
ಕಲಬುರಗಿ,ಅ.24-ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕರುಗಳ ಮೂಲಕ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳ ಸ್ಥಿತಿಗತಿಗಳ ಮಾಹಿತಿ ಸಂಗ್ರಹಿಸುವ
ಜಂಟಿ ಸುತ್ತೋಲೆ ಹಿಂಪಡೆಯುವಂತೆ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕರ ಮುಖಾಂತರ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ.
2025 ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿಗಾವಹಿಸುವ ಉದ್ದೇಶದಿಂದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ
ಸಂಸ್ಥೆಗಳಲ್ಲಿ (ಆIಇಖಿ) ಸೇವೆ ಸಲ್ಲಿಸುತ್ತಿರುವ ಹಿರಿಯ ಉಪನ್ಯಾಸಕರ ಮೂಲಕ ಸ್ಥಳೀಯ ಪರಿಶೀಲನೆಯನ್ನು ನಡೆಸಲು ತೀರ್ಮಾನಿಸಲಾಗಿದೆ. ಆSಇಖಖಿ ಮತ್ತು ಶಾಲಾಶಿಕ್ಷಣ ಇಲಾಖೆ (ಪದವಿಪೂರ್ವ) ನಿರ್ದೇಶನಾಲಯಗಳು ಒಟ್ಟಿಗೆ ಹೊರಡಿಸಿರುವ ಈ ಜಂಟಿ ಸುತ್ತೋಲೆ ಪದವಿಪೂರ್ವ ಶಿಕ್ಷಣದ ಆಸ್ಮಿತೆ, ಗೌರವ ಮತ್ತು ಶೈಕ್ಷಣಿಕ ತತ್ವಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
Àಸುತ್ತೋಲೆಯಲ್ಲಿ ಡಯಟ್‍ನ ಹಿರಿಯ ಉಪನ್ಯಾಸಕರು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ವಾಸ್ತವವಾಗಿ ಡಯಟ್‍ನಲ್ಲಿ ಇರುವ ಹುದ್ದೆ ಉಪನ್ಯಾಸಕರ ಹುದ್ದೆ ಅಲ್ಲ ಅದು ಪ್ರಶಿಕ್ಷಕರ ಹುದ್ದೆ. ಅವರ ಸಾಮಾನ್ಯ ವಿದ್ಯಾರ್ಹತೆ ಃSಛಿ/ಃಂ ಃಇಜ. ಪ್ರೌಢಶಾಲಾ ಮುಖ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಡಯಟ್‍ನಲ್ಲಿ ಉಪನ್ಯಾಸಕರ ಹುದ್ದೆ ಇರುವುದಿಲ್ಲ. ಅವರನ್ನು ಖಿeಚಿಛಿheಡಿ ಇಜuಛಿಚಿಣoಡಿ ಅಂದರೆ ಪ್ರಶಿಕ್ಷಕ ಎಂದು ಸಂಬೋಧನೆ ಮಾಡುತ್ತಾರೆ. ಅವರು ವಿಷಯಕ್ಕೆ ಸಂಬಂಧಪಟ್ಟಂತೆ ವಿಷಯಾಧಾರಿತ ಬೋಧನಾ ಪದ್ಧತಿ ಪಾಠ ಮಾಡುತ್ತಾರೆ ವಿನಹಃ ಅವರಿಗೆ ಪದವಿಪೂರ್ವ ಶಿಕ್ಷಣದ ವಿಷಯಕ್ಕೆ ಸಂಬಂಧಪಟ್ಟಂತೆ (10+2) ಯಾವುದೇ ಆಳವಾದ ಜ್ಞಾನ ಇರುವುದಿಲ್ಲ. ಪದವಿಪೂರ್ವ ಶಿಕ್ಷಣ ಹಂತವು ಶಾಲಾ ತರಬೇತಿಯ ವಿಸ್ತರಣೆ ಅಲ್ಲ. ಅದು ವೈಜ್ಞಾನಿಕ ಆಧಾರಿತ ಸ್ಪರ್ಧಾತ್ಮಕ ಹಾಗೂ ರಾಷ್ಟ್ರಮಟ್ಟದ ಪಠ್ಯಕ್ರಮ.
