ಮನೆ ಮುಂದೆ ವಾಹನ ನಿಲುಗಡೆ ಶುಲ್ಕ ವಿಧಿಸಲು ಚಿಂತನೆ

ಬೆಂಗಳೂರು, ಫೆ. ೧೧- ಬೆಂಗಳೂರು ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಜಿಬಿಎ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ..ಈಗಾಗಲೇ ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಕೆಲ ಕಡೆ ಬಹುಮಹಡಿ ಪಾರ್ಕಿಂಗ್ ಲಾಟ್‌ಗಳನ್ನು ನಿರ್ಮಾಣ ಮಾಡೋದಕ್ಕೆ ಜಿಬಿಎ ಮುಂದಾಗಿದೆ.

ಇನ್ನೂ ಕೆಲ ರಸ್ತೆಗಳಲ್ಲಿ ಈಗಾಗಲೇ ಫೇ ಅಂಡ್ ಪಾರ್ಕ್ ವ್ಯವಸ್ಥೆ ಕೂಡ ಜಾರಿಯಾಲ್ಲಿದೆ. ಆದರೂ ಕೂಡ ಜನ ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡಿ ಸಂಚಾರಕ್ಕೆ ತೊಂದರೆ ಆಗುತ್ತಿದೆ.

ಇದಕ್ಕೆ ಕಡಿವಾಣ ಹಾಕಲು ಟ್ರಾಫಿಕ್ ಪೊಲೀಸರು ದಂಡ ವಿಧಿಸಿ ಹಣ ವಸೂಲಿ ಮಾಡಿದರು ಕೂಡ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಇನ್ನೂ ವಸತಿ ಪ್ರದೇಶದ ಕಿರಿದಾದ ರಸ್ತೆಗಳಲ್ಲಿ ದ್ವಿಚಕ್ರ ಸೇರಿದಂತೆ ಕಾರುಗಳನ್ನು ಫುಟ್ ಪಾತ್. ಮನೆ ಮುಂದೆ ವಾಹನ ಪಾರ್ಕ್ ಮಾಡಿ ಸಂಚಾರಕ್ಕೆ ಅನಾನುಕೂಲ ಹಾಕ್ತಿದೆ ಅಂತ ಸಾರ್ವಜನಿಕರು .


ಅಂಬೂಲೆನ್ಸ್ ಚಾಲಕರು


ದೂರ ನೀಡಿದರು ಯಾವುದೇ ಉಪಯೋಗ ಅಗಿಲ್ಲ..ಈ ನಿಟ್ಟಿನಲ್ಲಿ ಜಿಬಿಎಯ ಕಂದಾಯ ಇಲಾಖೆ ಹೊಸ ಪಾರ್ಕಿಂಗ್ ನೀತಿ ಜಾರಿ ಮಾಡಲು ಸಿದ್ಧತೆ ನಡೆಸಿದೆ..ಕಳೆದ ೧೦ ವರ್ಷಗಳ ಹಿಂದೆ ಕೂಡ ಯೋಜನೆ ಜಾರಿಗೆ ತರಬೇಕು ಅಂತ ಅಂದಿನ ಸರ್ಕಾರ ಚಿಂತನೆ ನಡೆಸಿತ್ತು. ಅದರೆ ಪಾಲಿಕೆ ಸದಸ್ಯರ ವಿರೋಧ ನಡುವೆ ಈ ಯೋಜನೆ ಕೈಬಿಡಲಾಗಿತ್ತು.. ಈಗ ಮತ್ತೆ ಈ ಯೋಜನೆ ಜಾರಿಗೆ ತರಲು ಜಿಬಿಎಯ ಕಂದಾಯ ಇಲಾಖೆ ಸಿದ್ದತೆ ನಡೆಸಿದೆ. ಈ ಯೋಜನೆಯಿಂದ ವಸತಿ ಪ್ರದೇಶಗಳ ರಸ್ತೆಯಲ್ಲಿ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಸಾಧ್ಯ .ಇನ್ನೂ ಹೊಸ ಮನೆಗಳು ಕಟ್ಟುವ ವೇಳೆ ಮನೆ ಮಾಲೀಕರು ಪಾರ್ಕಿಂಗ್ ಜಾಗ ಬಿಡೋದಿಲ್ಲ.

