
ಸೈದಾಪುರ:ಮಾ.೩:ಉತ್ತಮ ಫಲಿತಾಂಶಕ್ಕೆ ಸತತ ಪ್ರಯತ್ನ ಅತಿ ಮುಖ್ಯವಾಗಿದೆ. ಇದಕ್ಕಾಗಿ ನಮ್ಮದೆಯಾದ ವೇಳಾಪಟ್ಟಿಯೊಂದಿಗೆ ಶಿಕ್ಷಕರ ಮಾರ್ಗದರ್ಶನದಲ್ಲಿ ಪ್ರಯತ್ನ ಮಾಡಬೇಕು ಎಂದು ಡಯಟ್ ಪ್ರಾಂಶುಪಾಲ ವೃಷಬೇಂದ್ರಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಪ್ರೌಢ ಶಾಲೆಗೆ ಹಠಾತ ಭೇಟಿ ನೀಡಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿ ಮಾತನಾಡಿದರು. ಪರೀಕ್ಷೆಗೆ ಕೆಲವೇ ದಿನಗಳಿದ್ದೂ ಅದಕ್ಕೆ ಭಯ ಪಡದೆ ಸಂತೋಷದಿAದ ಪರೀಕ್ಷೆಯನ್ನು ಎದುರಿಸಿ ಇದಕ್ಕಾಗಿ ವಿಷಯವಾರು ಶಿಕ್ಷಕರ ಮಾರ್ಗದರ್ಶನ ಪಡೆದುಕೊಂಡು ಅಭ್ಯಾಸ ಮಾಡುವ ಮೂಲಕ ಶಾಲೆಗೆ ಮತ್ತು ಪೋಷಕರಿಕೆ ಹೆಸರು ತರುವ ವಿದ್ಯಾರ್ಥಿಗಳು ನಿವಾಗಬೇಕು. ಶಾಲೆಗೆ ಯಾವುದೇ ಕಾರಣಕ್ಕೂ ಗೈರು ಹಾಜರಿ ಆಗಬಾರದು. ಸತತ ಹಾಜರಿ ಇದ್ದೂ ಇಲಾಖೆ ವತಿಯಿಂದ ನೀಡಲಾದ ಮಾದರಿ ಪ್ರಶ್ನೆ ಪತ್ರಿಕೆಗಳು ಸೇರಿದಂತೆ ಇಗಾಗಲೇ ತೆಗೆದುಕೊಂಡ ಪೂರ್ವಭಾವಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ ನಿರಂತರ ಅಭ್ಯಾಸ ಮಾಡುವ ಮೂಲಕ ಜಿಲ್ಲೆಯ ಫಲಿತಾಂಶ ಹೆಚ್ಚಾಗಬೇಕು. ಇದಕ್ಕಾಗಿ ಶಿಕ್ಷಕರು ಗುಣಾತ್ಮಕ ಹಾಗೂ ಪರಿಣಾತ್ಮಕ ಗುರಿಯೊಂದಿಗೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯಗುರು ಲಿಂಗಾರಡ್ಡಿ ನಾಯಕ, ಕರಬಸಯ್ಯ ದಂಡಿಗಿಮಠ, ಗೂಳಪ್ಪ.ಎಸ್.ಮಲ್ಹಾರ, ಕಾಶೀನಾಥ ಶೇಖಸಿಂದಿ, ಸಂಗಾರೆಡ್ಡಿ ಪಾಟೀಲ, ಶಿಕ್ಷಕರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು.
ಜಿಲ್ಲೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಅನುದಾನಿತ ಶಾಲೆ ಇದಾಗಿದೆ. ಇದು ಫಲಿತಾಂಶದ ಮೇಲೂ ಪ್ರಭಾವ ಬೀರುವದರಿಂದ ಇಲ್ಲಿನ ಶಿಕ್ಷಕರ ಪ್ರಯತ್ನ ಅತಿ ಹೆಚ್ಚಿನದಾಗಿದೆ. ದಾಖಲಾತಿಗೆ ತಕ್ಕಂತೆ ಹಾಜರಾತಿ ಇರುವುದು ಸಂತಸವನ್ನುAಟು ಮಾಡಿದೆ. ಪರೀಕ್ಷೆ ಭಯ ದೂರ ಮಾಡಿ ಆತ್ಮ ವಿಶ್ವಾಸದಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತೆ ಮಾಡುವಲ್ಲಿ ಶಿಕ್ಷಕರರು ಪ್ರಯತ್ನ ಮಾಡಬೇಕು.
ವೃಷಬೇಂದ್ರಯ್ಯ ಡಯಟ್ ಪ್ರಾಂಶುಪಾಲರು ಯಾದಗಿರಿ



























