ಮದುವೆ ಮೆರವಣಿಗೆಯಲ್ಲಿ ಮಾರಕಾಸ್ತ್ರ ಹಿಡಿದು ಡ್ಯಾನ್ಸ್

ಕಲಬುರಗಿ,ಫೆ.24-ಮದುವೆ ಮೆರವಣಿಗೆಯಲ್ಲಿ ಕೆಲವರು ಕೈಯಲ್ಲಿ ಚಾಕು ಮತ್ತು ತಲವಾರ ಹಿಡಿದು ಡ್ಯಾನ್ಸ್ ಮಾಡಿರುವ ಘಟನೆ ಇಲ್ಲಿನ ಶಕ್ತಿ ನಗರದಲ್ಲಿ ನಡೆದಿದೆ.
ಕೈಯಲ್ಲಿ ಮಾರಕಾಸ್ತ್ರ ಹಿಡಿದು ಡ್ಯಾನ್ಸ್ ಮಾಡಿದಲ್ಲದೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.
ಈ ಸಂಬಂಧ ಆರೋಪಿಗಳ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.