ಆIಇಖಿ ಉಪನ್ಯಾಸಕರಿಗೆ ಪದವಿಪೂರ್ವ ಪಠ್ಯಕ್ರಮ ವೈಜ್ಞಾನಿಕ ಹಿನ್ನೆಲೆ ಓಅಇಖಖಿ ಆಧಾರಿತ ವಿಷಯದ ವ್ಯಾಪ್ತಿ ಹಾಗೂ ಆಳವಾದ ಕಲ್ಪನೆಗಳ ಕುರಿತ ಅರಿವು ಇರುವುದಿಲ್ಲ. ಡಯಟ್ ಉಪನ್ಯಾಸಕರ ಕನಿಷ್ಠ ವಿದ್ಯಾರ್ಹತೆ: ಃSಛಿ/ಃಂ,ಃಇಜ ಜೊತೆಗೆ ಪ್ರೌಢಶಾಲಾ ಮುಖ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಬಹಳಷ್ಟು ಪ್ರಶಿಕ್ಷಕರಿಗೆ ಸ್ನಾತಕೋತ್ತರ ಪದವಿ ಓಇಖಿ|Sಐಇಖಿ/ಒPhiಟ, Phಆ ಪದವಿ ಇರುವುದಿಲ್ಲ. ಇನ್ನು ಡಯಟ್‍ನ ಪ್ರಶಿಕ್ಷಕರು ಪ್ರೌಢಶಾಲೆಯಲ್ಲಿ ಸೀನಿಯರ್ ಅಸಿಸ್ಟೆಂಟ್ ಟೀಚರ್ ಹುದ್ದೆಯಿಂದ ಬಡ್ತಿ ಪಡೆದು ಡಯಟ್‍ನ ಪ್ರಶಿಕ್ಷಕರ ಹುದ್ದೆಗೆ ವರ್ಗಾವಣೆಗೊಂಡಿರುತ್ತಾರೆ. ಇವರು ಡಯಟ್‍ನಲ್ಲಿ
ಅಂದಿನ ಖಿಅಊ, ಆಇಜ. ಇಂದು ಆಐಇಆಗೆ ಪಾಠ ಮಾಡಲು ಮಾತ್ರ ಅರ್ಹತೆ ಹೊಂದಿದ್ದಾರೆ. ಡಯಟ್ ಪ್ರಶಿಕ್ಷಕರಿಗೆ ಏಂಕಿಂಂಅ ಪ್ರಾಥಮಿಕ ಶಿಕ್ಷಣ ಹಾಗೂ ಮಾಧ್ಯಮಿಕ ಶಿಕ್ಷಣದ ಶಿಕ್ಷಕರಿಗೆ ತರಬೇತಿ ನೀಡುವುದು ಮಾತ್ರ ಅವರ ವ್ಯಾಪ್ತಿಗೆ ಬರುತ್ತದೆ. ಪದವಿಪೂರ್ವ ಶಿಕ್ಷಣದ ಗಣಿತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗಣಕವಿಜ್ಞಾನ ವಿಷಯಕ್ಕೆ ಸಂಬಂಧಪಟ್ಟಂತೆ ಪರಿಕಲ್ಪನೆ ಇರುವುದಿಲ್ಲ.ವಿಷಯದ ಮೂಲಭೂತ ಅರಿವಿಲ್ಲದವರು, ವಿಜ್ಞಾನ ಪೂರ್ಣ ದೃಷ್ಟಿಕೋನವಿಲ್ಲದವರು ಪದವಿಪೂರ್ವ ಮಟ್ಟದ ಉಪನ್ಯಾಸಕರ ಬೋಧನೆ ಪ್ರಾಯೋಗಿಕತೆ ಹಾಗೂ ಪಠ್ಯ ಮೌಲ್ಯವನ್ನು ಹೇಗೆ ಪರಿಶೀಲಿಸಬಲ್ಲರು? ಈ ಮೇಲಿನ ಎಲ್ಲಾ ಸಕಾರಣಗಳಿಂದಾಗಿ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ ದಿನಾಂಕ 18-10-2025 ರಂದು ಹೊರಡಿಸಿರುವ ಸುತ್ತೋಲೆಯನ್ನು ಈ ಕೂಡಲೇ ಹಿಂಪಡೆಯುವಂತೆ ಸೂಚಿಸಿ ಮಾನ್ಯ ನಿರ್ದೇಶಕರು ಶಾಲಾಶಿಕ್ಷಣ ಇಲಾಖೆ (ಪದವಿಪೂರ್ವ) ಮತ್ತು ನಿರ್ದೇಶಕರು ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ (ಆSಇಖಖಿ), ಬೆಂಗಳೂರು ಇವರಿಗೆ ನಿರ್ದೇಶನ ನೀಡಬೇಕು. ಇಲ್ಲವಾದರೆ ಯಾವುದೇ ಅನ್ಯಮಾರ್ಗವಿಲ್ಲದೆ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರುಗಳ ಸಂಘದಿಂದ
ತೀವ್ರತರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಸಂಘದ ಕಾರ್ಯಾಧ್ಯಕ್ಷರಾದ ನಿಂಗೇಗೌಡ ಎ.ಹೆಚ್, ವೆಂಕಟೇಶ ಎಸ್.ಆರ್, ಪ್ರಧಾನ ಕಾರ್ಯದರ್ಶಿ ಶಿವರಾವ ಬಿ.ಮಾಲಿಪಾಟೀಲ, ಕೋಶಾಧ್ಯಕ್ಷ ಜಯಣ್ಣ, ಸುರೇಶ್ ಅಕ್ಕಣ್ಣ, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳುಂಡಗಿ, ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಿರಾಜದಾರ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಜಿ ಮಲ್ಲಪ್ಪ, ಕಾರ್ಯದರ್ಶಿ ನರಸಪ್ಪ ರಂಗೋಲಿ ಕಾರ್ಯದರ್ಶಿ
ಶರಣಗೌಡ ಪಾಟೀಲ್ ಪ್ರಾಂಶುಪಾಲರುಗಳಾದ ಬುರ್ಲಿ ಪ್ರಹ್ಲಾದ,ಉಮೇಶ್ ಅಷ್ಟಗಿ, ರಾಜು ಗಂಗಾಧರ್, ಶ್ರೀಶೈಲ್ ಬೋನಾಳ, ಸುಜಾತ ಎಂ, ದೇವನಗೌಡ ಪಾಟೀಲ್ ಜಗಪ್ಪ ಹೊಸಮನಿ, ದಶರಥ ರಾಠೋಡ್, ಬಿಸಿ
ಚವ್ಹಣ್ ಚಂದ್ರಶೇಖರ್ ದೊಡ್ಡಮನಿ ಮಾಪಣ್ಣಜಿರೋಳಿ ಪಾಂಡು ಎಲ್ ರಾಠೋಡ್ ಮುಂತಾದವರು ಉಪಸ್ಥಿತರಿದ್ದರು.





























