
ಚಿಂಚೋಳಿ,ಮಾ.1: ಇಲ್ಲಿನ ತಹಸೀಲ್ ಕಾರ್ಯಾಲಯ ಆವರಣದಲ್ಲಿ ಪರಿಶಿಷ್ಟ ಜಾತಿ( ಬಲ ) ಸಮಾಜ ತಾಲೂಕ ಸಮಿತಿ ವತಿಯಿಂದ ಒಳಮೀಸಲಾತಿ ರೋಸ್ಟರ ವಿವಾದ ಹಾಗೂ ರೋಸ್ಟರ ಕೋಷ್ಠಕದಲ್ಲಾಗಿರುವ ತಪ್ಪುಗಳು ಪ್ರವರ್ಗ ಬಿ ಮತ್ತು ಸಿ ಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದಲೆ ಹೊರಗಿಟ್ಟಂತೆ ಕಾಣುತ್ತಿದ್ದು ಸರ್ಕಾರವು ಕೊಡಲೆ ಇದನ್ನು ಸರಿಪಡಿಸಿ ಬಿ ಮತ್ತು ಸಿ ಪ್ರವರ್ಗಗಳಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿ ತಹಸೀಲ್ದಾರವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು
ಪ್ರತಿಭಟನೆ ಉದ್ದೇಶಿಸಿ ಪರಿಶಿಷ್ಟ ಜಾತಿ (ಬಲ) ಸಮಾಜ ತಾಲೂಕ ಸಮಿತಿಯ ಕಾರ್ಯದರ್ಶಿ ಗೌತಮ್ ಬೋಮ್ಮನಳ್ಳಿ, ಅವರು ಮಾತನಾಡಿ ಮೀಸಲಾತಿ ವರ್ಗಿಕರಣವನ್ನು ಮಾಡಲು ಅಧಿಕಾರವನ್ನು ರಾಜ್ಯಗಳಿಗೆ 2024 ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು ಪರಿಶಿಷ್ಟ ಜಾತಿ ಪಟ್ಟಿಯೊಳಗಿನ 101 ಸಮುದಾಯಗಳ ಮದ್ಯ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಅಸಮಾನತೆಗಳು ನಿಖರವಾಗಿ ಅಸ್ತಿತ್ವದಲ್ಲಿದ್ದರೆ ರಾಜ್ಯ ಸರ್ಕಾರವು ಈ ಅಸಮಾನತೆಗಳನ್ನು ಹೋಗಲಾಡಿಸಲು ಒಳಮೀಸಲಾತಿ ಜಾರಿಗೆ ತರುವ ಎನ್ನುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟಿನ 9 ಜನರ ನ್ಯಾಯಾಧೀಶರಿದ್ದ ಪೀಠವು ಆದೇಶ ಹೊರಡಿಸಿತ್ತು ಆದರೆ ಒಳ ಮೀಸಲಾತಿ ಜಾರಿಗೊಳಿಸುವ ಪ್ರಕ್ರಿಯೆಯಲ್ಲಿ ಸುಪ್ರೀಂ ಕೋರ್ಟ್ ಕೆಲವು ಮಾರ್ಗಸೂಚಿಗಳನ್ನು ನೀಡಿತ್ತು ಆದರೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೊಳಿಸಲು 101 ಸಮುದಾಯಗಳ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಅಧ್ಯಯನ ಮಾಡಲು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ರವರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಲಾಯಿತು ಈ ಆಯೋಗವು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಸರ್ಕಾರವು ಅದನ್ನು ಕ್ಯಾಬಿನೇಟಿನಲ್ಲಿ ಚರ್ಚಿಸಿ ಅನಂತರ ಕೆಲವು ತಿದ್ದುಪಡಿಗಳೊಂದಿಗೆ ಪರಿಶಿಷ್ಟ ಜಾತಿಗಳನ್ನು ಪ್ರವರ್ಗ ಎ.ಬಿ.