಾಯ, ಚಾಮುಂಡೇಶ್ವರಿ ಮೆರವಣಿಗೆ

ಕೋಲಾರ:- ನಗರದ ಗಲ್ ಪೇಟೆ ಹಾಗೂ ಕಿಲಾರಿಪೇಟೆಯಲ್ಲಿ ಒಂದು ತಿಂಗಳ ಪೂರ್ತಿ ಧನುರ್ಮಾಸ ಪ್ರಯುಕ್ತ ನೂರಾರು ಜನ ಮಕ್ಕಳು ಗುರುಗಳೊಂದಿಗೆ ಭಜನೆ ನಡೆಸುತ್ತಾ ನಗರ ಸಂಕೀರ್ತನೆ ನಡೆಸಿಕೊಂಡು ಬರುವ ಸಂಪ್ರದಾಯ ಈಬಾರಿಯೂ ನಡೆದಿದ್ದು, ಭಜನೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳಿಗೆ ಎರಡೂ ಕಡೆ ಪ್ರತ್ಯೇಕವಾಗಿ ನಡೆದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿದ್ದು, ಅದಕ್ಕೂ ಮುನ್ನ ಚಾಮುಂಡೇಶ್ವರಿ ದೇವಿಯ ಮೆರವಣಿಗೆಯಲ್ಲಿ ಮಕ್ಕಳು ಪಾಲ್ಗೊಂಡರು.


ಗಲ್ ಪೇಟೆಯಲ್ಲಿ ದಿವಂಗತ ಅನಂತರಾಜು ಕುಟುಂಬದವರು ತಿಂಗಳು ಪೂರ್ತಿ ಭಜನೆಯಲ್ಲಿ ಪಾಲ್ಗೊಂಡ ಮಕ್ಕಳಿಗೆ ಬಹುಮಾನ ವಿತರಿಸಿದರೆ ಕಿಲಾರಿಪೇಟೆಯಲ್ಲಿ ಈ ಭಾಗದ ಮುಖಂಡ ಮೇಸ್ತ್ರಿ ನಾರಾಯಣಸ್ವಾಮಿ ಕುಟುಂಬದವರು ಮಕ್ಕಳಿಗೆ ಬಹುಮಾನ ವಿತರಿಸಿದರು.


ಇದೇ ಸಂದರ್ಭದಲ್ಲಿ ಗಲ್‌ಪೇಟೆ ಚಾಮುಂಡೇಶ್ವರಿ ದೇವಾಲಯ, ಕಿಲಾರಿಪೇಟೆಯ ವೇಣುಗೋಪಾಲಸ್ವಾಮಿ ದೇವಾಲಯಗಳನ್ನು ಹೂಗಳಿಂದ ಅಲಂಕರಿಸಲಾಗಿದ್ದು, ದೇವಾಲಯದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಈ ಭಾಗದ ನೂರಾರು ಮಂದಿ ಭಾಗವಹಿಸಿದ್ದರು.


ಕಳೆದ ಒಂದು ತಿಂಗಳಿಂದ ಧನುರ್ಮಾಸದ ಭಜನೆಗೆ ಚುಮುಚುಮು ಚಳಿಯಲ್ಲಿ ಪಾಲ್ಗೊಂಡಿದ್ದ ಮಕ್ಕಳು ಇಂದು ಭಜನೆಯ ಕೊನೆದಿನ ಸಂಭ್ರಮದಿಂದ ಭಾಗವಹಿಸಿದ್ದರು.


ಭಜನೆಯ ಕೊನೆ ದಿನವಾದ ಮಕರ ಸಂಕ್ರಾಂತಿ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ಇಡೀ ತಿಂಗಳು ಸಂಕೀರ್ತನೆಯಲ್ಲಿ ಪಾಲ್ಗೊಂಡ ಮಕ್ಕಳಿಗೆ ಸಂಕ್ರಾಂತಿಯಂದು ಬಹುಮಾನ ವಿತರಿಸುವ ಸಂಪ್ರದಾಯ ನಡೆದು ಬಂದಿದ್ದು ಎಲ್ಲರಿಗೂ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.


ಗಲ್ ಪೇಟೆಯಲ್ಲಿ ಭಜನೆ ಸಮಾರೋಪದಲ್ಲಿ ಗುರುಗಳಾದ ನಾರಾಯಣಪ್ಪ, ಮುಖಂಡರಾದ ನಾಗರಾಜ್, ಕೆ.ಎಂ.ಶ್ರೀನಿವಾಸ್, ಪ್ಲಂಬರ್ ವೆಂಕಟೇಶ್, ರಾಮಣ್ಣ ಮತ್ತಿತರಿದ್ದು, ಪಿ.ವಿ.ಸುರೇಶ್ ನಿರೂಪಿಸಿದರು. ಭಜನಾ ಮಂಡಳಿಯ ೬೦ ಮಕ್ಕಳು ಗಲ್ ಪೇಟೆ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಕಿಲಾರಿಪೇಟೆಯಲ್ಲಿ ನಡೆದ ಭಜನೆ ಸಮಾರೋಪದಲ್ಲಿ ಮೇಸ್ತ್ರಿ ನಾರಾಯಣಸ್ವಾಮಿ, ಕೆ.ವಿ.ಚೌಡಪ್ಪ, ಮುನಿಸ್ವಾಮಪ್ಪ, ಮುನಿವೆಂಕಟಯಾದವ್, ಕೆ.ಎನ್.ವೆಂಕಟೇಶ್, ಕೆ.ಎನ್.ಮುನಿಕೃಷ್ಣ, ಎಂ.ಮಣಿ, ಶಬರೀಷ್ ಯಾದವ್, ಪ್ರಭಾಕರ್, ವಿಶ್ವನಾಥ್, ಕೆ.ವಿ.ರಮೇಶ್, ಒಳ್ಳೆಪ್ಪ, ಮುನಿರಾಮಪ್ಪ, ಮುನಿರಾಜಪ್ಪ, ಮೇಸ್ತ್ರಿ ಚೌಡಪ್ಪ, ರಮೇಶ್‌ಯಾದವ್, ಚಿನ್ನಪ್ಪಿ, ಶಬರಿ, ಜಿ.ಕೃಷ್ಣಮೂರ್ತಿ, ಕೆ.ಜೆ.ಬಾಬು, ಪುರುಷೋತ್ತಮ್, ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್, ಕೆ.ಎಸ್.ಗಣೇಶ್, ರಾಮಕೃಷ್ಣ, ಚಲಪತಿ, ವೆಂಕಟರಾಮ್,ಪದ್ಮನಾಭ್,ಭಜನೆ ಪ್ರಭಾಕರ್, ಗೋಪಿ, ಕಾರಂಜಿಕಟ್ಟೆ ರವಿ, ವೈರ್‌ಲೆಸ್ ವೆಂಕಟಸ್ವಾಮಣ್ಣ ಪೋಸ್ಟ್ ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.