ಡೊಂಗರಗಾಂವ ಪ್ರೌಢ ಶಾಲೆಯ ಅಮೋಘ ಸಾಧನೆಗೆ ಹರ್ಷ

ಕಲಬುರಗಿ:ಅ.25: ಕಮಲಾಪುರ ತಾಲೂಕಿನ ಡೊಂಗರಗಾಂವ ಗ್ರಾಮದ ಸರ್ಕಾರಿ ಪ್ರೌಢಶಾಲೆ ಡೊಂಗರಗಾಂವ ಶಾಲೆಯ ವಲಯ ಮಟ್ಟದಲ್ಲಿ ಬಾಲಕರ ಕಬಡ್ಡಿ, ಬಾಲಕಿಯರು ಕಬಡ್ಡಿ ಮತ್ತು ಬಾಲಕರು ಖೋ ಖೋ ಆಟದಲ್ಲಿ ಪ್ರಥಮ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದು ವೈಯಕ್ತಿಕ ಸ್ಪರ್ಧೆಯಲ್ಲಿ ತ್ರಿವಿಧ ಜಿಗಿತದಲ್ಲಿ ಸಂಗಮೇಶ್ ತಂದೆ ವಿಜಯಕುಮಾರ್ ದ್ವಿತೀಯ ಸ್ಥಾನ 800 ಮೀಟರ್ ಓಟದಲ್ಲಿ ನಾಗೇಶ್ ತಂದೆ ಶ್ರೀನಾಥ್ ದ್ವಿತೀಯ ಸ್ಥಾನ. 1500 ಮೀಟರ್ ಓಟದಲ್ಲಿ ಗುಂಡಪ್ಪ ತಂದೆ ಪೀರಪ್ಪ ಪ್ರಥಮ ಸ್ಥಾನ. ಎತ್ತರ ಜಿಗಿತ ಓಟದಲ್ಲಿ ಕೃಷ್ಣ ತಂದೆ ಶ್ರೀಕಾಂತ್ ಪ್ರಥಮ ಸ್ಥಾನ ಪಡೆದಿರುತ್ತಾರೆ .ಈ ಎಲ್ಲಾ ಆಟಗಳಲ್ಲಿ ಭಾಗವಹಿಸಿ ಪ್ರಥಮ ದ್ವಿತೀಯ ಸ್ಥಾನ ಪಡೆದಿದ್ದಕ್ಕೆ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಸುನಿತಾ ಬಿರಾದರ್ ಹಾಗೂ ಶಾಲೆಯ ದೈಹಿಕ ಶಿಕ್ಷಕರಾದ ರವಿಚಂದ್ರ ಶಿಬಾರಿ ಹಾಗೂ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಸರ್ವ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಊರಿನ ಗಣ್ಯ ವ್ಯಕ್ತಿಗಳು ಹರ್ಷ ವ್ಯಕ್ತಪಡಿಸಿದ್ದಾರೆ ಈ ರೀತಿಯಾಗಿ ನಮ್ಮ ಶಾಲೆಯ ಮಕ್ಕಳು ವಿವಿಧ ಆಟ ಪಾಠಗಳಲ್ಲಿ ಮುಂದು ಬರಲು ಸಹಾಯವಾಗಿರುವಂತೆ ಶಾಲೆಯ ದೈಹಿಕ ಶಿಕ್ಷಕರಿಗೆ ಹಾಗೂ ಶಾಲೆ ಸಿಬ್ಬಂದಿ ವರ್ಗದವರಿಗೆ ನಮ್ಮ ಗ್ರಾಮ ಪಂಚಾಯತಿ ವತಿಯಿಂದ ತಮಗೆ ಅಭಿನಂದನೆಗಳನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ತಿಳಿಸಿದ್ದಾರೆ .ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿಗಳಾದ ಶ್ರೀಮತಿ ಶ್ರೀದೇವಿ ಸಿಂಪಿ. ಶ್ರೀಮತಿ ಅನುಸೂಯ ಇನಾಮ್ದಾರ.ಶ್ರೀಮತಿ ವಿಜಯಲಕ್ಷ್ಮೀ ಪಾಟಿಲ್. ಶ್ರೀಮತಿ ಕಾಶಿಬಾಯಿ. ಶ್ರೀಮತಿ ನೀಲಮ್ಮ. ರಾಹುಲ ಗಂಗಾ ಸೂರ್ಯಕಾಂತ. ಹಾಗೂ ದೌಲತರಾಯ ದೇಶಮುಖರವರು ಶುಭ ಹಾರೈಸಿದರು,