ಹಲಚೇರಾದಲ್ಲಿ ಭಕ್ತಿಭಾವದ ಮಹೋತ್ಸವ: ಜಗದೀಶ್ವರ ದೇವಾಲಯ ಕಳಸಾರೋಹಣ

ಕಾಳಗಿ,ಫೆ.21-ಕಾಶಿಯಲ್ಲಿ ವಿಶ್ವನಾಥ ನೆಲೆಸಿರುವಂತೆ ದಕ್ಷಿಣ ಕಾಶಿಯಾಗಿ ಖ್ಯಾತಿ ಪಡೆದ ಕಾಳಗಿ ತಾಲ್ಲೂಕಿನ ಹಲಚೇರಾ ಗ್ರಾಮದಲ್ಲಿ ಜಗದೀಶ್ವರನ ಮಹಿಮೆ ಮತ್ತೆ ಪ್ರತಿಷ್ಠಿತಗೊಂಡಿದೆ. ನೂತನ ಜಗದೀಶ್ವರ ದೇವಾಲಯದ ಕಳಸಾರೋಹಣ, ಆಮೆ ಹಾಗೂ ನಂದಿ ಮೂರ್ತಿ ಪ್ರತಿಷ್ಠಾಪನೆಯು ಶ್ರೀಗಳ ಅಮೃತ ಹಸ್ತದಿಂದ ನೆರವೇರಿಸಿದರು.ಕಾರ್ಯಕ್ರಮ ಭಕ್ತಿಭಾವದಿಂದ ಮತ್ತು ವೈಭವದಿಂದ ನೆರವೇರಿತು.
ಈ ಸಂದರ್ಭದಲ್ಲಿ ಭರತನೂರಿನ ಚಿಕ್ಕಗುರುನಂಜೇಶ್ವರ ಮಹಾಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, “ಮಾನವನ ಜೀವನ ಸಾರ್ಥಕವಾಗಬೇಕಾದರೆ ಧಾರ್ಮಿಕ ಸೇವೆ ಮತ್ತು ಪುಣ್ಯಕಾರ್ಯಗಳು ಅಗತ್ಯ. ಹಲಚೇರಾ ಗ್ರಾಮದ ಜಗದೀಶ್ವರ ದೇವಾಲಯು ಈಶ್ವರನ ಅನುಗ್ರಹದಿಂದ ಜೀರ್ಣೋದ್ಧಾರ ಮಾಡಿದ ಶ್ರೀಕಾಂತ ಚೌಕಾ ಹಾಗೂ ಶ್ರೀ ಮತಿ ಸಾವಿತ್ರಿ ಚೌಕಾ ಪರಿವಾರದ ಧಾರ್ಮಿಕ ಸೇವೆ ಶ್ಲಾಘನೀಯ” ಎಂದು ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಿವಾನಂದ ಮಾನಕಾರ ವೇದಿಕೆ ಮೇಲೆ ಇದ್ದರು.
ಹಲಚೇರಾ ಗ್ರಾಮದ ಮಣ್ಣಿನಲ್ಲಿ ಜನ್ಮ ತಾಳಿದ ಸಿದ್ದಪ್ಪ ಚೌಕ ಮತ್ತು ಅವರ ಧರ್ಮಪತ್ನಿ ಸುಭದ್ರಬಾಯಿ ದಂಪತಿಗಳ, ಹಾಗೂ ಹಲಚೇರಾ ಗ್ರಾಮದ ಭಕ್ತರು ಮತ್ತು ಸುತ್ತಮುತ್ತಲಿನ ಗ್ರಾಮದ ಭಕ್ತರ ಕನಸು, ತಮ್ಮ ಊರಿನಲ್ಲಿ ಶಿಥಿಲಗೊಂಡ ಶಿವಲಿಂಗ ದೇವಸ್ಥಾನ ಜೀರ್ಣೋದ್ಧಾರ ಮಾಡುವುದಾಗಿತ್ತು. ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅವರು ತಮ್ಮ ಮಕ್ಕಳಿಗೆ ವಿದ್ಯೆ, ಸಂಸ್ಕಾರ, ದಾನಧರ್ಮ ಮತ್ತು ವಿನಯವನ್ನು ಬೋಧಿಸಿ ದೇಶಸೇವೆಗೆ ತೊಡಗಿಸಿದರು.
ಅವರ ಹಿರಿಯ ಪುತ್ರ ಶ್ರೀಕಾಂತ ಚೌಕಾ ಹೆಚ್ಚಿನ ಅಭ್ಯಾಸ ಮಾಡಿ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯಪಾಲಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸಮಾಜಮುಖಿ ಚಿಂತನೆ, ಧಾರ್ಮಿಕ ನಂಬಿಕೆ ಮತ್ತು ಸೇವಾ ಮನೋಭಾವ ಇವರ ವ್ಯಕ್ತಿತ್ವದ ಪ್ರಮುಖ ಲಕ್ಷಣಗಳಾಗಿವೆ. ತಂದೆ-ತಾಯಿ ಮತ್ತು ಗ್ರಾಮಸ್ಥರ ಕನಸನ್ನು ನನಸುಗೊಳಿಸುವ ದಿಸೆಯಲ್ಲಿ ಜಗದೀಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯ ಕೈಗೊಂಡು ಅದನ್ನು ಭಕ್ತರ ಸೇವೆಗೆ ಸಮರ್ಪಿಸಿದ್ದಾರೆ.
ಇವರ ಹಿರಿಯ ಪುತ್ರ ಡಾ. ಕಿರಣ ಚೌಕಾ ಕರ್ನಾಟಕದ ಪ್ರಸಿದ್ಧ ವೈದ್ಯರಾಗಿ ಹೆಸರು ಮಾಡಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದರೂ ಮಣ್ಣಿನ ನೆಲ-ಜಲದ ಬಗ್ಗೆ, ಧಾರ್ಮಿಕ ಮೌಲ್ಯಗಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾರೆ.

