
ಚೆನೈ, ಫೆ.೨೭- ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಉಚ್ಚಾಟಿತ ಎಐಎಡಿಎಂಕೆ ನಾಯಕ ಓ ಪನ್ನೀರ್ ಸೆಲ್ವಂ ಅವರು ದೀರ್ಘ ಕಾಲದ ಎಐಎಡಿಎಂಕೆ ನಂಟು ಕಡಿತ ಮಾಡಿಕೊಂಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷಕ್ಕೆ ಇಂದು ಸೇರ್ಪಡೆಯಾಗಿದ್ದು ಹೊಸ ರಾಜಕೀಯ ಮನ್ವಂತರಕ್ಕೆ ವೇದಿಕೆ ಸಜ್ಜಾಗಿದೆ.
ತಮಿಳುನಾಡು ವಿಧಾನಸಭೆಗೆ ಕೆಲವೇ ತಿಂಗಳಲ್ಲಿ ಚುನಾವಣೆಯ ನಡೆಯಲಿರುವ ಹಿನ್ನೆಲೆಯಲ್ಲಿ ಓ ಪನ್ನೀರ ಸೆಲ್ವಂ ಅವರ ಡಿಎಂಕೆ ಪಕ್ಷ ಸೇರ್ಪಡೆ ಮಹತ್ವ ಪಡೆದುಕೊಂಡಿದೆ. ಈ ಮೂಲಕ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ವಿರುದ್ಧ ವಿಧಾನಸಭೆ ಚುನಾವಣೆಯಲ್ಲಿ ತಿರುಗಿ ಬೀಳಲು ಅಖಾಡ ಸಜ್ಜಾಗಿದೆ.
ಮಾಜಿ ಮುಖ್ಯಮಂತ್ರಿ ಓ ಪನ್ನಿರ್ ಸೆಲ್ವಂ ಅವರು ಬೆಂಬಲಿಗರೊಂದಿಗೆ ಹಲವು ಸುತ್ತಿನ ಸಮಾಲೋಚನೆಗಳನ್ನು ನಡೆಸಿದ ಆಡಳಿತಾರೂಢ ಡಿಎಂಕೆಗೆ ಸೇರಿದ್ದಾರೆ.
ಚೆನ್ನೈನಲ್ಲಿರುವ ಡಿಎಂಕೆ ಪ್ರಧಾನ ಕಚೇರಿಯಲ್ಲಿ ಅವರನ್ನು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪಕ್ಷಕ್ಕೆ ಔಪಚಾರಿಕವಾಗಿ ಬರಮಾಡಿಕೊಂಡರು.
ಎಐಎಡಿಎಂಕೆ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಓ ಪನ್ನಿರ್ ಸೆಲ್ವಂ ಡಿಎಂಕೆ ಸೇರಿದ್ದು ಈ ನಡೆ ರಾಜಕೀಯ ರಾಜಕೀಯ ಧೃವೀಕರಣಕ್ಕೆ ಕಾರಣವಾಗಲಿದೆ ಎನ್ನಲಾಗಿದೆ.
ತಮಿಳುನಾಡಿನ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಮತ್ತು ಮಾಜಿ ಎಐಎಡಿಎಂಕೆ ಮುಖ್ಯಸ್ಥೆ ಜೆ. ಜಯಲಲಿತಾ ಅವರ ದೀರ್ಘಕಾಲೀನ ನಿಷ್ಠಾವಂತರಾಗಿದ್ದ ಓ ಪನ್ನೀರ ಸೆಲ್ವಂ ಅವರು ೨೦೧೬ ರಲ್ಲಿ ಅವರ ಮರಣದ ನಂತರ ಪಕ್ಷದೊಳಗೆ ತೀವ್ರವಾದ ಅಧಿಕಾರ ಹೋರಾಟಕ್ಕೆ ಸಿಲುಕಿದ್ದರು.
ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರೊಂದಿಗಿನ ಅವರ ಪೈಪೋಟಿ ಎಐಎಡಿಎಂಕೆಯಲ್ಲಿ ವಿಭಜನೆಗೆ ಕಾರಣವಾಯಿತು, ಅಂತಿಮವಾಗಿ ಓ ಪನ್ನೀರ ಸೆಲ್ವಂ ಅವರು ಸಾಂಸ್ಥಿಕ ನಿಯಂತ್ರಣ ಮತ್ತು ರಾಜಕೀಯ ನೆಲೆಂ ಕಳೆದುಕೊಂಡಿದ್ದರು ಇದೀಗ ವಿಧಾನಸಭೆ ಚುನಾವಣೆಗೂ ಮುನ್ನ ಡಿಎಂಕೆಗೆ ಸೇರಿದ್ದಾರೆ.
ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಪರಂಪರೆಯ ನಿಜವಾದ ಉತ್ತರಾಧಿಕಾರಿ ಎಂದು ತಮ್ಮನ್ನು ತಾವು ಸ್ಥಾಪಿಸಿಕೊಂಡರು ಅವರ ಬಣವು ಗಮನಾರ್ಹ ರಾಜಕೀಯ ಸಂಘರ್ಷದಿಂದ ಹೊರ ಬರಲು ಸಾಧ್ಯವಾಗಲಿಲ್ಲ.
