
ಕೋಲಾರ,ಮಾ,೩೧- ಮಧ್ಯ ಪ್ರಾಚ್ಯ ದೇಶಗಳ ಯುದ್ದದ ನಂತರ ಭಾರತದಲ್ಲಿ ಅಡುಗೆ ಸಿಲಿಂಡರ್ ಬೇಡಿಕೆ ತೀವ್ರವಾಗಿದೆ. ಅದರಲ್ಲೂ ವಿಶೇಷವಾಗಿ ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ ಅಡುಗೆ ಅನಿಲದ ಬೇಡಿಕೆ ತೀವ್ರವಾಗಿದೆ. ದಿನ ನಿತ್ಯ ಗ್ರಾಹಕರು ಅನಿಲದ ಏಜೆನ್ಸಿಗಳ ಕಚೇರಿಗೆ, ಅನಿಲ ದಾಸ್ತನು ಮಳಿಗೆ ಬಳಿ ತಿರುಗಾಡುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ.
ಕೆಲ ಪ್ರದೇಶಗಳಲ್ಲಿ ಜನರು ಸಾಮಾನ್ಯ ಸಮಯದಲ್ಲಿ ಈ ಮುನ್ನ ಮಾಡುತ್ತಿದ್ದ ಬುಕಿಂಗ್ ಬದಲು ಮುಂಚಿತವಾಗಿ ಸಿಲಿಂಡರ್ ಬುಕ್ ಮಾಡುತ್ತಿರುವುದರಿಂದ ಬುಕಿಂಗ್ ಸಂಖ್ಯೆ ಹೆಚ್ಚಾಗಿ ಕೃತಕ ಅಭಾವ ಕಂಡು ಬರುತ್ತಿದೆ ಎಂದು ಹೇಳಲಾಗಿದೆ.
ಈ ಕಾರಣದಿಂದ ಆನ್ ಲೈನ್ ಹಾಗೂ ಐವಿಆರ್‌ಎಸ್ ಬುಕ್ಕಿಂಗ್ ವ್ಯವಸ್ಥೆಗೂ ಒತ್ತಡ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಅದರೆ ಕೆಲ ನಗರಗಳಲ್ಲಿ ಮಾತ್ರ ಈ ಬೇಡಿಕೆ ಹೆಚ್ಚಾಗಿರಲು ಕಾರಣವೇನೂ ಎಂಬುವುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ. ಬುಕ್ಕಿಂಗ್ ಮಾಡಿದ ಕೆಲವೇ ಗಂಟೆಗಳಲ್ಲಿ ( ೨೪ ಗಂಟೆಯ ಒಳಗೆ ) ಸಿಲಿಂಡರ್ ಡಿಲಿವರಿ ಕೊಡುತ್ತಿದ್ದ ಏಜೆನ್ಸಿಗಳು ಈಗಾ ಸಿಲಿಂಡರ್ ಬುಕ್ಕಿಂಗ್ ಬೇಡಿಕೆಯಷ್ಟು ಪೂರೈಕೆಯಾಗದ ಕಾರಣ ವಿಳಂಭವಾಗುತ್ತಿದೆ ಎಂದು ತಿಳಿಸಿದೆ.
. ಹೊಸ ನಿಯಮದ ಪ್ರಕರ ಎಲ್.ಪಿ.ಜಿ. ಸಿಲಿಂಡರ್ ನಿಮಗೆ ಡಿಲಿವರಿ ಆಗಿದ್ದ ದಿನಾಂಕದಿಂದ ೨೫ ದಿನ ಅಂತರದ ನಂತರ ಸಿಲಿಂಡರ್ ಬುಕಿಂಗ್ ಅಗುವುದಾಗಿ ಇದು ಮ್ಯಾನೂಯಲ್ ಅಲ್ಲ ಎಲ್ಲವೂ ಆನ್‌ಲೈನ್ ವ್ಯವಸ್ಥೆ ಮಾಡಲಾಗಿದೆ. ಈ ಮೊದಲು ನಮ್ಮ ಬಳಿ ಸಿಲಿಂಡರ್ ದಾಸ್ತನು ಇರುತ್ತಿತ್ತು ಆಗಾ ನಮ್ಮ ಬೇಡಿಕೆ ಇದ್ದಷ್ಟು ಪೂರೈಕೆಯಾಗುತ್ತಿತ್ತು. ಯುದ್ದ ಪ್ರಾರಂಭದ ನಂತರ ಬೇಡಿಕೆಯ ಶೇ ೩೦ ರಷ್ಟು ಪೂರೈಕೆಯಾಗುತ್ತಿರುವುದರಿಂದ ಸಮಸ್ಯೆಗಳು ಉಂಟಾಗಿದೆ ಎನ್ನಲಾಗಿದೆ.
