
ಕಲಬುರಗಿ,ಮಾ.28: ನಗರದ ಶ್ರೀವಿಶ್ವನಾಥರೆಡ್ಡಿ ಮುದ್ನಾಳ ಪದವಿ ಮಹಾವಿದ್ಯಾಲಯದಲ್ಲಿ, ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ವತಿಯಿಂದ ಚುನಾವಣೆಗಳಲ್ಲಿ ಹಣಬಲ ನಿಯಂತ್ರಿಸಿ-ಪ್ರಜಾಪ್ರಭುತ್ವ ಉಳಿಸಿ ರಾಷ್ಟ್ರೀಯ ವಿಚಾರ ಸಂಕಿರಣ ವನ್ನು ಹಮ್ಮಿಕೊಳ್ಳಲಾಯಿತು.
ಗುಲ್ಬರ್ಗ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥ ಪೆÇ್ರ. ಲಕ್ಷ್ಮಣ್ ರಾಜನಾಳಕರ್, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ದೇಶದಲ್ಲಿ ಚುನಾವಣೆಗಳು ಮುಕ್ತ ಹಾಗೂ ಪಾರದರ್ಶಕವಾಗಿ ನಡೆದಾಗ ಮಾತ್ರ ಸರ್ಕಾರಗಳು ಒಳ್ಳೆಯ ರೀತಿಯಲ್ಲಿ ಪ್ರಾಮಾಣಿಕವಾಗಿ ಅಭಿವೃದ್ಧಿ ಮಾಡಲಿಕ್ಕೆ ಸಾಧ್ಯ. ಚುನಾವಣೆಗಳಲ್ಲಿ ಹಣಬಲ ಹೆಚ್ಚುತ್ತಾ ಹೋದಂತೆ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಹೆಚ್ಚುತ್ತಾ ಹೋಗುತ್ತದೆ. ಜವಾಬ್ದಾರಿಯುತ ಯುವಕರ ಮೇಲೆ ನಮ್ಮ ಮುಂದಿನ ದೇಶದ ಭವಿಷ್ಯ ಅಡಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಬಸವರಾಜ ಮಠಪತಿ ಮಾತನಾಡುತ್ತಾ ಪ್ರತಿಯೊಬ್ಬ ಯುವಕರು ಇವತ್ತು ತಾವು ಮಾತನಾಡಿದ್ದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮುಖಾಂತರ ತಾವು ಒಬ್ಬ ಒಳ್ಳೆಯ ನಾಗರಿಕರಾಗಿ,ಒಳ್ಳೆಯ ಮತದಾರರಾಗಿ ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು. ಯುವಕರುಪ್ರಶ್ನೆ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು. ವಿಚಾರ ಸಂಕಿರಣದಲ್ಲಿ ಅತ್ಯುತ್ತಮವಾಗಿ ವಿಚಾರ ಮಂಡಿಸಿದ ಬಿಎ ನಾಲ್ಕನೇ ಮತ್ತು ಆರನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ಮೊಹಮ್ಮದ್ ಶರೀಫ್, ಮಮಿತಾ ಅಂಬಣ್ಣ, ಸಚಿನ್ ಮಲ್ಲಿಕಾರ್ಜುನ ಶ್ರೀಕಾಂತ ಸಿದ್ದಲಿಂಗಪ್ಪ, ವಿಶಾಖ ಮಚೇಂದ್ರ, ಸುರೇಶ ರಾಥೋಡ್, ಮಾಯಾಶ್ರೀ ಬಸವರಾಜ , ವೆಂಕಟೇಶ ರಾಥೋಡ್ ಅವರನ್ನು ‘ಅಭಿನಂದನಾ ಪತ್ರ’ವನ್ನು ನೀಡಿ ಗೌರವಿಸಲಾಯಿತು.ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿಯ ಸಂಸ್ಥಾಪಕ ರಮೇಶ.ಆರ್ .ದುತ್ತರಗಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿ ಸನ್ಮತಿ ಪ್ರಾರ್ಥನೆ ಗೀತೆಹಾಡಿದರು. ಉಪನ್ಯಾಸಕವಿಜಯಕುಮಾರ ಸರಡಗಿ ನಿರೂಪಣೆಮಾಡಿದರು.ಉಪನ್ಯಾಸಕಿ ಭುವನೇಶ್ವರಿಸ್ವಾಗತಿಸಿದರು. ಲಾವಣ್ಯ ಎಸ್. ನಿರ್ಣಾ ವಂದನಾರ್ಪಣೆ ಮಾಡಿದರು.



