ಸಿ ಎಂದು ವರ್ಗಿಕರಿಸಿ ಗೆಜೇಟ್ ಅಧಿಸೂಚನೆಯನ್ನು ಹೊರಡಿಸಿತ್ತು ಅವಕಾಶ ವಂಚಿತ ಸಮುದಾಯಗಳಿಗೆ ಅವಕಾಶ ಕಲ್ಪಿಸುವುಧು ಅಸಮಾನರಿಗೆ ಸಮಾನ ಅವಕಾಶ ಕಲ್ಪಿಸಲು ಡಾ ಬಿ ಆರ್ ಅಂಬೇಡ್ಕರವರ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಉದ್ದೇಶವಾಗಿತ್ತು ಆದರೆ ಈ ನೀತಿ ರೂಪಿಸುವಾಗ ಒಳ್ಳೆ ಉದ್ದೇಶವಿದ್ದರು ಅನುಷ್ಠಾನಗೊಳಿಸುವ ಹಂತದಲ್ಲಾಗುತ್ತಿರುವ ತಾಂತ್ರಿಕ ತೊಂದರೆಗಳಿAದಾಗಿ ಅದು ಸಾಮಾಜಿಕ ಅಸಮಾನತೆಗೆ ಕಾರಣವಾಗುತ್ತಿದೆ ಒಳಮೀಸಲಾತಿ ಜಾರಿಯಾದ ಮೇಲೆ ರೋಸ್ಟರ ಬಿಂದುವಿನಲ್ಲಿ ಇರುವ ನ್ಯೂನ್ಯತೆಗಳನ್ನು ಪ್ರವರ್ಗ ಬಿ ಮತ್ತು ಸಿ ರವರಿಗೆ ಮರಣಶಾಸನವಾಗಿದ್ದು ಕೂಡಲೆ ಸರ್ಕಾರ ಸರ್ಕಾರ ಹಿಂಪಡೆಯಬೇಕು ಪ್ರವರ್ಗ ಎ ಬಿ ಸಿ ರವರಿಗೆ ಸಮಾನ ಅವಕಾಶ ಕಲ್ಪಿಸುವಂತ ಕಾಯ್ದೆಯನ್ನು ರೂಪಿಸಬೇಕು ಮತ್ತು ಒಳಮೀಸಲಾತಿಗೆ ಅನ್ವಯಿಸುವ ರೋಸ್ಟರಬಿಂದುವನ್ನು ಪರಿಷ್ಕರಿಸಿ ಸರಿಪಡಿಸಬೇಕು ಪ್ರವರ್ಗ ಎ ಬಿ ಸಿ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಒಳಮೀಸಲಾತಿ ವರದಿಯ ಸಮಸ್ಯೆಯು ಬಗೆಹರಿಯುವತನಕ ಪ್ರಸ್ತುತ ಶೈಕ್ಷಣಿಕ ವರಯ ಮತ್ತು ಉದ್ಯೋಗಕ್ಕೆ ಅನ್ವಯಿಸುತ್ತಿರುವ ಒಳಮೀಸಲಾತಿಯ ಕಾರ್ಯ ಚಟುವಟಿಕೆಗಳನ್ನು ಶೀಘ್ರವೇ ತಡೆಹಿಡಿಯಬೇಕು ಹೊಸ ಜಾತಿ ಪ್ರಮಾಣ ಪತ್ರ ವಿತರಿಸುವುದನ್ನು ತುರ್ತಾಗಿ ನಿಲ್ಲಿಸಿ ಹಳೆ ಜಾತಿ ಪ್ರಮಾಣ ಪತ್ರವನ್ನು ಮುಂದುವರಿಸಬೇಕು ಒಳಮೀಸಲಾತಿಯ ಗೊಂದಲಗಳನ್ನು ಹಾಗೂ ನ್ಯೂನ್ಯತೆಗಳನ್ನು ಪರಿಹರಿಸುವತನಕ ಹಳೇ ಮಿಸಲಾತಿ ಅನ್ವಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಹೇಳಿದರು ಪ್ರತಿಭಟನೆಯಲ್ಲಿ ಪರಿಶಿಷ್ಟ ಜಾತಿ (ಬಲ) ಸಮಾಜ ತಾಲೂಕ ಸಮಿತಿಯ ಸಂಚಾಲಕರಾದ ರೇವಣಸಿದ್ದಪ್ಪ ಸುಬೆದಾರ್, ಮುಖಂಡರಾದ ಮಾರುತಿ ಗಂಜಗೇರಿ, ಆನಂದ್ ಟೈಗರ್, ಅಮರ ಲೋಡ್ಡನೂರ್, ಚೇತನ್ ನಿರಾಳಕರ, ಪಾಂಡುರAಗ ಲೋಡ್ದನೊರ್, ಓಮನರಾವ್ ಕೊರವಿ, ಆರ್, ಗಣಪತರಾವ,
ರಾಜು ಎಲಕಪಳ್ಳಿ, ವಿವೇಕ್ ಗಂಗನ್, ಗೈಬಣ್ಣ ವಾಲಿಕಾರ, ರಾಜಶೇಖರ್ ಮೌರ್ಯ, ರಾಜಶೇಖರ್ ಹೊಸಮನಿ, ವಿಶ್ವನಾಥ್ ವಾಲಿಕಾರ ದಸ್ತಾಪುರ, ಮಾರುತಿ ಕೊಳ್ಳುರ್, ಕಾಶೀನಾಥ್ ಶಿಂದೆ, ಜಗನಾಥ್ ಡಾಕ್ಟರ್, ಸತೀಶ್ ದೇಗಲ್ಮಡಿ, ಮನೋಹರ್ ಕೊರವಿ, ಪ್ರೇಮಕುಮಾರ್ ಗಾರಂಪಳ್ಳಿ, ದೇವೇಂದ್ರಪ್ಪ ಜಾಬೀನ್, ಜಗನ್ನಾಥ್ ಗಂಜಗೇರಿ, ರಮೇಶ್ ಕುಸರಂಪಳ್ಳಿ, ಜೈಭೀಮ್ ಹೊಲ್ಕರ್, ಸಂಜು ಸಾಸರಗಾವ್, ಬಸವರಾಜ್ ಶಿರಸಿ, ರಘು ದಳಪತಿ, ಗೌತಮ್ ಇತಪುರ, ಅಭಿಜಿತ್ ಕೊರವಿ, ಆನಂದ್ ಗುರಂಪಳ್ಳಿ, ಹಾಗೂ ಸಮಾಜದ ಯುವಕರು ವಿದ್ಯಾರ್ಥಿಗಳು ಭಾಗವಹಿಸುದರು



