ಧಾರ್ಮಿಕ ಮೌಲ್ಯಗಳ ಅಗತ್ಯತೆ

ಹೊಸಳ್ಳಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು ಮಾತನಾಡಿ, “ಸಮಾಜದಲ್ಲಿ ದ್ವೇಷ, ಅಸೂಯೆ, ಹಿಂಸೆ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಪ್ರತಿಯೊಬ್ಬರಲ್ಲೂ ಧಾರ್ಮಿಕ ನಂಬಿಕೆ ಮತ್ತು ಆಧ್ಯಾತ್ಮಿಕತೆ ಅಗತ್ಯ. ಧರ್ಮದ ಮಾರ್ಗವೇ ಶಾಂತಿಯ ಮಾರ್ಗ” ಎಂದರು.
ಜವಾಹರ ಬಾಲಭವನ ಉಪಾಧ್ಯಕ್ಷ ಅನಿಲಕುಮಾರ ಜಮಾದಾರ ಅವರು, “ಭಾರತೀಯ ಸಂಸ್ಕøತಿ ಉಳಿಸಿ ಬೆಳೆಸಲು ಮಕ್ಕಳಲ್ಲಿ ಭಕ್ತಿ, ಪೂಜಾ ಸಂಸ್ಕಾರ ಬೆಳೆಸಬೇಕು. ಇಂದಿನ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ದುರ್ಬಳಕೆಯಿಂದ ಮಕ್ಕಳು ದಾರಿ ತಪ್ಪುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಉಮಾ ಪಾಟೀಲ, ಸಂಗಮೇಶ ಹೂಗಾರ, ರಮೇಶ್, ಅಶೋಕ ಮಾನಕಾರ, ರಾಜಶೇಖರ ಅಪ್ಪಾಜಿ, ಗುರುನಾಥ ವಿಂಬಡಶೆಟ್ಟಿ, ಸೋಮಶೇಖರ ಚಿಂಚೋಳಿ, ರಾಜಶೇಖರ ಗಾರಂಪಳ್ಳಿ, ರಾಜು ಹೆಬ್ಬಾಳ, ಸಿದ್ದರಾಜ ಪುಣ್ಯಶೆಟ್ಟಿ, ಜಗದೀಶ ಸಜ್ಜನ, ಜಗನ್ನಾಥ ಶೇರಿಕಾರ, ಮಲ್ಲಿನಾಥ ಪಾಟೀಲ, ಕಾಳಗಿ ಅಯ್ಯಪ್ಪ ಮಗಿ, ಅರುಣಕುಮಾರ ಪಾಟೀಲ, ಮಲ್ಲಿಕಾರ್ಜುನ ಮೇಳಕುಂದಿ, ರಮೇಶ್ ಜೇವರ್ಗಿ , ಶ್ರೀಮತಿ ಪೂಜಾ ಚೌಕಾ, ಶ್ರೀಮತಿ ಪ್ರಿಯಾಂಕಾ ಚೌಕಾ,ಡಾ. ಕಿರಣ ಚೌಕಾ,ಶರತ್ ಚೌಕಾ, ಗಂಗಾಧರ ಚೌಕಾ, ವಿಜಯಕುಮಾರ ಮೂಲಗೆ,ಡಾ ಅಶೋಕ ಜೀವಣಗಿ, ಜಗನ್ನಾಥ ಹೆಬ್ಬಾಳ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.
ಸಿದ್ದು ಚೌಕಾ ಸ್ವಾಗತಿಸಿದರು. ಗುರುನಾಥ ವಿಂಬಡಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಚನ್ನಮಲ್ಲಪ್ಪ ಮಳಖೇಡ ವಂದಿಸಿದರು.
ಈ ಕಳಸಾರೋಹಣ ಮಹೋತ್ಸವ ಹಲಚೇರಾ ಗ್ರಾಮದಲ್ಲಿ ಭಕ್ತಿಯ ನಾದ ಮೊಳಗಿಸಿ, ಧಾರ್ಮಿಕ ಪರಂಪರೆಯ ಮಹತ್ವವನ್ನು ಮತ್ತೊಮ್ಮೆ ಸಾರಿತು. ಶ್ರೀಕಾಂತ ಚೌಕಾ ಪರಿವಾರ ಹಾಗೂ ಗ್ರಾಮಸ್ಥರ ಸೇವೆ
ಮುಂದಿನ ಪೀಳಿಗೆಗೆ ಮಾದರಿಯಾಗಿದೆ.