ಮಾನವೀಯ ಮೌಲ್ಯಗಳನ್ನು ಬೆಳೆಸಿ: ಪಟ್ಟಣ್ ಶೆಟ್ಟರ್

ಕಲ್ಬುರ್ಗಿ:ಸೆ.27: ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು, ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಅಮೂಲ್ಯವಾದದ್ದು ಎಂದು ನಾಡಿನ ಶ್ರೇಷ್ಠ ಶಿಕ್ಷಣ ತಜ್ಞರು, ಸಮಾಜ ಸೇವಾ ಭೂಷಣ ಪ್ರಶಸ್ತಿ ಪುರಸ್ಕøತರಾದ ಹಾಗೂ ರಾಜ್ಯದ ಪ್ರತಿಷ್ಠಿತ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿಗಳಾದ ಪೆÇ್ರಫೆಸರ್ ಎಸ್ ಎಸ್ ಪಟ್ಟಣ್ ಶೆಟ್ಟರ್ ಹೇಳಿದರು. ಅವರು ಗದಗ ನಗರದ
ಡಿ. ಸಿ. ಪಾವಟೆ ಶಿಕ್ಷಣ ಮಹಾವಿದ್ಯಾಲಯದಲ್ಲಿ 2023-25 ಸಾಲಿನ ಪ್ರಶಿಕ್ಷಣಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದೀಪದಾನ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದ ಅವರು
ಮಕ್ಕಳ ಶೈಕ್ಷಣಿಕ ಮತ್ತು ಬೌದ್ಧಿಕ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಬಹು ಮಹತ್ವದ್ದು. ಪಾಠಭ್ಯಾಸದ ಜೊತೆಯಲ್ಲಿ ಉತ್ತಮ ಸಂಸ್ಕಾರ ಮಾನವೀಯ ಮೌಲ್ಯಗಳನ್ನು ಕಲಿಸಿ ಆದರ್ಶಮಯವಾಗಿ ಬೆಳೆಯಲು ಪೆÇ್ರೀತ್ಸಾಹಿಸಿ, ದೇಶದ ಪ್ರಗತಿ ಹಾಗೂ ಜ್ಞಾನವಂತರನ್ನು ತಯಾರು ಮಾಡುವವರು ಶಿಕ್ಷಕರು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆ. ಎಲ್. ಇ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎ. ಕೆ. ಮಠ ರವರು “ವಿದ್ಯಾರ್ಥಿಗಳು ಅತ್ಯುನ್ನತ ಸ್ಥಾನವನ್ನು ಪಡೆಯಬೇಕಾದರೆ
ಮಾನಸಿಕವಾಗಿ ಸದೃಢರಾಗಿರಬೇಕು” ಎಂದು ಪ್ರಶಿಕ್ಷಣಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಪ್ರಾಚಾರ್ಯರಾದ ಎಸ್. ಪಿ. ಗೌಳಿ ರವರು “ಉತ್ತಮ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಜವಾಬ್ದಾರಿಗಳ” ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ 2023-24 ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರಶಿಕ್ಷಣಾರ್ಥಿಗಳಾದ ಕು. ಭಾರತಿ ಕೋಳೂರ ಹಾಗೂ ಕು. ಕಾವ್ಯಾ ಮೊರಬರಡ್ಡಿ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಹಾಗೂ ಬಸವಯೋಗ ಮಹಾವಿದ್ಯಾಲಯದ ಪ್ರಾಚಾರ್ಯರಾದ ಕೆ. ಎಸ್. ಪಲ್ಲೇದ ರವರು ಬಸವೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೆ. ವಿ. ಕೋರಡ್ಡಿರವರು ಬಸವೇಶ್ವರ
ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಎಂ. ಕೆ. ಬಂಡಿಹಾಳರವರು, ಬಸವೇಶ್ವರ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್. ಆರ್. ಗಿಡ್ಡ ಕೆಂಚಣ್ಣನವರ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರ್ಥನೆಯನ್ನು ಕು. ವಿದ್ಯಾ ಹಾಗೂ ಗೌರಿ ನೆರವೇರಿಸಿದರು. ಸ್ವಾಗತ ಹಾಗೂ ಪುಷ್ಪಾರ್ಪಣೆಯನ್ನು ಕು. ರೇಖಾ ರಾಮವಾಡಗಿ, ಅತಿಥಿಗಳ ಪರಿಚಯವನ್ನು ಕು. ಅಂಜಲಿ ಬೇಲೇರಿ, ಪ್ರಾಸ್ತಾವಿಕ ನುಡಿಗಳನ್ನು ಡಾ. ಜಿ. ಎಸ್. ಹಸಬಿ ನೆರವೇರಿಸಿದರು. ವರದಿ ವಾಚನವನ್ನು ಶ್ರೀಮತಿ. ಎಮ್.ವಾಯ್.ಸೈದಾಪೂರ ಹಾಗೂ ಬಹುಮಾನ ವಿತರಣೆಯನ್ನು ಪಿ. ವಿ. ಮುರಗಿ ರವರು ನಡೆಸಿಕೊಟ್ಟರು ಕಾರ್ಯಕ್ರಮದ ನಿರೂಪಣೆಯನ್ನು ಕು. ದರ್ಶನ ಕೊಂಡಿಕೊಪ್ಪ ಮತ್ತು ಕು. ಕಾವ್ಯಾಶ್ರೀ ಗಾಣಿಗೇರ ನೆರವೇರಿಸಿದರು ಕು. ಅಶ್ವಿನಿ ಪೂಜಾರ ವಂದಿಸಿದರು.