ಇತ್ತೀಚೆಗೆ, ಓ ಪನ್ನೀರ ಸೆಲ್ವಂ ೨೦೨೬ ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷದೊಂದಿಗೆ ಮತ್ತೆ ಒಂದಾಗಲು ಇಚ್ಛೆ ವ್ಯಕ್ತಪಡಿಸಿದ್ದರು.
ಡಿಎಂಕೆಗೆ ಸೇರ್ಪಡೆಗೊಳ್ಳುವ ಮುನ್ನ, ಪನ್ನೀರ್ ಸೆಲ್ವಂ ತಮ್ಮ ಸಾರ್ವಜನಿಕ ಹೇಳಿಕೆಗಳ ಮೂಲಕ ನಿಷ್ಠೆಯಲ್ಲಿ ಬದಲಾವಣೆಯ ಬಗ್ಗೆ ಬಲವಾದ ಸುಳಿವು ನೀಡಿದ್ದರು. ಇತ್ತೀಚೆಗೆ, ಡಿಎಂಕೆ ೨೦೨೬ ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಉಳಿಸಿಕೊಳ್ಳಲು ಮತ್ತು ಸತತ ಎರಡನೇ ಅವಧಿಗೆ ಸರ್ಕಾರ ರಚಿಸುವ ಬಲವಾದ ಅವಕಾಶ ಹೊಂದಿದೆ ಎಂದು ಹೇಳಿದ್ದಾರೆ.
ಸ್ಟಾಲಿನ್ ನಾಯಕತ್ವ ಒಪ್ಪಿ ಸೇರ್ಪಡೆ
ಡಿಎಂಕೆ ನಾಯಕ ಹಾಗೂ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ನಾಯಕತ್ವವನ್ನು ಒಪ್ಪಿ ಡಿಎಂಕೆ ಗೆ ಸೇರ್ಪಡೆ ಆಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಹೇಳಿದ್ದಾರೆ.
ದ್ರಾವಿಡ ಚಳವಳಿ ಉಳಿಸಲು, ದ್ರಾವಿಡರ ನೀತಿ ಉಳಿಸಲು, ಡಿಎಂಕೆ ಕೆಲಸ ಮಾಡುತ್ತಿದೆ” ಹೀಗಾಗಿ ಡಿಎಂಕೆ ಸೇರಿದ್ದೇನೆ ಎಂದಿದ್ದಾರೆ
ಪಕ್ಷದ ಪ್ರಧಾನ ಕಚೇರಿ ಅಣ್ಣಾ ಅರಿವಲಯಂನಲ್ಲಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸಮ್ಮುಖದಲ್ಲಿ ಸೇರ್ಪಡೆ ಬಳಿಕ ಮಾತನಾಡಿದ ಅವರು ಸ್ಟಾಲಿನ್ ಜನರಿಗೆ ಉತ್ತಮ ಆಡಳಿತ ನೀಡುತ್ತಿದ್ದಾರೆ ಮತ್ತು ಜನರು ಅದನ್ನು ಗಮನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಡಿಎಂಕೆಗೆ ಕಾರ್ಯಕರ್ತರಾಗಿ ಸೇರಿದ್ದೇನೆ. ನಾನು ಪಕ್ಷದ ಕಾರ್ಯಕರ್ತರಲ್ಲಿ ಒಬ್ಬನಾಗಿ ಪಕ್ಷದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ
ದಕ್ಷಿಣದ ಯಾವುದೇ ನಾಯಕರು ಬಲಿಷ್ಠರಾಗದಂತೆ ನೋಡಿಕೊಳ್ಳುವುದು ಎಡಪ್ಪಾಡಿ ಪಳನಿಸ್ವಾಮಿ ಉದ್ದೇಶವಾಗಿದೆ ಆರೋಪಿಸಿದ್ದಾರೆ.
ಸಚಿವ ಪಿ ಕೆ ಶೇಖರಬಾಬು ಅವರು ಪನ್ನೀರ್‌ಸೆಲ್ವಂ ಅವರೊಂದಿಗೆ ಅದೇ ಕಾರಿನಲ್ಲಿ ಕಾಣಿಸಿಕೊಂಡಿದ್ದು ಪಕ್ಷದ ಸಂಘಟಿತ ನಡೆಯ ಸೂಚಕವಾಗಿದೆ
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಎಐಎಡಿಎಂಕೆ ಉಚ್ಚಾಟಿತ ನಾಯಕರಾದ ಎಐಎಡಿಎಂಕೆ ಮುಖ್ಯಸ್ಥ ಟಿಟಿವಿ ದಿನಕರನ್ ಅವರನ್ನು ಎನ್‌ಡಿಎಗೆ ಸ್ವಾಗತಿಸಿದ ನಂತರ ಡಿಎಂಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಓಪಿಎಸ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.






