೨೬ ದಿನದ ನಂತರ ನಿಮ್ಮ ಬುಕಿಂಗ್ ಆದಾಗ ನಿಮಗೆ ಡಿ.ಓ.ಸಿ. ಸಂಖ್ಯೆ ಇರುವುದಿಲ್ಲ ಬುಕಿಂಗ್ ಅದಾ ಮೇಲೆ ಅದರಲ್ಲಿ ಜೇಷ್ಠತೆ ಆದಾರದ ಮೇಲೆ ವಿತರಣೆಯಾಗುತ್ತದೆ. ನಿಮ್ಮ ಬುಕಿಂಗ್ ಬಿಲ್ ಅಗಿ ಡಿ.ಓ.ಸಿ. ಸಂಖ್ಯೆ ಬರಲು ಸುಮಾರು ೧೦ ರಿಂದ ೧೫ ದಿನಗಳಾಗುತ್ತದೆ ಇದಾದ ನಂತರ ಒಂದೆರಡು ದಿನದಲ್ಲಿ ಡಿಲಿವರಿ ನೀಡುತ್ತೇವೆ ಎನ್ನುತ್ತಾರೆ. ಅಂದರೆ ನಿಮಗೆ ಸಿಲಿಂಡರ್ ಸಿಗುವುದು ಒಟ್ಟಾರೆಯಾಗಿ ೪೫ ದಿನಗಳಾಗುತ್ತದೆ. ೪೫ ದಿನಕ್ಕೆ ಒಂದು ಸಿಲಿಂಡರ್ ಪೂರೈಕೆ ಮಾಡಿದರೆ ದೊಡ್ಡ ಸಂಖ್ಯೆ ಕುಟುಂಬಗಳ ಪಾಡೇನೂ ? ಒಂದು ಸಿಲಿಂಡರ್ ೨೦ ರಿಂದ ೨೫ ದಿನಗಳು ಬಳಕೆಯಾಗುತ್ತಿದ್ದವರು ತೀವ್ರ ಸಂಕಷ್ಟಕ್ಕೆ ಪರದಾಡುವಂತಾಗಿದೆ
ಗ್ರಾಹಕರು ಅಗತ್ಯವಿದ್ದಾಗ ಮಾತ್ರ ಸಿಲಿಂಡರ್ ಬುಕಿಂಗ್ ಮಾಡಬೇಕು ಅನಾವಶ್ಯಕವಾಗಿ ಮುಂಚಿತವಾಗಿ ಬುಕ್ ಮಾಡುವುದರಿಂದ ಬೇಡಿಕೆ ಹೆಚ್ಚಾಗಿ ಡಿಲಿವರಿ ತಡವಾಗುತ್ತದೆ ಅದುವರೆಗೆ ಗ್ರಾಹಕರು ಶಾಂತರೀತಿಯಿಂದ ಸಹಕಾರ ನೀಡಬೇಕು. ಯಾರೂ ಗ್ಯಾಸ್ ಏಜೆನ್ಸಿ ಕಚೇರಿ ಬಳಿ ಹೋಗಬಾರದು ಸಿಲಿಂಡರ್ ದಾಸ್ತನು ಮಳಿಗೆ ಬಳಿ ಹೋಗಬಾರದು ಎಂಬ ಸಲಹೆಗಳು ನೀಡುತ್ತಿದೆ. ಗ್ಯಾಸ್ ಸಿಲಿಂಡರ್‌ಗಳ ಪೊರೈಕೆಯಲ್ಲಿ ಯಾವೂದೇ ವ್ಯತ್ಯಾಸವಾಗಿಲ್ಲ ಎಂಬ ರೆಡಿ ಮೇಡ್ ಹೇಳಿಕೆಗಳನ್ನು ಸರ್ಕಾರ ನೀಡುತ್ತಿದೆ.
ಅದರೆ ಪ್ರತಿ ಗ್ರಾಹಕರು ಗ್ಯಾಸ್ ಸಿಲಿಂಡರ್ ಪೂರೈಕೆಗೆ ಕನಿಷ್ಟ ೪೦ ರಿಂದ ೪೫ ದಿನಗಳು ಕಾಯ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಏಕೆಂದರೆ ಈ ಮೊದಲು ಗೃಹ ಬಳಕೆಯ ಸಿಲಿಂಡರ್‌ಗಳಿಗೆ ಸಬ್ಸಿಡಿ ಇರುವುದರಿಂದ ಕಡಿಮೆ ಬೆಲೆಗೆ ಸಿಗುತ್ತಿದ್ದ ಹಿನ್ನಲೆಯಲ್ಲಿ ವಾಣಿಜ್ಯ ಬಳಕೆಗೆ ಬಹುತೇಕ ನಕಲಿ ಗೃಹ ಬಳಿಕೆದಾರರಿಂದ ಬುಕಿಂಗ್ ಅಗುತ್ತಿದ್ದವು. ವಾಣಿಜ್ಯ ಬಳಕೆಯ ಸಿಲಿಂಡರ್ ಹಾಗೇ ಉಳಿಯುತ್ತಿದ್ದವು. ಈಗಾ ಯುದ್ದದ ಹಿನ್ನಲೆಯಲ್ಲಿ ಸಿಲಿಂಡರ್ ಪೂರೈಕೆ ಕಡಿಮೆಯಾಗಿರುವುದರಿಂದ ಹೋಟೆಲ್ ಉದ್ಯಮಿಗಳಿಗೆ ಭಾರಿ ಸಮಸ್ಯೆಯಾಗಿದೆ. ನಕಲಿ ಗೃಹ ಬಳಕೆ ಗ್ರಾಹಕರಿಂದ ಹೆಚ್ಚಾಗಿ ಬುಕಿಂಗ್ ಅಗುತ್ತಿರುವುದರಿಂದ ನೈಜ ವಾಸೋಪಾಯೋಗಿ ಗೃಹ ಬಳಿಕೆದಾರರಿಗೆ ಸಮಸ್ಯೆಯಾಗಿದೆ.
