
ಕಲಬುರಗಿಫೆ.11: ಜನ ಶಿಕ್ಷಣ ಸಂಸ್ಥಾನ್ ಹಾಗೂ ಕಲಬುರಗಿ ಕೇಂದ್ರ ಕಾರಾಗೃಹದ ಸಂಯುಕ್ತಾಶ್ರಯದಲ್ಲಿ ಕಾರಾಗೃಹದ ಬಂದಿ ನಿವಾಸಿಗಳಲ್ಲಿ ಪತ್ರಿ ತಂಡಕ್ಕೆ 20 ಜನ ಶಿಬಿರಾರ್ಥಿಗಳನ್ನು ಆಯ್ಕೆ ಮಾಡಿ ಕ್ರೀಯೇಟಿವ್ ಸಾಫ್ಟ್ ಟಾಯ್ಸ್ ಮೇಕರ್ (ಅಡವಾನ್ಸ್) 45 ದಿನಗಳ ವರೆಗೆ ನಡೆಯುವ ಈ ತರಬೇತಿಯ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜನ ಶಿಕ್ಷಣ ಸಂಸ್ಥಾನ್‍ನಿರ್ದೇಶಕ ಸುರೇಂದ್ರ ಪಾಟೀಲ್, ಮಾತನಾಡುತ್ತಾ, ನಮ್ಮ ಸಂಸ್ಥೆ ವತಿಯಿಂದ ಇಲ್ಲಿ ಪ್ರಾರಂಭದಲ್ಲಿ ಪ್ರತಿ ತಂಡಕ್ಕೆ 20 ಶಿಬಿರಾರ್ಥಿಗಳಂತೆ ವಿವಿಧ ವೃತ್ತಿಪರ ಕೌಶಲ್ಯ ತರಬೇತಿಗಳನ್ನು ನೀಡುತ್ತೇವೆ. ನಿರಂತರವಾಗಿ ತರಬೇತಿಗಳನ್ನು ನೀಡುವ ಮುಖಾಂತರ ಬಂದಿ ನಿವಾಸಿಗಳು ತರಬೇತಿಯ ಲಾಭ ಪಡೆದು ಸ್ವಯಂ ಉದ್ಯೋಗದ ಮುಖಾಂತರ ತಮ್ಮ ಜೀವನದ ಕಾಯಕಲ್ಪವನ್ನು ಕಟ್ಟಿಕೊಳ್ಳುವುದಕ್ಕೆ ಸಹಾಯವಾಗುತ್ತದೆಂದು ಹೇಳಿದರು.
ಸಂಸ್ಥೆಯ ಅಧೀಕ್ಷಕ ರಾಕೇಶ್ ಕಾಂಬಳೆ, ಮಾತನಾಡುತ್ತಾ, ಕಾರಾಗೃಹದ ಬಂದಿ ನಿವಾಸಿಗಳ ಸುಧಾರಣೆಗೋಸ್ಕರ ಬಂದಿಗಳನ್ನು ವಿವಿಧ ರೀತಿಯ ಆಯಾಮಗಳಲ್ಲಿ ತೊಡಗಿಸಿ ಅವರು ಕಾರಾಗೃಹದಿಂದ ಬಿಡುಗಡೆ ಹೊಂದಿ ಸಮಾಜದಲ್ಲಿ ತಲೆ ಎತ್ತಿ ಬದುಕುವುದಕ್ಕೆ ಬೇಕಾದ ವಾತಾವರಣವನ್ನು ಕಾರಾಗೃಹದಲ್ಲಿ ನಿರ್ಮಾಣ ಮಾಡಿ ತರಬೇತಿಗಳನ್ನು ನೀಡಲಾಗುತ್ತಿದೆ. ಬಂದಿಗಳು ಉತ್ತಮ ವ್ಯಕ್ತಿಯಾಗಿ ಹೊರಗಡೆ ಹೋಗಿ ಮನಃ ಪರಿವರ್ತನೆಯೊಂದಿಗೆ ಕುಟುಂಬದವರೊಡನೆ ಸೇರಿ ಸ್ವಾವಲಂಬನೆ ಬದುಕನ್ನು ನಡೆಸಲು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಕೆ. ಸುರೇಶ್ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ತರಬೇತಿಯ ಶಿಬಿರಾರ್ಥಿಗಳು ತರಬೇತಿಯನ್ನು ಪಡೆದು ಸಮಾಜ ಮುಖ್ಯ ವಾಹಿನಿಯಲ್ಲಿ ನೀವುಗಳು ಸ್ವಾವಲಂಬಿಯಾಗಿ ಬದುಕನ್ನು ನಡೆಸುವುದಕ್ಕೆ ಈ ತರಬೇತಿಗಳು ನಿಮಗೆ ಸಹಾಯ ಮಾಡುತ್ತೇವೆ. ಏಕೆಂದರೆ ಜೈಲಿನಿಂದ ಬಂದವರು ಎಂಬ ಭಾವನೆಯನ್ನು ಸಮಾನ್ಯವಾಗಿ ಜನರಲ್ಲಿ ಮನೆ ಮಾಡಿರುತ್ತದೆ. ಹಾಗಾಗಿ ಅವರು ನಿಮ್ಮನ್ನು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಹಿಂಜರಿಯುತ್ತಾರೆ. ಅದಕ್ಕೆ ತಾವುಗಳು ಕಾರಾಗೃಹದಲ್ಲಿ ನೀಡುವ ವೃತ್ತಿಪರ ತರಬೇತಿಗಳನ್ನು ಪಡೆದುಕೊಂಡು ಸಮಾಜದಲ್ಲಿ ಸ್ವಯಂ ಉದ್ಯೋಗವನ್ನು ಕಲ್ಪಿಸಿಕೊಂಡು ಉತ್ತಮವಾಗಿ ಬದುಕನ್ನು ನಡೆಸಲು ಹೇಳಿದರು.
ಈ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಾಗಿ ಆಗಮಿಸಿದ ರಾಜಶೇಖರ್ ಪಾಟೀಲ್, ಸಂಸ್ಥೆಯ ಸಹಾಯಕ ಅಧೀಕ್ಷಕ ಬಿ. ಸುರೇಶ್ ಹಾಗೂ ಜೈಲರ್ ವೃಂದದವರು ಭಾಗವಹಿಸಿದರು. ಸ್ವಾಗತವನ್ನು ಭೀಮಾಶಂಕರ್ ಡಾಂಗೆ ನಡೆಸಿಕೊಟ್ಟರು.ಕಾರ್ಯಕ್ರಮದ ನಿರೂಪಣೆಯನ್ನು ಸಂಸ್ಥೆಯ ಶಿಕ್ಷಕ ನಾಗಾರಾಜ ಮುಲಗೆ ನೇರವೆರಿಸಿದರು. ವಂದಾರ್ಪಣೆಯನ್ನು ಚನ್ನಪ್ಪ ಯಟಗಲ್ ನಡೆಸಿಕೊಟ್ಟರು.





