ಇದಕ್ಕೆಲ್ಲ ಬ್ರೇಕ್ ಹಾಕೋದಿಕ್ಕೆ ಹಾಗೆಯೇ ಜಿಬಿಎ ಗೆ ಆದಾಯ ಕೂಡ ಬರಲಿದೆ ಅಂತ ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರೆ..ಅದರೆ ಕಾಂಗ್ರೆಸ್ ಸರ್ಕಾರ ಈ ಯೋಜನೆ ಜಾರಿಗೆ ತರಲಿದ್ಯಾ ಅನ್ನೋ ಪ್ರಶ್ನೆ ಕಾಡುತ್ತಿದೆ..ಮುಂದಿನ ಮೂರು ತಿಂಗಳಲ್ಲಿ ೫ ನಗರಪಾಲಿಕೆ ಚುನಾವಣೆ ಬರ್ತಿದೆ. ಸದ್ಯ ಈಗಾಗಲೇ ದಿನನಿತ್ಯದ ಬಳಕೆ ವಸ್ತುಗಳ ಬೆಲೆ ಕೂಡ ಏರಿಕೆ ಅಗಿದೆ .ಈ ನಡುವೇ ಮೆಟ್ರೋ ಟಿಕೆಟ್ ಬೆಲೆ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಚುನಾವಣೆ ಸಮಯದಲ್ಲಿ ಈ ಯೋಜನೆ ಜಾರಿಗೆ ತಂದರೆ ಪಕ್ಷಕ್ಕೆ ಡ್ಯಾಮೇಜ್ ಅಗುವ ಸಾಧ್ಯತೆ ಇದೆ ಅಂತ ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಹೊಸ ಪಾರ್ಕಿಂಗ್ ವ್ಯವಸ್ಥೆ ಹೇಗಿರುತ್ತೆ

  • ಜಿಬಿಎ ಬೈಲಾ ಪ್ರಕಾರ ಪಾರ್ಕಿಂಗ್ ಫೀ ನೀತಿಯನ್ನೂ ಜಾರಿಗೆ ತರಲು ಕರಡು ಸಿದ್ಧ.
  • ಮನೆ ಕಂಪೌಂಡ್ ಒಳಗೆ ನಿಮ್ಮ ವಾಹನ ಪಾರ್ಕ್ ಮಾಡಬೇಕು.
  • ಮನೆ ಮುಂದೆ ರಸ್ತೆ. ಫುಟ್ ಪಾತ್‌ನಲ್ಲಿ ವಾಹನ ಪಾರ್ಕಿಂಗ್ ನಿಷೇಧ.
  • ಜಿಬಿಎ ಯಿಂದ ನಿಮ್ಮ ಮನೆ ಸಮೀಪದಲ್ಲಿ ಪಾರ್ಕಿಂಗ್ ವ್ಯವಸ್ಥೆ.
  • ನಿಮ್ಮ ಮನೆಯಿಂದ ಅರ್ಧ ಕಿ.ಮೀ ಒಳಗೆ ಪಾರ್ಕಿಂಗ್ ಸೌಲಭ್ಯ.
  • ಜಿಬಿಎ ಅಥವಾ ಖಾಸಗಿ ಜಾಗದಲ್ಲೆ ಪಾರ್ಕಿಂಗ್ ವ್ಯವಸ್ಥೆ.
  • ಪ್ರತಿ ತಿಂಗಳು ಪಾರ್ಕಿಂಗ್ ಗೆ ಅಂತ ಇಂತಿಷ್ಟು ಹಣ ಪಾವತಿ ಮಾಡಬೇಕು.
  • ಗೇಟ್ ಒಳಗಡೆ ಹೊರತಾಗಿ ಎಲ್ಲೇ ವಾಹನ ನಿಲ್ಲಿಸಿದರೂ ಜಿಬಿಎಗೆ ದರ ಪಾವತಿಸಬೇಕು.
  • ಒಂದು ಕಾರಿಗೆ ಮಾಸಿಕ ದರ ನಿಗದಿ ಮಾಡಲಿರುವ ಜಿಬಿಎ.
  • ಪಿಪಿಪಿ ಮಾಡೆಲ್ ನಲ್ಲಿ ಹೊಸ ನೀತಿ ಜಾರಿ ಮಾಡಲಿರುವ ಜಿಬಿಎ.
  • ಇದರಿಂದ ಟ್ರಾಫಿಕ್ ಸಮಸ್ಯೆಗೆ ಕೊಂಚ ಪರಿಹಾರದ ಜೊತೆಗೆ ಜಿಬಿಎಗೆ ಆದಾಯ.
  • ಅಲ್ಲದೆ ಹೊಸ ಕಟ್ಟಡದ ನಿರ್ಮಾಣದ ವೇಳೆ ಪಾರ್ಕಿಂಗ್ ಜಾಗ ಬಿಡುವುದು ಅನಿವಾರ್ಯ ಆಗಲಿದೆ.
  • ಒಂದು ವೇಳೆ ಬೈಲಾ ಉಲ್ಲಂಘನೆ ಮಾಡಿ ಪಾರ್ಕ್ ಮಾಡಿದರೆ ದಂಡ ಅಸ್ತ್ರ.