ಕೆಲವಡೆ ಗೃಹ ಬಳಕೆಯ ಸಿಲಿಂಡರ್ ನಿಂದ ವಾಣಿಜ್ಯ ಬಳಿಕೆಯ ಸಿಲಿಂಡರ್‌ಗೆ ರಿಫೀಲ್ ಮಾಡುವ ಮೂಲಕ ದುಬಾರಿ ಬೆಲೆಗೆ ಮಾರಾಟ ಮಾಡುವ ಧಂದೆಗಳು ಜಿಲ್ಲೆಯ ವಿವಿಧಡೆ ನಡೆಯುತ್ತಿದ್ದವು ಕೆಲವಡೆ ದಾಳಿ ಮಾಡಿದ ನಂತರ ಇದಕ್ಕೆ ಕಡಿವಾಣ ಬಿದ್ದಿದ್ದರೂ ಕದ್ದು ಮುಚ್ಚಿ ನಡೆಯುತ್ತಿದೆ ಎಂಬುವುದು ಗೃಹ ಬಳಕೆದಾರರ ಆರೋಪವಾಗಿದೆ.
ಅಲ್ಲದೆ ಇತ್ತೀಚೆಗೆ ಗ್ಯಾರೆಂಟಿ ಯೋಜನೆಯಲ್ಲಿ ಮನೆ ಯಜಮಾನಿಗೆ ೨ ಸಾವಿರ ರೂ ನೀಡಲಾಗುವುದು ಎಂಬ ಸರ್ಕಾರದ ಘೋಷಣೆಯ ನಂತರ ಒಂದೇ ಮನೆಯಲ್ಲಿ ವಾಸವಿದ್ದರೂ ಎರಡು ಮೂರು ಪಡಿತರ ಚೀಟಿ ಗಳು ಮಾಡಿ ಕೊಂಡು ಮನೆಯ ಡೋರ್ ಸಂಖ್ಯೆಗೆ ಸಬ್ ನಂಬರ್ ಹಾಕಿಸಿ ಕೊಂಡು ೨ ಸಾವಿರ ರೂ ಕಬಳಿಸಲಾಗುತ್ತಿತ್ತು. ಇದರ ಜೂತೆಗೆ ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಾಣಿಜೋದ್ಯಮಿಗಳಿಗೆ ಮಾರಾಟ ಮಾಡುವಂತ ಲಾಭಾದಾಯಕ ದಂಧೆಗಳು ನಡೆಯುತ್ತಿದ್ದವು. ಈಗಾ ಅದಕ್ಕೆ ಕಡಿವಾಣ ಬಿದ್ದು ಉದ್ಯಮಿಗಳು ಹೋಟೆಲ್ ಇತ್ಯಾದಿಗಳಿಗೆ ಬೀಗ ಜಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾಗಾಗಿ ಈಗಾ ಗೃಹ ಬಳಕೆಯ ಸಿಲಿಂಡರ್‌ಗಳಿಗೆ ಬುಕಿಂಗ್ ಹೆಚ್ಚಾಗಿದೆ ನೈಜ ಗೃಹ ಬಳಿಕೆದಾರರಿಗೆ ಸಿಲಿಂಡರ್ ಸಿಗದೆ ಸಮಸ್ಯೆಯಾಗಿದೆ ಅದರೆ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ. ಈ ಸಂಬಂಧವಾಗಿ ವಿಶೇಷವಾದ ತಂಡವನ್ನು ರಚಿಸಿ ತನಿಖೆ ನಡೆಸಿದರೆ ನಕಲಿ ಗೃಹ ಬಳಕೆ ಗ್ರಾಹಕರ ಅಸಲಿ ಬಂಡವಾಳ ಬೆಳಕಿಗೆ ಬರಲಿದೆ ಎಂಬುವುದ ಪ್ರಜ್ಞಾವಂತ ಗ್ರಾಹಕರ ವಾದವಾಗಿದೆ.
























