
ಜೇವರಗಿ,ಏ 3: ತಾಲೂಕಿನ ಜನಿವಾರ ಶಾಲೆಯ ಮಕ್ಕಳಿಗೆ ನೀರಿನ ವ್ಯವಸ್ಥೆ ಮಾಡಲು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕ ಸಂಘಟನಾ ಸಂಚಾಲಕ ಸಿದ್ದು ಶರ್ಮ ಆಗ್ರಹಿಸಿದ್ದಾರೆ. ಜನಿವಾರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕುಡಿಯುವ ನೀರಿನ ಅಭಾವ ಇರುವದರಿಂದ ಬೊರವೆಲ್ ಹಾಕಿ ನೀರಿನ ಅನುಕೂಲ ಮಾಡಿಕೊಡಲು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕ ಶಾಖೆ ಗಮನಕ್ಕೆ ತಂದಿದೆ ಆದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ ಸಮಸ್ಯೆ ಬಗೆಹರಿಯದಿದ್ದರೆ ಉಗ್ರವಾದ ಹೋರಾಟ ಮಾಡಲಾಗುದು ಎಂದು ಹೇಳಿದರು. ಜಿಲ್ಲಾ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಖಜಾಂಚಿ ಮಲ್ಲಣ್ಣ ಕೊಡಚಿ ಮಾತನಾಡಿದರು. ಈ ಬಗ್ಗೆ ತಹಶೀಲ್ದಾರ್ ಮಲ್ಲಣ್ಣ ಯಲಗೋಡ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದೇವಿಂದ್ರ ವರ್ಮಾ, ಶಿವಶರಣಪ್ಪ ಮಾರಡಗಿ, ರಾಜು ಹಾಲಗಡ್ಲ ಬಾಲಣ್ಣ ಕೊಬ್ಬಿನ ಗುರಲಿಂಗಪ್ಪ ಗುಡೂರ ಉಪಸ್ಥಿತರಿದ್ದರು.




















