
ಕಲಬುರಗಿ,ಏ 12: ನಗರದ ಜೇವರ್ಗಿ ರಸ್ತೆಯಲ್ಲಿರುವ ಅಕ್ಕಮಹಾದೇವಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ಸಂಯುಕ್ತ ಆಶ್ರಯದಲ್ಲಿ ಚುನಾವಣೆಗಳಲ್ಲಿ ಹಣಬಲ ನಿಯಂತ್ರಿಸಿ- ಪ್ರಜಾಪ್ರಭುತ್ವ ಉಳಿಸಿ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಪ್ರಾಂಶುಪಾಲ ಡಾ. ಮೊರಗೆ ಪ್ರಕಾಶ ಮಾತನಾಡುತ್ತಾ, ಇಂಥ ಕಾರ್ಯಕ್ರಮಗಳು ನಿರಂತರವಾಗಿ ಸಮಾಜದಲ್ಲಿ ನಡೆದಾಗ ಸಮಾಜದಲ್ಲಿ ಜಾಗೃತಿ ಉಂಟಾಗುತ್ತದೆ. ವಿಚಾರ ಸಂಕಿರಣದಲ್ಲಿ ಅತ್ಯದ್ಭುತವಾಗಿ ಮಾತನಾಡಿದ ವಿದ್ಯಾರ್ಥಿಗಳನ್ನು ಉಲ್ಲೇಖಿಸಿ ಮಾತನಾಡುತ್ತಾ ಇಂದಿನ ವಿದ್ಯಾರ್ಥಿಗಳಲ್ಲಿ ಅಗಾಧವಾದ ಪ್ರತಿಭೆ ಇದ್ದು ಅದನ್ನು ಹೊರ ತರುವ ಕೆಲಸ ನಾವು ಮಾಡಬೇಕಾಗಿದೆ ಎಂದರು.
ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕ ಡಾ. ಸಂತೋಷ ಹು0ಪ್ಲಿ,ಸಿಬ್ಬಂದಿ ಘಟಕದ ಕಾರ್ಯದರ್ಶಿ ಡಾ.ಎಸ್.ವಿ.ಬಿರಾದಾರ ಮಾತನಾಡಿದರು. ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ಸಂಸ್ಥಾಪಕ ರಮೇಶ .ಆರ್.ದುತ್ತರಗಿ ಪ್ರಾಸ್ತಾವಿಕ ಮಾತನಾಡಿದರು. ನಂತರ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ವಿದ್ಯಾರ್ಥಿನಿಯರಾದ ಸುಜಾತಾ, ರಕ್ಷಿತಾ, ಐಶ್ವರ್ಯ, ಜಯಶ್ರೀ, ಸೃಷ್ಟಿ, ಅಂಕಿತಾ, ಅತ್ಯುತ್ತಮವಾಗಿ ವಿಚಾರ ಮಂಡಿಸಿದ್ದಕ್ಕಾಗಿ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು.ವಿಜಯಲಕ್ಷ್ಮಿ ಸ್ವಾಗತಿಸಿದರು.ಐಶ್ವರ್ಯ ಪ್ರಾರ್ಥನೆ ಗೀತೆ ಹಾಡಿದರು.ಹಸನಾ ಬೇಗಮ್ ವಂದನಾರ್ಪಣೆ ಮಾಡಿದರು.ಮಾಣಿಕೇಶ್ವರಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ (ಬಿ ) ಯೂನಿಟ್ ಸಂಯೋಜಕರಾದ ಡಾ.ಮೀನಾಕ್ಷಿ, ಉಪನ್ಯಾಸಕರಾದ ಹನುಮಂತು ಜಯಲಕ್ಷ್ಮಿ ಹನುಮಂತು ಪಾಟೀಲ ಜಯಶ್ರೀ, ಪೂಜಾ, ಬಸವರಾಜೇಶ್ವರಿ ಉಪಸ್ಥಿತರಿದ್ದರು.




















